ETV Bharat / bharat

ದಾಖಲೆ ಬರೆದ ಇಂಡಿಗೋ, ಲಾಕ್​ಡೌನ್ ಅವಧಿಯಲ್ಲಿ ಒದಗಿಸಿದ ವಿಮಾನ ಸೇವೆಗಳೆಷ್ಟು ಗೊತ್ತಾ..?

ಇಂಡಿಗೋ ವಿಮಾನಯಾನ ಸಂಸ್ಥೆಯು ಲಾಕ್​ಡೌನ್ ಆರಂಭವಾದಾನಿಂದ ಕೆಲವೊಂದು ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದು, ಹೊಸ ದಾಖಲೆಯನ್ನು ನಿರ್ಮಿಸಿದೆ.

author img

By

Published : Nov 11, 2020, 8:08 PM IST

IndiGo
ಇಂಡಿಗೋ

ಮುಂಬೈ: ಲಾಕ್​ಡೌನ್ ಆರಂಭವಾದಾಗಿನಿಂದ ತಮ್ಮ ವಿಮಾನಯಾನ ಸಂಸ್ಥೆಯ ಕೆಲವು ನಿಗದಿತ ಸೇವೆಗಳು ಹಾಗೂ ಸರಕು ರವಾನೆ ಸೇವೆಗಳಲ್ಲಿ ಮಾತ್ರ ತೊಡಗಿಸಿಕೊಂಡಿದ್ದು, ಈವರೆಗೆ 2 ಲಕ್ಷ ವಿಮಾನ ಸೇವೆಗಳನ್ನು ಪೂರ್ಣಗೊಳಿಸಿದೆ ಎಂದು ಇಂಡಿಗೋ ಬುಧವಾರ ಮಾಹಿತಿ ನೀಡಿದೆ.

ವಾರಣಾಸಿಯಿಂದ ಹೈದರಾಬಾದ್​ಗೆ ಬುಧವಾರ 6ಇ 216 ವಿಮಾನ ಸೇವೆ ಒದಗಿಸುವ ಮೂಲಕ ಈ ದಾಖಲೆಯನ್ನು ಇಂಡಿಗೋ ಸಂಸ್ಥೆ ನಿರ್ಮಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಇಂಡಿಗೋದ ಸಿಇಒ ರೊನೊಜೊಯ್ ದತ್ತಾ 'ಎಲ್ಲಾ ವಿಮಾನಯಾನ ಸೇವೆಗಳು ರದ್ದಾಗಿನಿಂದ ನಾವು ನಿಗದಿತ ಸೇವೆಗಳಲ್ಲಿ ತೊಡಗಿಕೊಂಡಿದ್ದು, ಈ ಸಾಧನೆ ಅಭೂತಪೂರ್ವವಾಗಿದೆ' ಎಂದು ಹೇಳಿದ್ದಾರೆ.

ವಾಣಿಜ್ಯ ವ್ಯವಹಾರಗಳಿಗಾಗಿ, ಸರಕು ಸಾಗಣೆ ಸೇವೆಗಳಿಗಾಗಿ, ವಂದೇ ಭಾರತ ಮಿಷನ್ ಅಡಿಯಲ್ಲಿ ಇಂಡಿಗೋ ಕಂಪನಿಯ ವಿಮಾನಗಳನ್ನು ಬಳಸಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆಗಳನ್ನು ಮಾಡಲು ಇದು ಮೈಲಿಗಲ್ಲಾಗಿದೆ ಎಂದು ದತ್ತಾ ಅಭಿಪ್ರಾಯಪಟ್ಟಿದ್ದಾರೆ.

6 ತಿಂಗಳಲ್ಲಿ ಸುಮಾರು 2,687 ವಿಮಾನಗಳು ಇಂಡಿಗೋದಿಂದ ಕಾರ್ಯಾಚರಣೆಗೆ ಇಳಿದಿದ್ದು, ಏಪ್ರಿಲ್​​ನಿಂದ ಅಕ್ಟೋಬರ್​ವರೆಗೆ ಸುಮಾರು 23,350 ಟನ್​ ಸರಕುಗಳನ್ನು ಸಾಗಿಸಲಾಗಿದೆ ಎಂದು ಇಂಡಿಗೋ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.