ETV Bharat / bharat

ವಿಮಾನದಲ್ಲಿ ನೀಡಿದ ಸ್ಯಾಂಡ್‌ವಿಚ್‌ನಲ್ಲಿ ಹುಳು ಪತ್ತೆ; ಕ್ಷಮೆ ಯಾಚಿಸಿದ ಇಂಡಿಗೋ - ಸ್ಯಾಂಡ್‌ವಿಚ್‌ನಲ್ಲಿ ಹುಳ

ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ನೀಡಲಾಗಿದ್ದ ಸ್ಯಾಂಡ್​ವಿಚ್‌ನಲ್ಲಿ ಹುಳು ಸಿಕ್ಕಿದ್ದು, ಇಂಡಿಗೋ ಏರ್‌ಲೈನ್ಸ್ ಕ್ಷಮೆ ಕೋರಿದೆ.

A worm in a sandwich
ಸ್ಯಾಂಡ್‌ವಿಚ್‌ನಲ್ಲಿ ಹುಳ
author img

By ANI

Published : Dec 31, 2023, 12:05 PM IST

ನವದೆಹಲಿ: ತನ್ನ ಪ್ರಯಾಣಿಕರೊಬ್ಬರಿಗೆ ನೀಡಲಾಗಿದ್ದ ಸ್ಯಾಂಡ್‌ವಿಚ್‌ನಲ್ಲಿ ಹುಳು ಕಂಡುಬಂದಿರುವ ಕಾರಣಕ್ಕೆ ಇಂಡಿಗೋ ಏರ್‌ಲೈನ್ಸ್ ಶನಿವಾರ ಕ್ಷಮೆ ಯಾಚಿಸಿದೆ. ಕುಶ್ಬೂ ಗುಪ್ತಾ ಎಂಬ ಮಹಿಳೆ ಶುಕ್ರವಾರ ದೆಹಲಿಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸಿಬ್ಬಂದಿ ಸ್ಯಾಂಡ್‌ವಿಚ್‌ ನೀಡಿದ್ದರು. ಇದರಲ್ಲಿ ಹುಳು ಗೋಚರಿಸಿತ್ತು.

ಈ ವಿಚಾರವನ್ನು ಕುಶ್ಬೂ ಗುಪ್ತಾ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. "ಸ್ಯಾಂಡ್​ವಿಚ್​ನಲ್ಲಿ ಹುಳು ಪತ್ತೆಯಾಗಿರುವುದನ್ನು ಕ್ಯಾಬಿನ್​ ಸಿಬ್ಬಂದಿಗೆ ತಿಳಿಸಿದರೂ ಅವರು ಇತರ ಪ್ರಯಾಣಿಕರಿಗೆ ಸ್ಯಾಂಡ್‌ವಿಚ್‌ಗಳನ್ನು ನೀಡುವುದನ್ನು ಮುಂದುವರೆಸಿದ್ದರು. ವಿಮಾನದಲ್ಲಿ ಮಕ್ಕಳು, ವೃದ್ಧರು ಮತ್ತು ಇತರ ಪ್ರಯಾಣಿಕರೂ ಇದ್ದರು. ಈ ರೀತಿಯ ಸ್ಯಾಂಡ್​ವಿಚ್‌ನಿಂದ ಸೋಂಕು ತಗುಲಿದರೆ ಯಾರು ಜವಾಬ್ದಾರರು?. ನಿಮ್ಮ ವಿಮಾನಯಾನ ಸಿಬ್ಬಂದಿಗೆ ಯಾವ ರೀತಿಯ ತರಬೇತಿ ನೀಡಲಾಗುತ್ತಿದೆ?, ನನಗೆ ಯಾವುದೇ ಪರಿಹಾರ ಅಥವಾ ಮರುಪಾವತಿಯ ಅಗತ್ಯವಿಲ್ಲ. ಆದರೆ ಪ್ರಯಾಣಿಕರ ಆರೋಗ್ಯ ಮತ್ತು ಸುರಕ್ಷತೆ ನಿಮ್ಮ ಮೊದಲ ಆದ್ಯತೆಯಾಗಿರಬೇಕು" ಎಂದು ಅವರು ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಇಂಡಿಗೋ ಏರ್‌ಲೈನ್ಸ್, "ಕುಶ್ಬೂ ಗುಪ್ತಾ ಅವರಲ್ಲಿ ನಾವು ಕ್ಷಮೆ ಯಾಚಿಸುತ್ತಿದ್ದೇವೆ. ಈ ವಿಷಯ ತನಿಖೆಯಲ್ಲಿದೆ. ದೆಹಲಿಯಿಂದ ಮುಂಬೈಗೆ 6E 6107 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಆಗಿರುವ ಘಟನೆಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ನಾವು ಘಟನೆಯನ್ನು ಅರಿತಿದ್ದೇವೆ. ನಮ್ಮ ಆಹಾರ ವಿಭಾಗದಲ್ಲಿ ಆಹಾರ ಮತ್ತು ಪಾನೀಯ ಸೇವೆಯ ತಯಾರಿಕೆಯಲ್ಲಿ ಅತ್ಯುನ್ನತ ಗುಣಮಟ್ಟ ಕಾಪಾಡಿಕೊಳ್ಳಲು ನಾವು ಬದ್ಧ. ಈ ಘಟನೆಯ ನಂತರ ನಮ್ಮ ಸಿಬ್ಬಂದಿ ಸ್ಯಾಂಡ್‌ವಿಚ್‌ನ ಸೇವೆಯನ್ನು ತಕ್ಷಣವೇ ನಿಲ್ಲಿಸಿದ್ದಾರೆ. ನಾವು ನಮ್ಮ ಅಡುಗೆದಾರರೊಂದಿಗೆ ಆಹಾರದ ಕುರಿತು ಮಾತನಾಡಿದ್ದೇವೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಕ್ಷಮೆ ಯಾಚಿಸುತ್ತೇವೆ" ಎಂದು ತಿಳಿಸಿದೆ.

ಇದನ್ನೂ ಓದಿ: ರಾಮನ ಪ್ರಾಣ ಪ್ರತಿಷ್ಠಾಪನೆಗೆ ಛತ್ತೀಸ್‌ಗಢದಿಂದ 300 ಮೆಟ್ರಿಕ್ ಟನ್ ಅಕ್ಕಿ ರವಾನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.