ETV Bharat / bharat

ಗೋ'ವಾವ್‌'! ದೇಶದ ಮೊದಲ ಲಿಕ್ಕರ್‌ ಮ್ಯೂಸಿಯಂ ನೋಡಿ - ಗೋವಾ ಲಿಕ್ಕರ್‌ ಮ್ಯೂಸಿಯಂ

ಈ ವಸ್ತು ಸಂಗ್ರಹಾಲಯದಲ್ಲಿ ಪುರಾತನ ಕಾಲದ ಮಾನವ ನಿರ್ಮಿತ ವಸ್ತುಗಳಾದ ಕಡಾಯಿ, ಕೊಪ್ಪರಿಗೆ, ಪಿಪಾಯಿಗಳಂತಹ ಅಪರೂಪದ ವಸ್ತುಗಳಿವೆ. ಅಷ್ಟೇ ಏಕೆ? ಆಧುನಿಕ ಸಾಂಪ್ರದಾಯಿಕ ಶೈಲಿಯ ಗಾಜಿನ ಆಕರ್ಷಕ ವಸ್ತುಗಳನ್ನೂ ನೀವಿಲ್ಲಿ ಕಾಣಬಹುದು. ಇದರಲ್ಲೆಲ್ಲಾ ಸಾಮಾನ್ಯವಾಗಿ ಗೋಡಂಬಿ ಆಧಾರಿತ ಮದ್ಯವನ್ನು ಶತಮಾನದ ಹಿಂದೆಲ್ಲಾ ಸಂಗ್ರಹಿಸಿಡಲಾಗುತ್ತಿತ್ತಂತೆ. ಇಂಥ ಅಪರೂಪದ ತಾಣ ಪ್ರವಾಸಿಗರನ್ನೀಗ ಕೈಬೀಸಿ ತನ್ನತ್ತ ಸೆಳೆಯುತ್ತಿದೆ.

Liquor Museum
ಲಿಕ್ಕರ್‌ ಮ್ಯೂಸಿಯಂ
author img

By

Published : Oct 18, 2021, 12:48 PM IST

ಪಣಜಿ(ಗೋವಾ): ಎಲ್ಲಾದರು ಟೂರ್ ಹೋಗೋಣ ಅಂದ್ರೆ ಅನೇಕರು ಥಟ್‌ ಅಂತ ಗೋವಾ ಹೆಸರು ಹೇಳಿಬಿಡುತ್ತಾರೆ. ಹೌದು, ಪ್ರವಾಸಿಗರ ಸ್ವರ್ಗ ದೇಶದ ಕಡಲ ಕಿನಾರೆಯ ಪುಟ್ಟ ರಾಜ್ಯ ಗೋವಾ. ಇಲ್ಲಿಗೆ ದೇಶ ವಿದೇಶಗಳಿಂದ ಸಹಸ್ರಾರು ಪ್ರವಾಸಿಗರು ಬಂದು ಮೋಜು, ಮಸ್ತಿ ಮಾಡುತ್ತಾರೆ. ಸರ್ಕಾರಕ್ಕೂ ಟೂರಿಸಂ ಬಹುದೊಡ್ಡ ಆದಾಯ ತಂದುಕೊಡುವ ಕ್ಷೇತ್ರ.

ಇಂಥ ಸುಂದರ ತಾಣ ಗೋವಾಗೆ ಪ್ರಯಾಣಿಸುವವರಿಗೆ ಇಲ್ಲೊಂದು ಸ್ವೀಟ್‌ ನ್ಯೂಸ್‌ ಇದೆ. ಒಂದು ವೇಳೆ ನೀವೇನಾದರೂ ಮದ್ಯಪ್ರಿಯರಾದರೆ ಮುಗಿದೇ ಹೋಯ್ತು ಬಿಡಿ!. ಹೌದು, ನೀವು ಮುಂದಿನ ದಿನಗಳಲ್ಲಿ ಗೋವಾಗೆ ಹೋಗುವಿರಾದರೆ ಅಲ್ಲಿರುವ ದೇಶದ ಮೊಟ್ಟಮೊದಲ ಆಲ್ಕೋಹಾಲ್ ಮ್ಯೂಸಿಯಂ ಅರ್ಥಾತ್ ಮದ್ಯ ವಸ್ತು ಸಂಗ್ರಹಾಲಯಕ್ಕೂ ಒಮ್ಮೆ ಭೇಟಿ ಕೊಡಬಹುದು.

ಗೋವಾದಲ್ಲಿರುವ ಲಿಕ್ಕರ್‌ ಮ್ಯೂಸಿಯಂ

ಅಲ್ಲೇನಿದೆ ವಿಶೇಷ?

ಹೌದು, ನಿಮಗಿಲ್ಲಿ ಅಚ್ಚರಿ ಕಾದಿದೆ. ದೇಶದ ಮೊಟ್ಟ ಮೊದಲ ಆಲ್ಕೋಹಾಲ್‌ ಮ್ಯೂಸಿಯಂ ಆರಂಭವಾಗಿದೆ. ಅಯ್ಯೋ ಬೇಡಪ್ಪಾ ನಾವು ಮದ್ಯ ಸೇವಿಸಲ್ಲ ಅನ್ನೋರಿಗೂ ಇದೊಮ್ಮೆ ಭೇಟಿ ನೀಡಬೇಕಿರುವ ತಾಣ. ಏಕೆಂದರೆ ಇಲ್ಲಿರುವ ಪುರಾತನ ಸಲಕರಣೆಗಳು ಎಂಥವರನ್ನೂ ಅರೆಕ್ಷಣ ಕುತೂಹಲದ ಲೋಕಕ್ಕೆ ಕರೆದೊಯ್ಯುತ್ತವೆ.

ಸಾವಿರಾರು ವರ್ಷಗಳಷ್ಟು ಹಿಂದೆಲ್ಲಾ ಮದ್ಯವನ್ನು ಸಂಗ್ರಹಿಸಿಡುತ್ತಿದ್ದ ನೂರಾರು ಮೋಹಕ ಮಣ್ಣಿನ ಪಿಪಾಯಿಗಳು, ಕೊಪ್ಪರಿಗೆ, ಕಡಾಯಿ. ಅಷ್ಟೇ ಅಲ್ಲ, ಆಧುನಿಕ ಜಗತ್ತಿನ ಗಾಜಿನ ಸಲಕರಣೆಗಳನ್ನು ನೀವಿಲ್ಲಿ ಕಾಣಬಹುದು. ಇಂದಿನ ದಿನಮಾನಗಳಲ್ಲಿ ಬಲು ಅಪರೂಪದಂತೆ ಗೋಚರಿಸುವ ಗೋಲಿ ಸೋಡಾ ಬಾಟಲಿಗಳು ಸೇರಿದಂತೆ ಹತ್ತು ಹಲವು ಬಗೆಯ ಸಲಕರಣೆಗಳು ಇಲ್ಲಿ ನೂರಾರಿವೆ. ಅವುಗಳನ್ನು ಆಸ್ಥೆಯಿಂದ ಸಂಗ್ರಹಿಸಿ ಪ್ರವಾಸಿಗರಿಗೆ ತೆರೆದಿಟ್ಟಿದ್ದಾರೆ. ಹಿಂದೆಲ್ಲಾ ನಮ್ಮ ಪೂರ್ವಜರು ಮದ್ಯಕ್ಕೆ ಮರುಳಾಗಿ ಇಂಥ ವಿಶಿಷ್ಟ ಪಾತ್ರೆಗಳನ್ನು ಅವನ್ನು ಸ್ಟೋರ್ ಮಾಡಿ ಇಡುತ್ತಿದ್ದರಂತೆ. ಅಂದಹಾಗೆ, ಈ ಮ್ಯೂಸಿಯಂ ಅನ್ನು ಇಲ್ಲಿನ ಉದ್ಯಮಿ ನಂದನ್ ಕುಡ್ಚಾಡ್ಕರ್‌ ಎಂಬವರು ಉತ್ತರ ಗೋವಾದ ಕಾಂಡೋಲಿಮ್‌ ಗ್ರಾಮದಲ್ಲಿ ತೆರೆದಿದ್ದಾರೆ.

ಈ ಮ್ಯೂಸಿಯಂನ ಉದ್ದೇಶವೇನು?

ಗೋವಾದ ಶ್ರೀಮಂತ ಸಂಸ್ಕೃತಿಯನ್ನು ದೇಶ-ವಿದೇಶದ ಜನರಿಗೆ ತೋರಿಸುವುದು ಇದರ ಹಿಂದಿನ ಉದ್ದೇಶ. ಇದ್ರ ಜೊತೆಗೆ, ಗೋವಾದ ಸ್ಥಳೀಯ ಜನಪ್ರಿಯ ಮದ್ಯ ಫೆನಿಯನ್ನು ಜಗತ್ತಿಗೆ ಪರಿಚಯಿಸುತ್ತಿದ್ದೇವೆ ಎನ್ನುತ್ತಾರೆ ಕುಡ್ಚಾಡ್ಕರ್.

'ಇದನ್ನು ಪ್ರಾರಂಭಿಸೋಕೂ ಮುನ್ನ ನಾನು ಜಗತ್ತಿನ ಎಲ್ಲಾದರೂ ಆಲ್ಕೋಹಾಲ್ ಮ್ಯೂಸಿಯಂ ಇದೆಯೇ ಎಂದು ಯೋಚಿಸಿದೆ. ಆಗ ಹೊಳೆದಿದ್ದೇ ಈ ಐಡಿಯಾ. ಅಸಲಿಗೆ ಜಗತ್ತಿನಲ್ಲಿ ಎಲ್ಲೂ ಈ ಬಗೆಯ ಮ್ಯೂಸಿಯಂ ಅನ್ನು ನೀವು ಕಾಣಲಾರಿರಿ. ನೀವು ಸ್ಕಾಟ್ಲೆಂಡ್ ಅಥವಾ ರಷ್ಯಾಗೆ ಹೋದರೆ ಅಲ್ಲಿನ ಜನರಿಗೆ ಅವರ ಸ್ಥಳೀಯ ಪ್ರಾಕೃತಿಕ ಸಂಪನ್ಮೂಲ, ಡ್ರಿಂಕ್ ಬಗ್ಗೆ ಅಪಾರ ಅಭಿಮಾನವನ್ನು ಕಾಣಬಹುದು' ಅನ್ನೋದು ಕುಡ್ಚಾಡ್ಕರ್ ಅನುಭವ.

'ಇಲ್ಲಿ ನಾವು ಕಾಜು ಫೆನಿ ಎಂಬ ವಿಶೇಷ ಬಗೆಯ ಮದ್ಯವನ್ನು ಗ್ರಾಹಕರಿಗೆ ನೀಡುತ್ತೇವೆ. ಇದನ್ನು ನಾವು ನೈಸರ್ಗಿಕವಾಗಿ ಹುದುಗಿಸುತ್ತೇವೆ. ನಮ್ಮ ಗೋವಾದಲ್ಲಿ ಮದ್ಯ ಅನ್ನೋದು ಅತಿಥಿ ಸತ್ಕಾರದ ಭಾಗ' ಎನ್ನುತ್ತಾರೆ ಆಲ್ಕೋಹಾಲ್ ಮ್ಯೂಸಿಎಂನ ಸಿಇಓ ಅರ್ಮಾಂಡೋ ಡ್ವಾರ್ಟೆ.

ಪ್ರವಾಸಿಗರು ಏನಂತಾರೆ?

'ವಾಹ್! ಇಲ್ಲಿ ನಮಗೆ ಸಿಗುವ ಮಾಹಿತಿ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತೆ. ಈ ಜಾಗ ನೋಡಿ ನಾನು ಮಂತ್ರಮುಗ್ಧನಾಗಿಬಿಟ್ಟೆ. ಇದು ಭೇಟಿ ಕೊಡಲು ಪ್ರಶಸ್ತ ತಾಣ' ಎಂದು ಓರ್ವ ಟೂರಿಸ್ಟ್ ಸಂತಸ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.