ETV Bharat / bharat

ವಿದೇಶಕ್ಕೆ ಭಾರತದ ಪ್ರತಿಭಾ ಪಲಾಯನ ತಡೆಗೆ ಬೇಕಿದೆ ಕಡಿವಾಣ

author img

By ETV Bharat Karnataka Team

Published : Nov 24, 2023, 8:10 PM IST

ವಿದೇಶಕ್ಕೆ ಭಾರತದಿಂದ ಪ್ರತಿಭಾ ಪಲಾಯನ ಹೆಚ್ಚಾಗುತ್ತಿದ್ದು, ಇದರ ತಡೆಗೆ ಸರ್ಕಾರ ನಿಯಂತ್ರಕ ಕ್ರಮಗಳನ್ನು ಜಾರಿ ಮಾಡಬೇಕಿದೆ.

Outmigration of Indians: Worrying Trends

ದೇಶದ ಒಂದು ಭಾಗದಿಂದ ಅಥವಾ ಬೇರೆ ದೇಶಗಳಿಗೆ ಜನ ವಲಸೆ ಹೋಗುವುದು ಭಾರತದ ಇತಿಹಾಸದ ಅವಿಭಾಜ್ಯ ಮತ್ತು ಪ್ರಮುಖ ಭಾಗವಾಗಿದೆ. ಆರ್ಯರ ವಲಸೆಯಿಂದ ಹಿಡಿದು ಇಂದಿನವರೆಗೆ ಭಾರತೀಯರು ದೇಶದಾದ್ಯಂತ ಮತ್ತು ಇತರ ದೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಾಂತರಗೊಂಡಿದ್ದಾರೆ. ಭಾರತೀಯರು ದೇಶದ ಎಲ್ಲಿಯಾದರೂ ಪ್ರಯಾಣಿಸುವ ಮತ್ತು ವಾಸಿಸುವ ಹಕ್ಕನ್ನು ಹೊಂದಿದ್ದರೂ, ಇತರ ದೇಶಗಳಿಗೆ ವಲಸೆ ಹೋಗಲು ಹೆಚ್ಚಿನ ಸಂಪನ್ಮೂಲ ಬೇಕಾಗುತ್ತವೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ ಸುಮಾರು 3.2 ಕೋಟಿ ಭಾರತೀಯರು ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ 1.34 ಕೋಟಿ ಅನಿವಾಸಿ ಭಾರತೀಯರು (ಎನ್ಆರ್​ಐ) ಮತ್ತು 1.86 ಕೋಟಿ ಭಾರತೀಯ ಮೂಲದ ವ್ಯಕ್ತಿಗಳು (ಪಿಐಒ ಅಥವಾ ಇತರ ದೇಶಗಳ ನಾಗರಿಕರಾಗಿರುವ ವ್ಯಕ್ತಿಗಳು) ಸೇರಿದ್ದಾರೆ. ಪ್ರತಿ ವರ್ಷ ಅಂದಾಜು 25 ಲಕ್ಷ ಭಾರತೀಯರು ದೇಶದಿಂದ ಹೊರಹೋಗುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ಅಕ್ಟೋಬರ್ 2022 ರಿಂದ ಸೆಪ್ಟೆಂಬರ್ 2023 ರ ಅವಧಿಯಲ್ಲಿ, 96917 ಭಾರತೀಯರು ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಇತ್ತೀಚಿನ ಸುದ್ದಿ ವರದಿಗಳು ಹೇಳಿವೆ. ಪ್ರವಾಸಿ ವೀಸಾದಲ್ಲಿ ಇತರ ದೇಶಗಳಿಗೆ ಹೋಗಿ ಕಣ್ಮರೆಯಾದವರು ಮತ್ತು ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವ ಸಾವಿರಾರು ಯುವ ಭಾರತೀಯರು ಈ ಸಂಖ್ಯೆಯಲ್ಲಿ ಸೇರಿಲ್ಲ.

ಅನೇಕ ಭಾರತೀಯರು, ವಿಶೇಷವಾಗಿ ಯುವ ಪೀಳಿಗೆ ದೇಶ ತೊರೆಯಲು ಬಯಸುತ್ತಾರೆ ಎಂಬ ಅಂಶ ಕಳವಳಕಾರಿಯಾಗಿದೆ. ಯುವಜನರು ಅಥವಾ ಇತರರು ಉತ್ತಮ ಜೀವನ ಮಟ್ಟಕ್ಕಾಗಿ ವಿದೇಶಗಳಿಗೆ ಹೋಗಲು ಬಯಸುತ್ತಾರೆ. ವಿಶೇಷವಾಗಿ ಹೆಚ್ಚು ಮುಂದುವರಿದ ದೇಶದಲ್ಲಿ ತಮ್ಮ ಜೀವನ ಮಟ್ಟವು ಉತ್ತಮವಾಗಿರುತ್ತದೆ ಎಂಬ ನಿರೀಕ್ಷೆಯಿಂದಾಗಿ ವಲಸೆ ಹೋಗುತ್ತಾರೆ. 2017 ರಿಂದ ದೇಶದಲ್ಲಿ ಮಧ್ಯಮ ವರ್ಗಗಳು ನಾಶವಾಗಿವೆ ಎಂಬುದರಲ್ಲಿ ಸಂದೇಹವಿಲ್ಲ. ಕೋವಿಡ್ ಈ ವಿನಾಶದ ವೇಗವನ್ನು ಹೆಚ್ಚಿಸಿದೆ.

ಭಾರತದ ವಿಷಯದಲ್ಲಿ, ದುಡಿಯುವ ವಯಸ್ಸಿನ ಜನಸಂಖ್ಯೆ ಹೆಚ್ಚುತ್ತಿರುವ ಸಮಯದಲ್ಲಿ ದೇಶ ತೊರೆಯುವ / ವಲಸೆ ಹೋಗುವ ಜನರ ಸಂಖ್ಯೆ ಹೆಚ್ಚುತ್ತಿದೆ. ದುಡಿಯುವ ವಯಸ್ಸಿನ ಜನಸಂಖ್ಯೆಯಲ್ಲಿ ಭಾರತದ ಪಾಲು 2020 ರಿಂದ 2031 ರವರೆಗೆ 55.8% ರಿಂದ 58.8% ಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರದಿಗಳು ಹೇಳಿವೆ.

ಇದಲ್ಲದೆ ಜೀವನ ವೆಚ್ಚದ ಹೆಚ್ಚಳವು ಜೀವನವನ್ನು ಇನ್ನಷ್ಟು ಹದಗೆಡಿಸಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಂಡರೆ ಮಾತ್ರ ಇದರಿಂದ ಹೊರಬರಲು ಸಾಧ್ಯ ಎಂಬ ಗ್ರಹಿಕೆ ಇವರದ್ದಾಗಿದೆ. ಇದಕ್ಕಾಗಿ ವಲಸೆ ಹೋಗುವುದು ಒಂದು ಮಾರ್ಗವಾಗಿದೆ. ಕಳೆದ 10 ವರ್ಷಗಳಲ್ಲಿ ಆಹಾರ ಬೆಲೆಗಳು ದ್ವಿಗುಣಗೊಂಡಿರುವುದು ಕೂಡ ಸಮಸ್ಯೆ ಹೆಚ್ಚಿಸಿದೆ. ಎಲ್ಲಾ ದೇಶಗಳಲ್ಲಿ ಬೆಲೆಗಳು ಏರುತ್ತವೆ ಮತ್ತು ಇಳಿಯುತ್ತವೆಯಾದರೂ, ಹೆಚ್ಚುತ್ತಿರುವ ಬೆಲೆಗಳನ್ನು ಸರಿದೂಗಿಸಲು ತಮ್ಮ ಭವಿಷ್ಯದ ಗಳಿಕೆ ಸಾಕಾಗುವುದಿಲ್ಲ ಎಂದು ಜನರು ನಂಬಲು ಪ್ರಾರಂಭಿಸಿದಾಗ ಸಮಸ್ಯೆ ಉದ್ಭವಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಕೆಲ ಸಂಪನ್ಮೂಲಗಳನ್ನು ಹೊಂದಿರುವವರು ಉತ್ತಮ ದೇಶಗಳನ್ನು ಹುಡುಕುತ್ತಾ ದೇಶ ತೊರೆಯಲು ಮುಂದಾಗುತ್ತಿದ್ದಾರೆ. ಇದು 1970 ರಿಂದ 1990 ರ ದಶಕದಲ್ಲಿ ವಿದ್ಯಾವಂತರು ಮತ್ತು ಆದಾಯ ಹೊಂದಿರುವವರು ದೇಶ ತೊರೆದಾಗ ಭಾರತ ಕಂಡ ಬ್ರೈನ್ ಡ್ರೇನ್ ಮರುಕಳಿಸುತ್ತಿರುವುದನ್ನು ಸೂಚಿಸುತ್ತದೆ.

ಇದನ್ನು ನೋಡಿದರೆ ಇತರ ಪ್ರಮುಖ ದೇಶಗಳೊಂದಿಗೆ ಸ್ಪರ್ಧಿಸುವ ಬದಲು, ಭಾರತವು ಮೂಲಭೂತವಾಗಿ ಸಂಪೂರ್ಣವಾಗಿ ಅವಲಂಬಿತ ದೊಡ್ಡ ದೇಶವಾಗುತ್ತದೆ. ಆದ್ದರಿಂದ, ಸರ್ಕಾರವು ತುರ್ತು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವ ತುರ್ತು ಅವಶ್ಯಕತೆಯಿದೆ. ಮೊದಲಿಗೆ ಸರ್ಕಾರಗಳು ವಿಕೇಂದ್ರೀಕರಣದಲ್ಲಿ ಹೂಡಿಕೆ ಮಾಡಬೇಕಾಗಿದೆ ಮತ್ತು ಹೊಸ ನಿಯಮಗಳನ್ನು ಜಾರಿ ಮಾಡಬೇಕಿದೆ. ಎರಡನೆಯದಾಗಿ, ಸರ್ಕಾರಗಳು ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಯ ಪ್ರಸ್ತುತ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮರುಪರಿಶೀಲಿಸಬೇಕು ಮತ್ತು ಬದಲಿಗೆ ಗುಣಮಟ್ಟದ ಮೂಲಸೌಕರ್ಯಗಳಲ್ಲಿ ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದವುಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬೇಕಿದೆ.

ಇದನ್ನೂ ಓದಿ : ಕದನ ವಿರಾಮ: ಗಾಜಾಗೆ ಸಿಗಲಿದೆ ನಿತ್ಯ 1 ಲಕ್ಷ 30 ಸಾವಿರ ಲೀಟರ್ ಡೀಸೆಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.