ನವದೆಹಲಿ: ಚೀನಾದಿಂದ ಭಾರತದ ಆಮದು 2016-17ರಲ್ಲಿ 61.28 ಶತಕೋಟಿ ಡಾಲರ್‌ಗಳಿಂದ 2020-21ರ ಹೊತ್ತಿಗೆ 65.21 ಶತಕೋಟಿ ಡಾಲರ್‌ಗೆ ಏರಿಕೆಯಾಗಿದ್ದು, ಆ ಸಮಯದಲ್ಲಿ ವಾರ್ಷಿಕ ಶೇ.1.28ರಷ್ಟು ಬೆಳವಣಿಗೆ ದರವನ್ನು ದಾಖಲಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ರಾಜ್ಯಸಭೆಯಲ್ಲಿ ಶುಕ್ರವಾರ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ
2019-20 ಮತ್ತು 2020-21ರ ನಡುವೆ ಚೀನಾದಿಂದ ಆಮದುಗಳು ಸ್ಥಿರವಾಗಿವೆ. ಚೀನಾದಿಂದ ಆಮದು ಮಾಡಿಕೊಳ್ಳುವ ಪ್ರಮುಖ ವಸ್ತುಗಳು ಟೆಲಿಕಾಂ ಉಪಕರಣಗಳು, ಕಂಪ್ಯೂಟರ್ ಹಾರ್ಡ್‌ವೇರ್, ರಸಗೊಬ್ಬರ, ಎಲೆಕ್ಟ್ರಾನಿಕ್ ಘಟಕಗಳು ಮತ್ತು ಉಪಕರಣಗಳಾಗಿವೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಭಾರತದಲ್ಲಿ ಟೆಲಿಕಾಂ ಮತ್ತು ಬಲವರ್ಧನೆ ಸಂಬಂಧ ವೇಗವಾಗಿ ವಿಸ್ತರಿಸುತ್ತಿರುವ ವಲಯಗಳ ಬೇಡಿಕೆಯನ್ನು ಪೂರೈಸಲು ಈ ಆಮದು ಮಾಡಲಾದ ಹಲವು ವಸ್ತುಗಳನ್ನು ಬಳಸಲಾಗುತ್ತದೆ. ಔಷಧ ಸೂತ್ರೀಕರಣಗಳು ಭಾರತೀಯ ಫಾರ್ಮಾ ಉದ್ಯಮಕ್ಕೆ ಸಿದ್ಧಪಡಿಸಿದ ಸರಕುಗಳನ್ನು ಉತ್ಪಾದಿಸಲು ಕಚ್ಚಾ ವಸ್ತುಗಳನ್ನು ಭಾರತದಿಂದ ರಫ್ತು ಮಾಡಲಾಗುತ್ತದೆ.
ಇನ್ನು ಭಾರತ ಚೀನಾಕ್ಕೆ ರಪ್ತು ಮಾಡುವ ಪ್ರಮಾಣದಲ್ಲೂ ಹೆಚ್ಚಿನ ಅಭಿವೃದ್ಧಿ ಕಂಡಿದೆ. 2016-17 ರಲ್ಲಿ 10.17 ಶತಕೋಟಿ ಡಾಲರ್, 2020-21 ರಲ್ಲಿ 21.19 ಶತಕೋಟಿ ಡಾಲರ್ ಆಗಿದ್ದು, ಇದು ವಾರ್ಷಿಕವಾಗಿ ಶೇ. 21.67ರಷ್ಟು ಬೆಳವಣಿಗೆ ಹೊಂದಿದೆ ಎಂದು ಇದೇ ವೇಳೆ ಲೋಕಸಭೆಗೆ ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿ ರಚಿಸುವ ಪ್ರಸ್ತಾಪವಿದೆ: ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ