ETV Bharat / bharat

ಚೀನಾದೊಂದಿಗಿನ ಭಾರತದ ಸಂಬಂಧ ಕಠಿಣವಾಗಿದೆ: ಜೈಶಂಕರ್

author img

By

Published : Feb 20, 2022, 7:39 AM IST

ಇಂದಿನ ಜಗತ್ತು ಪರಸ್ಪರ ಅವಲಂಬಿತವಾಗಿದೆ. ಒಂದು ದೇಶವು ತನ್ನ ಪ್ರಮುಖ ಹಿತಾಸಕ್ತಿಯನ್ನು ಬದಿಗೊತ್ತಿ ಬೇರೊಂದು ರಾಷ್ಟ್ರದೊಡನೆ ವ್ಯಾಪಾರ ಮಾಡಬೇಕಾದ ಅನಿವಾರ್ಯತೆಯಿದೆ ಎಂದು ಜೈಶಂಕರ್ ಹೇಳಿದರು.

India's relations with China going through 'very difficult phase', says Jaishankar
ಚೀನಾದೊಂದಿಗಿನ ಭಾರತದ ಸಂಬಂಧ ಕಠಿಣವಾಗಿದೆ: ಜೈಶಂಕರ್

ಮ್ಯೂನಿಚ್(ಜರ್ಮನಿ): ಭಾರತ ಮತ್ತು ಚೀನಾದ ನಡುವಿನ ಸಂಬಂಧಗಳು ಅಷ್ಟೇನೂ ಸಹಕಾರಯುತವಾಗಿಲ್ಲ. ಗಡಿ ಒಪ್ಪಂದಗಳನ್ನು ಉಲ್ಲಂಘಿಸಿದ ನಂತರ ಚೀನಾದೊಂದಿಗಿನ ಭಾರತದ ಸಂಬಂಧಗಳು ಬಹಳ ಕಠಿಣವಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಅವರು ಶನಿವಾರ ಹೇಳಿದ್ದಾರೆ.

ಮ್ಯೂನಿಚ್ ಸೆಕ್ಯುರಿಟಿ ಕಾನ್ಫರೆನ್ಸ್-2022 (ಎಂಎಸ್‌ಸಿ-2022) ಸಮಿತಿಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 45 ವರ್ಷಗಳ ಕಾಲ ಭಾರತ ಮತ್ತು ಚೀನಾಗಳ ಗಡಿಗಳ ನಡುವೆ ಶಾಂತಿ ಇತ್ತು. ಗಡಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಸೇನೆಯನ್ನು ಎಲ್​ಎಸಿ ಬಳಿಗೆ ತರದಂತೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಆದರೆ ಚೀನಾ ಒಪ್ಪಂದವನ್ನು ಉಲ್ಲಂಘಿಸಿದೆ. ಈಗಿರುವ ಗಡಿ ಸಮಸ್ಯೆಯೇ ಚೀನಾದೊಂದಿಗೆ ಸಂಬಂಧ ಹೇಗಿದೆ ಎಂಬುದನ್ನು ನಿರ್ಧಾರ ಮಾಡುತ್ತಿದೆ ಎಂದರು.

ಜೂನ್ 2020ರಿಂದ (ಗಾಲ್ವನ್ ಸಂಘರ್ಷ) ಚೀನಾ ಮತ್ತು ಭಾರತದ ಸಂಬಂಧ ಮತ್ತಷ್ಟು ಹದಗೆಟ್ಟಿದೆ ಎಂದ ಜೈಶಂಕರ್​ ಇಂಡೋ-ಪೆಸಿಫಿಕ್‌ ವಿಚಾರವಾಗಿ ಮಾತನಾಡುತ್ತಾ, ಇಂದಿನ ಜಗತ್ತು ಪರಸ್ಪರ ಅವಲಂಬಿತವಾಗಿದೆ. ಒಂದು ದೇಶವು ತನ್ನ ಪ್ರಮುಖ ಹಿತಾಸಕ್ತಿಯನ್ನು ಬದಿಗೊತ್ತಿ ಬೇರೊಂದು ರಾಷ್ಟ್ರದೊಡನೆ ವ್ಯಾಪಾರ ಮಾಡಬೇಕಾದ ಅನಿವಾರ್ಯತೆಯಿದೆ ಎಂದು ಜೈಶಂಕರ್ ಹೇಳಿದರು.

ಇದನ್ನೂ ಓದಿ: ಉಕ್ರೇನ್​ ಮೇಲೆ ಯಾವುದೇ ಸೈಬರ್ ದಾಳಿ ಮಾಡಿಲ್ಲ: ಅಮೆರಿಕಕ್ಕೆ ರಷ್ಯಾ ಸ್ಪಷ್ಟನೆ

ಭಾರತದ ಸಾಮರ್ಥ್ಯ ಮತ್ತು ಪ್ರಭಾವವು ಜಗತ್ತಿನಾದ್ಯಂತ ವ್ಯಾಪಿಸಿದೆ ಎಂದು ಜೈಶಂಕರ್ ಹೇಳಿದ್ದಾರೆ. ಸದ್ಯಕ್ಕೆ ಸಚಿವರು ಯೂರೋಪ್ ಪ್ರವಾಸದಲ್ಲಿದ್ದಾರೆ. ಜರ್ಮನಿಗೆ ಭೇಟಿ ನೀಡಿರುವ ಅವರು ಯುರೋಪ್, ಏಷ್ಯಾ ರಾಷ್ಟ್ರಗಳ ಸಭೆಯಲ್ಲಿ ಭಾಗವಹಿಸಿದ್ದಾರೆ. ನಂತರ ಇದೇ ಸಮ್ಮೇಳನದಲ್ಲಿ ಭಾಗವಹಿಸಲಿರುವ ವಿವಿಧ ದೇಶಗಳ ವಿದೇಶಾಂಗ ಸಚಿವರು ಮತ್ತು ಇತರ ಪ್ರತಿನಿಧಿಗಳೊಂದಿಗೆ ಸಚಿವರು ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.