ETV Bharat / bharat

ತಾಯಿಯ ಬಗ್ಗೆ ಇಂಡಿಗೋ ಗಗನಸಖಿ ವಿಶೇಷ ಉದ್ಘೋಷ: ಭಾವುಕ ಕ್ಷಣಕ್ಕೆ ಮೆಚ್ಚುಗೆಯ ಕರತಾಡನ-ವಿಡಿಯೋ

author img

By

Published : May 15, 2023, 1:32 PM IST

ವಿಶ್ವ ತಾಯಂದಿರ ದಿನಕ್ಕೆ ಇಂಡಿಗೋ ವಿಮಾನಯಾನ ಸಂಸ್ಥೆ ವಿಶೇಷ ವಿಡಿಯೋ ಹಂಚಿಕೊಂಡಿದೆ. ಇದರಲ್ಲಿ ಮಗಳು ತಾಯಿಯ ಬಗ್ಗೆ ಆಡಿದ ಹೆಮ್ಮೆಯ ಮಾತುಗಳು ಮನಮುಟ್ಟಿವೆ.

ಇಂಡಿಗೋ ಗಗನಸಖಿ ವಿಶೇಷ ಉದ್ಘೋಷ
ಇಂಡಿಗೋ ಗಗನಸಖಿ ವಿಶೇಷ ಉದ್ಘೋಷ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣ ಹಲವು ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಆದರೆ, ನಿನ್ನೆ ವಿಶ್ವ ತಾಯಂದಿರ ದಿನದಂದು ವಿಶೇಷ ಮತ್ತು ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು. ತಾಯಿ -ಮಗಳಿಬ್ಬರೂ ಇಂಡಿಗೋ ವಿಮಾನದ ಕ್ಯಾಬಿನ್​ ಸಿಬ್ಬಂದಿಯಾಗಿ ಕೆಲಸ ಮಾಡಿದ್ದು, ಮಗಳು ತನ್ನ ತಾಯಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಈ ವಿಡಿಯೋವನ್ನು ವಿಮಾನಯಾನ ಸಂಸ್ಥೆ ಟ್ವೀಟ್​ನಲ್ಲಿ ಹಂಚಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಗಗನಸಖಿ ವಿಶೇಷ ಉದ್ಘೋಷ: ಇಂಡಿಗೋ ವಿಮಾನದ ಗಗನಸಖಿಯಾದ ನಬಿರಾ ಸಶ್ಮಿ ತಾಯಿಯ ಬಗ್ಗೆ ಹೆಮ್ಮೆಯ ಮಾತನ್ನಾಡಿ ಮೆಚ್ಚುಗೆ ಗಳಿಸಿದವರು. ತಾಯಿ ಮಗಳಿಬ್ಬರೂ ನಿನ್ನೆ ಒಂದೇ ವಿಮಾನದಲ್ಲಿ ಕ್ಯಾಬಿನ್​ ಸಿಬ್ಬಂದಿಯಾಗಿದ್ದರು. ವಿಶೇಷವಾಗಿ ನಿನ್ನೆ ವಿಶ್ವ ಅಮ್ಮಂದಿರ ದಿನ. ಇದನ್ನು ಬಳಸಿಕೊಂಡ ನಬಿರಾ, ಪ್ರಯಾಣದ ವೇಳೆ ವಿಶೇಷ ಉದ್ಘೋಷ ಹೊರಡಿಸಿ ಹೆತ್ತಮ್ಮನ ಬಗ್ಗೆ ಮನದಾಳದ ಮಾತು ಹಂಚಿಕೊಂಡಿದ್ದಾರೆ.

ಮೊದಲು ತಮ್ಮನ್ನು ಪರಿಚಯಿಸಿಕೊಂಡ ನಬಿರಾ ಸಶ್ಮಿ, ಬಳಿಕ ತನ್ನ ತಾಯಿಯನ್ನು ಪರಿಚಯಿಸುವುದು ವಿಡಿಯೋದಲ್ಲಿದೆ. ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿ ಸದಸ್ಯನಾಗಿ ಸಮವಸ್ತ್ರದಲ್ಲಿ ತನ್ನ ತಾಯಿ ಜೊತೆಗೆ ಇದೇ ಮೊದಲ ಬಾರಿಗೆ ಒಟ್ಟಾಗಿದ್ದೇನೆ ಎಂದು ಅವರು ಹೇಳುತ್ತಾರೆ.

"ನನ್ನ ತಾಯಿ ಗಗನಸಖಿಯಾಗಿ, ಕ್ಯಾಬಿನ್​ ಸಿಬ್ಬಂದಿಯಾಗಿ ಎಲ್ಲಾ ಕೆಲಸಗಳನ್ನು ಮಾಡುವುದನ್ನು ನೋಡಿದ್ದೇನೆ. ಇಂದು ನಾನು ಆಕೆಯ ಬೂಟುಗಳನ್ನೇ ಧರಿಸಿ ಬಂದಿದ್ದೇನೆ. ಕಳೆದ ಆರು ವರ್ಷಗಳಲ್ಲಿ ನನ್ನಮ್ಮ ಅನೌನ್ಸ್​ಮೆಂಟ್​ನಲ್ಲಿ ಮಾತನಾಡುವುದನ್ನು ಕಂಡಿದ್ದೇನೆ. ಅಂತಿಮವಾಗಿ, ಇಂದು ನಾನು ಅವರ ಪರವಾಗಿ ಮಾತನಾಡುವ ದಿನ ಬಂದಿದೆ. ನಾವಿಬ್ಬರೂ ಒಂದೇ ವಿಮಾನದ ಸಿಬ್ಬಂದಿಯಾಗಿರುವುದು ಖುಷಿ ತಂದಿದೆ. ಇಂದಿನ ನನ್ನೆಲ್ಲಾ ಯಶಸ್ಸು ನನ್ನ ತಾಯಿಗೆ ಹೆಮ್ಮೆ ತಂದಿದೆ ಎಂದು ನಾನು ಭಾವಿಸುತ್ತೇನೆ" ಎಂದು ನಬಿರಾ ಸಶ್ಮಿ ಹೇಳುತ್ತಾರೆ.

ತನ್ನ ಬಗ್ಗೆ ಹೆಮ್ಮೆಯ ಮಾತನಾಡಿದ ಮಗಳನ್ನು ಕಂಡ ತಾಯಿ ಆನಂದಭಾಷ್ಪ ಸುರಿಸುತ್ತಾರೆ. ಬಳಿಕ ಮಗಳ ಕೆನ್ನೆಗೆ ಮುತ್ತಿಡುತ್ತಾರೆ. ಇದನ್ನು ಕಂಡ ಪ್ರಯಾಣಿಕರು ಇಬ್ಬರಿಗೂ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸುತ್ತಿರುವ ಸುಂದರ ಕ್ಷಣ ವಿಡಿಯೋದಲ್ಲಿದೆ. ಇದೇ ವೇಳೆ ವಿಮಾನದಲ್ಲಿ ಒಟ್ಟಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ವಿಮಾನ ಸಂಸ್ಥೆಗೆ ತಾಯಿ ಮಗಳಿಬ್ಬರೂ ಧನ್ಯವಾದ ಹೇಳಿದ್ದಾರೆ.

ತಾಯಿ- ಮಗಳ ಭಾವನಾತ್ಮಕ ಕ್ಷಣಗಳ ವಿಡಿಯೋವನ್ನು ಇಂಡಿಗೋ ವಿಮಾನಯಾನ ಸಂಸ್ಥೆ ಟ್ವೀಟ್​ ಮಾಡಿದೆ. ಅಲ್ಲದೇ, "ಭೂಮಿ ಮತ್ತು ಆಕಾಶದಲ್ಲಿ ಬೆನ್ನೆಲುಬಾಗಿ ನಿಂತ ಅಮ್ಮಂದಿರಿಗೆ, ವಿಶ್ವ ತಾಯಂದಿರ ದಿನದ ಶುಭಾಶಯಗಳು" ಎಂದು ಚೆಂದದ ಒಕ್ಕಣೆ ಬರೆದಿದೆ.

ನೆಟ್ಟಿಗರಿಂದ ಬಹುಪರಾಕ್​: ಇಂಡಿಗೋ ವಿಮಾನದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಅಲ್ಲದೇ, ಭಾವುಕ ಕ್ಷಣಗಳ ಕಂಡ ನೆಟ್ಟಿಗರು ಹೃದಯಸ್ಪರ್ಶಿ ಪ್ರೀತಿಗೆ ಫಿದಾ ಆಗಿದ್ದಾರೆ. "ಇದು ತುಂಬಾ ಸಂತೋಷದ ದಿನ. ನಿಮ್ಮಿಬ್ಬರ ವೃತ್ತಿಜೀವನಕ್ಕೆ ಶುಭ ಹಾರೈಕೆಗಳು" ಎಂದು ಬಳಕೆದಾರರೊಬ್ಬರು ಬರೆದುಕೊಂಡರೆ, "ನಾನು ಇದನ್ನು ನೋಡುತ್ತಾ ಕಣ್ಣೀರು ಹಾಕಿದೆ. ಅಮ್ಮ-ಮಗಳ ಪಾಲಿಗೆ ಇದೊಂದು ಹೆಮ್ಮೆಯ ಕ್ಷಣ" ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದೊಂದು "ಹೃದಯ ಸ್ಪರ್ಶಿಸುವ ಪ್ರೀತಿ. ತಾಯಂದಿರ ದಿನದ ಶುಭಾಶಯಗಳು. ಈ ದಿನವನ್ನು ಅದ್ಭುತಗೊಳಿಸಿದೆ" ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ತಾಯಂದಿರ ದಿನಕ್ಕೆ ವಿಶೇಷ ವಿಡಿಯೋ ಹಂಚಿಕೊಂಡ ಇಂಡಿಗೋ ವಿಮಾನಸಂಸ್ಥೆಗೂ ನೆಟ್ಟಿಗರು ಭೇಷ್​ ಎಂದಿದ್ದಾರೆ. ಇದನ್ನು ಹಲವರು ರೀಟ್ವೀಟ್​ ಕೂಡ ಮಾಡಿದ್ದಾರೆ.

ಇದನ್ನೂ ಓದಿ: ವಿಶ್ವ ತಾಯಂದಿರ ದಿನ: ಮನಮೋಹಕ ಮರಳು ಕಲಾಕೃತಿ- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.