ETV Bharat / bharat

ಜಾಗತಿಕ ಹಸಿವು ಸೂಚ್ಯಂಕ: ನೆರೆಯ ರಾಷ್ಟ್ರಗಳಿಗಿಂತ ಭಾರತದಲ್ಲಿ ಹಸಿವಿನ ಪ್ರಮಾಣ ಹೆಚ್ಚು

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ 116 ರಾಷ್ಟ್ರಗಳ ಪೈಕಿ 101 ಆಗಿದೆ. 2020ನೇ ವರ್ಷದಲ್ಲಿ ಅವಧಿಯಲ್ಲಿ 107 ರಾಷ್ಟ್ರಗಳ ಪೈಕಿ ಭಾರತ 94 ಸ್ಥಾನದಲ್ಲಿತ್ತು.

India's rank in Global Hunger Index
ಜಾಗತಿಕ ಹಸಿವು ಸೂಚ್ಯಂಕ: ನೆರೆಯ ರಾಷ್ಟ್ರಗಳಿಗಿಂತ ಹಸಿವಿನ ಪ್ರಮಾಣ ಭಾರತದಲ್ಲೇ ಹೆಚ್ಚು
author img

By

Published : Oct 15, 2021, 11:56 AM IST

ನವದೆಹಲಿ: ಜಾಗತಿಕ ಹಸಿವು ಸೂಚ್ಯಂಕ (GHI-Global Hunger Index) ಪ್ರಕಟವಾಗಿದೆ. ಇಲ್ಲಿ ಜಗತ್ತಿನ ಸುಮಾರು 116 ರಾಷ್ಟ್ರಗಳಲ್ಲಿರುವ ಹಸಿವಿನ ಬಗ್ಗೆ ಅಂಕಿಅಂಶಗಳನ್ನು ಸಂಗ್ರಹಿಸಿ ಶ್ರೇಯಾಂಕವನ್ನು ನೀಡಲಾಗಿದೆ. 2021ರ ಹಸಿವು ಸೂಚ್ಯಂಕದ ಪ್ರಕಾರ ಹಸಿವಿನ ವಿಚಾರದಲ್ಲಿ ಭಾರತದ ಸ್ಥಿತಿ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳಿಗಿಂತ ಹೀನಾಯವಾಗಿದೆ.

ಐರಿಷ್ ಸಂಘಟನೆಯಾದ ಕನ್ಸರ್ನ್​ ವರ್ಲ್ಡ್​​​ವೈಡ್ (Concern Worldwide) ಮತ್ತು ಜರ್ಮನ್ ಸಂಘಟನೆ ವೆಲ್ಟ್ ಹಂಗರ್ ಹಿಲ್ಫ್​ (Welt Hunger Hilfe) ವರದಿಯನ್ನು ಪ್ರಕಟಿಸಿದ್ದು, ಭಾರತದಲ್ಲಿನ ಹಸಿವಿನ ತೀವ್ರತೆಯ ಬಗ್ಗೆ ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ 116 ರಾಷ್ಟ್ರಗಳ ಪೈಕಿ 101 ಆಗಿದೆ. 2020ನೇ ವರ್ಷದ ಅವಧಿಯಲ್ಲಿ 107 ರಾಷ್ಟ್ರಗಳ ಪೈಕಿ ಭಾರತ 94 ಸ್ಥಾನದಲ್ಲಿದ್ದು, ಈಗ 12 ಸ್ಥಾನಗಳ ಕುಸಿತ ಕಂಡಿದೆ. ಈ ವರ್ಷದ ಶ್ರೇಯಾಂಕದ ಪ್ರಕಾರ ಪಾಕಿಸ್ತಾನ (92 ಸ್ಥಾನ) , ನೇಪಾಳ (76ನೇ ಸ್ಥಾನ), ಬಾಂಗ್ಲಾದೇಶ (76ನೇ ಸ್ಥಾನ ) ರಾಷ್ಟ್ರಗಳಿಗಿಂತ ಹಸಿವಿನ ಪ್ರಮಾಣ ಭಾರತದಲ್ಲಿ ಹೆಚ್ಚಾಗಿದೆ.

ಜಾಗತಿಕ ಹಸಿವು ಸೂಚ್ಯಂಕದ ಸ್ಕೋರ್ ಪ್ರಕಾರ ನೋಡುವುದಾದರೆ, 2000ನೇ ಇಸವಿಯಲ್ಲಿ 38.8 ಅಂಕ ಗಳಿಸಿದ್ದ ಭಾರತ, 2012 ಮತ್ತು 2021ರ ನಡುವೆ 27.5 ಮತ್ತು 28.8 ಅಂಕಗಳ ನಡುವೆ ಕಾಣಿಸಿಕೊಳ್ಳುತ್ತಿದೆ.

ಚೀನಾ, ಬ್ರೆಜಿಲ್ ಮತ್ತು ಕುವೈತ್ ಮೊದಲ ಮೂರು ಸ್ಥಾನಗಳಲ್ಲಿದ್ದು, ಕೇವಲ 5 ಅಂಕಗಳನ್ನು ಗಳಿಸಿವೆ. 50.8 ಅಂಕ ಪಡೆದ ಸೋಮಲಿಯಾ ಹಸಿವಿನ ಸೂಚ್ಯಂಕದಲ್ಲಿ ಕೊನೆ ಸ್ಥಾನದಲ್ಲಿದೆ. ಇದರ ಜೊತೆಗೆ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್​, ಕಾಂಗೋ ರಿಪಬ್ಲಿಕ್, ಮಡಗಾಸ್ಕರ್, ಯೆಮೆನ್ ಸೇರಿದಂತೆ 31 ರಾಷ್ಟ್ರಗಳು ತೀವ್ರ ಹಸಿವಿನ ಸಮಸ್ಯೆಯನ್ನು ಎದುರಿಸುತ್ತಿವೆ.

ಇದನ್ನೂ ಓದಿ: ನೋಡಲು ಥೇಟ್‌ ದೆಹಲಿ ಸಿಎಂ ಕೇಜ್ರಿವಾಲ್ ರೀತಿ ಕಾಣುವ ಚಾಟ್‌ ಮಾರಾಟಗಾರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.