ETV Bharat / bharat

ಭಾರತದ ಸುಸ್ಥಿರ ಅಭಿವೃದ್ಧಿ ಗುರಿಗೆ ತೊಡಕಾಗಲಿದೆ ಭಾರತದ ಶಾಖದ ಅಲೆ; ಅಧ್ಯಯನ - ಕೆಂಬ್ರೀಡ್ಜ್​ ಯುನಿವರ್ಸಿಟಿಯ ರಮಿತ್​ ದೆಬ್ನಾಥ್​​

ಪ್ರಸ್ತುತ ಹವಾಮಾನ ಬದಲಾವಣೆ ದುಬರ್ಲತೆ ಭಾರತದ ಸುಸ್ಥಿರ ಅಭಿವೃದ್ಧಿ ಗುರಿ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿದೆ.

India's heat wave will hamper India's sustainable development goals; Study

author img

By

Published : Apr 20, 2023, 1:02 PM IST

Updated : Apr 20, 2023, 3:01 PM IST

ಕ್ಯಾಲಿಫೋರ್ನಿಯಾ(ಅಮೆರಿಕ): ಶಾಖದ ಅಲೆಗಳು ಭಾರತದಲ್ಲಿ ತೀವ್ರ ಮತ್ತು ಮಾರಾಣಾಂತಿಕವಾಗಿದೆ. ಇದು ಸಾರ್ವಜನಿಕ ಆರೋಗ್ಯ, ಕೃಷಿ ಮತ್ತು ಇತರ ಸಾಮಾಜಿಕ ಆರ್ಥಿಕತೆ ಮತ್ತು ಸಂಸ್ಕೃತಿ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಕೆಂಬ್ರೀಡ್ಜ್​ ಯುನಿವರ್ಸಿಟಿಯ ರಮಿತ್​ ದೆಬ್ನಾಥ್​​ ಮತ್ತು ಅವರ ಸಹೋದ್ಯೋಗಿಗಳು ಈ ಕುರಿತು ಪಿಎಲ್​ಒಎಸ್​ ಕ್ಲೆಮೆಂಟ್​ನಲ್ಲಿ ಪ್ರಕಟಿಸಿದ್ದಾರೆ. ಈ ಅಧ್ಯಯನದಲ್ಲಿ ಶಾಖದ ಅಲೆ, ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸುವ ನಿಟ್ಟಿನಲ್ಲಿ ಭಾರತದ ಪ್ರಗತಿಗೆ ಇದು ಅಡ್ಡಿ ಮಾಡಲಿದೆ.

ಶೂನ್ಯ ಬಡತನ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಉದ್ಯೋಗ, ಆರ್ಥಿಕ ಬೆಳವಣಿಗೆ ಸೇರಿದಂತೆ 17ನೇ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ಉದ್ದೇಶವನ್ನು ಪೂರೈಸಲು ಭಾರತ ಬದ್ದವಾಗಿದೆ. ಆದಾಗ್ಯೂ ಪ್ರಸ್ತುತ ಹವಾಮಾನ ಬದಲಾವಣೆ ದುಬರ್ಲತೆ ಇದರ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿದೆ.

ಸುಸ್ಥಿರ ಅಭಿವೃದ್ಧಿ ಗುರಿ: ಭಾರತದ ಹವಾಮಾನ ದುರ್ಬಲತೆ ಸೂಚ್ಯಂಕದ ಜೊತೆಗೆ ಶಾಖದ ಸೂಚ್ಯಂಕದ ಕುರಿತು ಸಂಶೋಧಕರು ವಿಶ್ಲೇಷಣಾ ಮೌಲ್ಯ ಮಾಪನ ನಡೆಸಿದ್ದಾರೆ. ಇದಕ್ಕೆ ಸಾಮಾಜಿಕ ಆರ್ಥಿಕತೆ, ಜೀವನ ಕ್ರಮ, ಜೈವಿಕ ಭೌತಿಕ ಸೇರಿದಂತೆ ಹಲವುಗಳ ವಿಶ್ಲೇಷಣೆಯಿಂದ ಹವಾಮಾನ ದುರ್ಬಲತೆ ಮತ್ತು ಹೇಗೆ ಎಸ್​ಡಿಜಿ ಅಭಿವೃದ್ಧಿ ಮೇಲೆ ಹವಾಮಾನ ಬದಲಾವಣೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಇದರ ತೀವ್ರತೆ ಮಟ್ಟ ವರ್ಗೀಕರಣಕ್ಕೆ ಭಾರತೀಯ ಸರ್ಕಾರದ ರಾಷ್ಟ್ರೀಯ ಡೇಟಾ ಮತ್ತು ಅನಾಲಿಟಿಕ್ಸ್ ಪ್ಲಾಟ್‌ಫಾರ್ಮ್‌ನಿಂದ ರಾಜ್ಯ ಮಟ್ಟದ ಹವಾಮಾನ ದುರ್ಬಲತೆಯ ಸೂಚಕಗಳಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶದಿಂದ ಈ ಮಾಹಿತಿ ಪಡೆಯಲಾಗಿದೆ. ಸಂಶೋಧಕರು 20 ವರ್ಷದಲ್ಲಿ (2001-2021)ರ ಎಸ್​ಡಿಜಿ ನಿಟ್ಟಿನಲ್ಲಿ ಭಾರತದ ಪ್ರಗತಿಯನ್ನು ಹೋಲಿಕೆ ಮಾಡಿದ್ದಾರೆ

ಈ ಹಿಂದೆ ಅಂದಾಜಿಸಿದ್ದಕ್ಕಿಂತ ಈ ಶಾಖದ ಅಲೆಗಳು ಎಸ್​ಡಿಜಿ ಪ್ರಗತಿಗೆ ದುರ್ಬಲಗೊಳಿಸಿದೆ. ಸದ್ಯದ ವಿಶ್ಲೇಷಣೆ ಮೆಟ್ರಿಕ್​ ಭಾರತದ ಹವಾಮಾನ ಬದಲಾವಣೆಯ ದುರ್ಬಲತೆ ಸೆರೆಯುವುದು ಸಾಧ್ಯವಾಗಿಲ್ಲ. ಎಚ್​ ಅಂದಾಜು, ಭಾರತದ ಶೇ90ರಷ್ಟು ಮಂದಿ ಶಾಖದ ಅಲೆಯ ಅಪಾಯದಲ್ಲಿ ಇದ್ದಾರೆ.

ಹವಾಮಾನ ಬದಲಾವಣೆ ಪಾತ್ರ: ಸಿವಿಐ ಪ್ರಕಾರ, ದೇಶದ ಶೇ 20ರಷ್ಟು ಹವಾಮಾನ ಬದಲಾವಣೆ ದುರ್ಬಲತೆ ಹೊಂದಿದೆ. ಇದೇ ರೀತಿಯ ಪರಿಣಾಮವನ್ನು ರಾಷ್ಟ್ರ ರಾಜಧಾನಿಯಲ್ಲಿ ಕಾಣಬಹುದು. ಎಚ್ಐ ಅಂದಾಜಿನ ಅನುಸಾರ ದೆಹಲಿಯಲ್ಲಿ ಮಾರಣಾಂತಿಕ ಶಾಖದ ಅಲೆ ಪರಿಣಾಮ ಕಾಣಬಹುದು. ಇದು ಇತ್ತೀಚಿನ ರಾಜ್ಯದ ಹವಾಮಾನ ಬದಲಾವಣೆಗೆ ಕ್ರಿಯಾ ಯೋಜನೆ ಪರಿಣಾಮ ಹೊಂದಿಲ್ಲ. ಆದಾಗ್ಯೂ ಅಧ್ಯಯನ ಅನೇಕ ಮಿತಿಗಳನ್ನು ಹೊಂದಿದೆ. ಉದಾಹರಣಗೆ ಸಿವಿಸಿ ದತ್ತಾಂಶ ಮತ್ತು ಶಾಖದ ಸೂಚ್ಯಂಕದ ಅಸಮಂಜಸ ದತ್ತಾಂಶಗಳು ಭವಿಷ್ಯದ ಅಧ್ಯಯನಕ್ಕೆ ಸರಿ ಹೊಂದುವುದಿಲ್ಲ.

ಲೇಖಕರ ಪ್ರಕಾರ, ಸಿವಿಐ ಜೊತೆಗೆ ಈ ಹಿಂದೆ ಅಂದಾಜಿಸಿದ್ದಕ್ಕಿಂತ ಶಾಖದ ಅಲೆಗಳ ಭಾರತದ ಅನೇಕ ರಾಜ್ಯಗಳ ಹವಮಾನ ಬದಲಾವಣೆ ದುರ್ಬಲತೆಯನ್ನು ತೋರಿಸುತ್ತದೆ, ಭಾರತದಲ್ಲಿನ ಶಾಖದ ಅಲೆ ಮತ್ತು ಭಾರತದ ಉಪಖಂಡದ ವಲಯಗಳಲ್ಲಿ ಪುನರಾವರ್ತಿತವಾಗುತ್ತಿರುತ್ತದೆ. ಭಾರತದಲ್ಲಿ ಪ್ರಸ್ತುತ ಶಾಖದ ಅಲೆಗಳು ತೀವ್ರವಾಗಿದೆ. ಇದು ಜನರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಇದನ್ನೂ ಓದಿ: ಹೆಚ್ಚಿದ ಬಿಸಿಲ ಝಳ: ಗರ್ಭಿಣಿಯರು, ಮಕ್ಕಳು, ಹಿರಿಯ ನಾಗರಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

Last Updated : Apr 20, 2023, 3:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.