ETV Bharat / bharat

ಇತಿಹಾಸ ನಿರ್ಮಿಸಲು ಸಿದ್ಧವಾದ ಇಸ್ರೋ: ದೇಶದ ಮೊದಲ ಖಾಸಗಿ ರಾಕೆಟ್ ಇಂದು ಉಡಾವಣೆ

ಸ್ವತಂತ್ರ ಭಾರತದ 75 ವರ್ಷಗಳ ಪಯಣದಲ್ಲಿ ಹೊಸ ಮೈಲಿಗಲ್ಲು. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ದೇಶದ ಮೊದಲ ಖಾಸಗಿ ರಾಕೆಟ್ ಇಂದು ಉಡಾವಣೆ.

representative image
ಸಾಂದರ್ಭಿಕ ಚಿತ್ರ
author img

By

Published : Nov 18, 2022, 7:23 AM IST

ಆಂಧ್ರಪ್ರದೇಶ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇಂದು ಖಾಸಗಿ ಕಂಪನಿ ನಿರ್ಮಿಸಿದ ದೇಶದ ಮೊದಲ ರಾಕೆಟ್ ಉಡಾವಣೆ ಮಾಡಲು ಸಿದ್ಧವಾಗಿದೆ. ಕೇಂದ್ರ ಖಾಸಗಿ ರಾಕೆಟ್ ವಿಕ್ರಮ್-ಸಬಾರ್ಬಿಟಲ್ (ವಿಕೆಎಸ್) ಮೊದಲ ಉಡ್ಡಯನ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ 11.30ಕ್ಕೆ ನಡೆಯಲಿದೆ ಎಂದು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಸಚಿವ ಡಾ.ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಹೈದರಾಬಾದ್ ಮೂಲದ ಸ್ಟಾರ್ಟಪ್ ಸಂಸ್ಥೆಯಾದ ಸ್ಕೈರೂಟ್‌ನ ಈ ಯೋಜನೆಗೆ 'ಪ್ರಾರಂಭ್' ಎಂದು ಹೆಸರಿಡಲಾಗಿದೆ.

ವಿಕ್ರಮ್ ರಾಕೆಟ್: ವಿಕೆಎಸ್​ ರಾಕೆಟ್ ಅನ್ನು ಹೈದರಾಬಾದ್ ಮೂಲದ ಸ್ಟಾರ್ಟ್‌ಅಪ್ ಕಂಪನಿ, ಸ್ಕೈರೂಟ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ (SAPL) ಅಭಿವೃದ್ಧಿಪಡಿಸಿದೆ. ಇದು ಸುಮಾರು 545 ಕೆಜಿ ತೂಕದ ಏಕ-ಹಂತದ ಸ್ಪಿನ್-ಸ್ಟೆಬಿಲೈಸ್ಡ್ ಘನ ಪ್ರೊಪೆಲ್ಲಂಟ್ ರಾಕೆಟ್ ಆಗಿದೆ. ಉಡಾವಣೆಯ ಒಟ್ಟಾರೆ ಅವಧಿ ಕೇವಲ 300 ಸೆಕೆಂಡ್​​ಗಳು.

ವಿಕ್ರಮ್‌ ಸಾರಾಭಾಯ್‌ ಸ್ಮರಣಾರ್ಥ: ಇಸ್ರೊ ಮತ್ತು ಇನ್‌–ಸ್ಪೇಸ್‌ ನೀಡಿದ್ದ ಸಹಕಾರದಿಂದಾಗಿ ಈ ರಾಕೆಟ್‌ ಅನ್ನು ಕಡಿಮೆ ಅವಧಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಖ್ಯಾತ ವಿಜ್ಞಾನಿ ವಿಕ್ರಮ್‌ ಸಾರಾಭಾಯ್‌ ಅವರ ಸ್ಮರಣಾರ್ಥವಾಗಿ 'ವಿಕ್ರಮ್‌–ಎಸ್' ಎಂದು ಇದಕ್ಕೆ ನಾಮಕರಣ ಮಾಡಲಾಗಿದೆ. ವಿಕ್ರಮ್ ರಾಕೆಟ್‌ಗಳು ಮೂರು ಹಂತದಲ್ಲಿ ಬರುತ್ತಿದ್ದು, ಕ್ರಮವಾಗಿ ವಿಕ್ರಮ್ 1, 2 ಹಾಗೂ 3 ಆಗಿವೆ. ಇವುಗಳನ್ನು ಕಾರ್ಬನ್ ಸಂಯುಕ್ತಗಳು ಹಾಗೂ ತ್ರೀಡಿ ಪ್ರಿಂಟೆಡ್ ಮೋಟರ್‌ಗಳನ್ನು ಬಳಸಿ ನಿರ್ಮಿಸಲಾಗಿದೆ. ಇನ್ನುಳಿದಂತೆ ವಿಶೇಷತೆಗಳು ಹೀಗಿವೆ..

  • ವಿಕ್ರಮ್ 1 ಈ ಸರಣಿಯ ಪ್ರಥಮ ರಾಕೆಟ್ ಆಗಿದೆ. ಇದರಲ್ಲಿ ಮೂರು ಘನ ಇಂಧನ ಹಂತಗಳಿವೆ. ಇದರ ಅಂತಿಮ ಹಂತ ರಾಮನ್ ಇಂಜಿನ್. ಇದರಲ್ಲಿ ನಾಲ್ಕು ಇಂಜಿನ್‌ಗಳ ಗುಂಪಿನಲ್ಲಿ ಎಂಎಂಹೆಚ್ ಹಾಗೂ ಎನ್‌ಟಿಓ ದ್ರವ ಇಂಧನಗಳು ಬಳಕೆಯಾಗುತ್ತವೆ.
  • ಈ ರಾಕೆಟ್‌ 290 ಕೆಜಿ ತೂಕದ ಉಪಗ್ರಹಗಳನ್ನು ಸನ್ ಸಿಂಕ್ರೊನಸ್ ಪೋಲಾರ್ ಆರ್ಬಿಟ್‌ಗೆ (ಎಸ್ಎಸ್‌ಪಿಓ) ಜೋಡಿಸಲು ಹಾಗೂ 480 ಕೆಜಿ ತೂಕವನ್ನು 500 ಕಿ.ಮೀ ದೂರದ ಲೋ ಅರ್ತ್ ಆರ್ಬಿಟ್ (ಎಲ್ಇಓ) ನಲ್ಲಿ 45 ಡಿಗ್ರಿ ಕೋನದಲ್ಲಿ ಜೋಡಿಸಲು ವಿನ್ಯಾಸಗೊಳಿಸಲಾಗಿದೆ.

ಮಿಷನ್ ಪ್ರಾರಂಭ್: ವಿಕ್ರಮ್-1 ರಾಕೆಟ್‌ನ ಪೂರ್ಣ ಆರ್ಬಿಟಲ್ ಉಡಾವಣೆಗೆ ಪೂರ್ವಭಾವಿಯಾಗಿ ವಿಕ್ರಮ್ ಎಸ್ ರಾಕೆಟ್ ಅನ್ನು ಇಂದು ಮಿಷನ್ ಪ್ರಾರಂಭ್ ಎಂಬ ಹೆಸರಿನಲ್ಲಿ ಉಡಾವಣೆ ಮಾಡಲಾಗುತ್ತಿದೆ. ವಿಕ್ರಮ್ ಎಸ್ ರಾಕೆಟ್ ಒಂದು ಏಕ ಹಂತದ ಸಬ್ ಆರ್ಬಿಟಲ್ ಉಡಾವಣಾ ವಾಹನವಾಗಿದೆ. ಸಬ್ ಆರ್ಬಿಟಲ್ ರಾಕೆಟ್‌ಗಳು ಆರ್ಬಿಟಲ್ ವೇಗಕ್ಕಿಂತ ನಿಧಾನವಾಗಿ ಚಲಿಸುತ್ತವೆ. ಆದರೆ ಅವು‌ಗಳ ವೇಗ ಅವುಗಳನ್ನು ಭೂಮಿಯ ಅಕ್ಷದಲ್ಲಿ ಸುತ್ತಲು ಸಾಕಷ್ಟಾಗುತ್ತದೆ.

ಇದನ್ನೂ ಓದಿ: ಮೊದಲ ಬಾರಿ ನಭಕ್ಕೆ ಜಿಗಿಯಲಿದೆ ಖಾಸಗಿ ಸಂಸ್ಥೆ ಸ್ಕೈರೂಟ್​ ಏರೋಸ್ಪೆಸ್​ ರಾಕೆಟ್​​

ಈ ಏಕ ಹಂತದ, ಘನ ಇಂಧನ ರಾಕೆಟ್ ಅಲ್ಯೂಮಿನಿಯಂ ಹಾಗೂ ಅಮೋನಿಯಂ ಪರ್ಕ್ಲೋರೇಟ್‌ಗಳ ಮಿಶ್ರಣವನ್ನು ದಹಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಹೈಡ್ರಾಕ್ಸಿಲ್ ಟರ್ಮಿನೇಟೆಡ್ ಪಾಲಿಬ್ಯುಟಾಡೀನ್ ಬೈಂಡರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದೊಂದು ಪ್ರಯೋಗಿಸಿ ಪರೀಕ್ಷಿಸಿರುವ ಘನ ಇಂಧನವಾಗಿದ್ದು, ಭಾರತದ ಪಿಎಸ್ಎಲ್‌ವಿ ಹಾಗೂ ಪಿಎಸ್ಎಲ್‌ವಿ ರಾಕೆಟ್‌ಗಳ ಘನ ಇಂಧನ ಹಂತಗಳಲ್ಲಿ ಬಳಸಿಕೊಳ್ಳಲಾಗಿದೆ.

ಮಹತ್ವವೇನು?: ವಿಕ್ರಮ್ ಎಸ್ ರಾಕೆಟ್‌ನ ಯಶಸ್ವಿ ಉಡಾವಣೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು. ಈ ಉಡಾವಣೆ ಯಶಸ್ವಿಯಾದರೆ, ಅದು ವಿಕ್ರಮ್ ಸರಣಿಯ ರಾಕೆಟ್‌ಗಳ ತಂತ್ರಜ್ಞಾನದ ಸಾಮರ್ಥ್ಯವನ್ನು ಸಾಬೀತುಪಡಿಸಲಿದೆ.

ಖಾಸಗಿ ವಲಯಕ್ಕೂ ಆದ್ಯತೆ: ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳು ಭಾಗಿಯಾಗುವುದಕ್ಕೆ 2020ರಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಈಗ ಉಪಗ್ರಹ ಉಡಾವಣೆಯ ಬೇಡಿಕೆಯು ಇಸ್ರೋ ಸಾಮರ್ಥ್ಯವನ್ನು ಮೀರಿ ಹೆಚ್ಚಳ ಕಂಡಿದೆ. ಅದಲ್ಲದೆ ಒಂದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾಗಿ ಇಸ್ರೋ ಬೇರೆ ವಿಚಾರಗಳ ಕುರಿತೂ ಗಮನ ಹರಿಸಬೇಕಾಗಿದೆ. ಆದ್ದರಿಂದ ಈ ವಲಯ ಖಾಸಗಿ ಸಂಸ್ಥೆಗಳಿಗೂ ತೆರೆದುಕೊಂಡಿದ್ದು, ಇಸ್ರೋ ಖಾಸಗಿ ಸಂಸ್ಥೆಗಳಿಗೆ ಮೂಲಭೂತ ಸೌಲಭ್ಯಗಳು ಹಾಗೂ ಜ್ಞಾನವನ್ನು ಒದಗಿಸುತ್ತಿದೆ.

2020ರಲ್ಲಿ ಹಣಕಾಸು ಸಚಿವರು ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಪಾಲ್ಗೊಳ್ಳುವಿಕೆಯನ್ನು‌ ಅನುಮತಿಸಿದ ಬಳಿಕ ಖಾಸಗಿ ರಾಕೆಟ್ ಹಾಗೂ ಉಪಗ್ರಹಗಳ ನಿರ್ಮಾಣಕ್ಕೆ ವಿಶೇಷ ಉತ್ತೇಜನ ದೊರಕಿತು. ಸ್ಕೈರೂಟ್ ಸಂಸ್ಥೆಯನ್ನು ಹೊರತುಪಡಿಸಿ, ಅಗ್ನಿಕುಲ್ ಕಾಸ್ಮೋಸ್ ಸಂಸ್ಥೆಯೂ ಸಹ ತನ್ನ ಸೆಮಿ ಕ್ರಯೋಜೆನಿಕ್ ಅಗ್ನಿಲೆಟ್ ಇಂಜಿನ್ ಪರೀಕ್ಷಿಸಿದೆ.

ಸ್ಕೈರೂಟ್ ಏರೋಸ್ಪೇಸ್: ಸ್ಕೈರೂಟ್ ಏರೋಸ್ಪೇಸ್ ಒಂದು ಭಾರತೀಯ ಖಾಸಗಿ ಬಾಹ್ಯಾಕಾಶ ಉತ್ಪಾದನಾ ಸಂಸ್ಥೆಯಾಗಿದೆ. ಸ್ಕೈರೂಟ್ ತನ್ನದೇ ಆದ ಸರಣಿ ಉಡಾವಣಾ ವಾಹನಗಳನ್ನು, ಅದರಲ್ಲೂ ವಿಶೇಷವಾಗಿ ಸಣ್ಣ ಉಪಗ್ರಹ ಮಾರುಕಟ್ಟೆಗಾಗಿ ನಿರ್ಮಿಸುವ ಉದ್ದೇಶ ಹೊಂದಿದೆ. ಹೈದರಾಬಾದ್​​ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸ್ಕೈರೂಟ್ ಸಂಸ್ಥೆಯನ್ನು 2018ರಲ್ಲಿ ಮಾಜಿ ಇಸ್ರೋ ವಿಜ್ಞಾನಿಗಳು ಆರಂಭಿಸಿದ್ದರು.

ವಿಕ್ರಮ್-ಎಸ್ ಆರಂಭಿಕ ಉಡಾವಣಾ ದಿನಾಂಕವನ್ನು ನವೆಂಬರ್ 15 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ನ.13 ರಂದು, ಹವಾಮಾನ ವೈಪರೀತ್ಯದ ಕಾರಣ ಉಡಾವಣೆ ವಿಳಂಬವಾಗಿದೆ ಎಂದು ಇಸ್ರೋ ಹೇಳಿದೆ.

ಇದನ್ನೂ ಓದಿ: ಬಾಹ್ಯಾಕಾಶದ ಪರಾಕ್ರಮಕ್ಕೆ ಇಸ್ರೋ-ಸ್ಕೈರೂಟ್ ಸಜ್ಜು: ಮೊದಲ ಪ್ರೈವೇಟ್​ ರಾಕೆಟ್​ ಉಡಾವಣೆಗೆ ಅಂಕಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.