ETV Bharat / bharat

ಭಾರತವನ್ನು ವಿಶ್ವದ ಅತಿ ದೊಡ್ಡ ಸ್ಟಾರ್ಟ್​​ಅಪ್​ ಆಗಿಸುವುದೇ ನಮ್ಮ ಗುರಿ: ಪಿಯೂಷ್ ಗೋಯಲ್ - ರೌಂಡ್‌ಟೇಬಲ್ ಆನ್ ಇಂಡಿಯನ್ ಸ್ಟಾರ್ಟಪ್​ ಇಕೋಸಿಸ್ಟಮ್ ಅಧಿವೇಶನ

ಅಬುಧಾಬಿಯಲ್ಲಿ ನಡೆದ ಗೇಟ್‌ ವೇ ಟು ಗ್ರೋತ್ - ರೌಂಡ್‌ಟೇಬಲ್ ಆನ್ ಇಂಡಿಯನ್ ಸ್ಟಾರ್ಟಪ್​ ಇಕೋಸಿಸ್ಟಮ್ ಅಧಿವೇಶನಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಭಾಗವಹಿಸಿದ್ದರು.

Minister Piyush Goyal
ಪಿಯೂಷ್ ಗೋಯಲ್
author img

By

Published : Mar 29, 2022, 10:38 AM IST

ನವದೆಹಲಿ: ಭಾರತವು ವಿಶ್ವದ ಅತಿದೊಡ್ಡ ಸ್ಟಾರ್ಟಪ್ ಹಬ್​ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದರು.

ಅಬುಧಾಬಿಯಲ್ಲಿ ನಡೆದ ಗೇಟ್‌ ವೇ ಟು ಗ್ರೋತ್ - ರೌಂಡ್‌ಟೇಬಲ್ ಆನ್ ಇಂಡಿಯನ್ ಸ್ಟಾರ್ಟಪ್​ ಇಕೋಸಿಸ್ಟಮ್ ಅಧಿವೇಶನಲ್ಲಿ ಮಾತನಾಡಿದ ಅವರು, ನಾವು ಮೂರನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಾಗಿದ್ದೇವೆ. ಆದರೆ, ಭಾರತ ವಿಶ್ವದ ನಂಬರ್ ಒನ್ ಸ್ಟಾರ್ಟ್​ಪ್​​ ತಾಣವಾಗಬೇಕು ಎಂದು ನಮ್ಮ ಆಕಾಂಕ್ಷೆಯಾಗಿದೆ. ಸ್ಟಾರ್ಟಪ್ ಬಗ್ ಭಾರತದ ಕಲ್ಪನೆ ಸೆಳೆದಿದೆ. ಸ್ಟಾರ್ಟ್​ಅಪ್​ ಉದ್ಯಮವು ಪ್ರತಿನಿಧಿಸುವ ಸಂಪೂರ್ಣ ನಾವೀನ್ಯತೆ ಪರಿಸರ ವ್ಯವಸ್ಥೆಯು ಭಾರತಕ್ಕೆ ಹೊಸ ದಿಕ್ಕ ಮತ್ತು ವೇಗವನ್ನು ನೀಡುತ್ತಿದೆ ಎಂದರು.

ಸ್ಟಾರ್ಟಪ್​ಗಳಿಗೆ ಭಾರತವು ಅತ್ಯುತ್ತಮ ಪರಿಸರ ವ್ಯವಸ್ಥೆ ನೀಡುತ್ತದೆ. ಹೂಡಿಕೆದಾರರು ಮತ್ತು ಉದ್ಯಮಿಗಳ ನಡುವೆ ಸಮತೋಲನವಾದ ಫಲಿತಾಂಶವನ್ನು ಪಡೆಯಲು ಮತ್ತು ಎಲ್ಲರಿಗೂ ಗೆಲುವು ಸಾಧಿಸಲು ಉತ್ತಮವಾದ ವ್ಯವಸ್ಥೆ ಒದಗಿಸುತ್ತದೆ. ದುಬೈ ಎಕ್ಸ್‌ಪೋದಿಂದ ನಮ್ಮ ಸ್ಟಾರ್ಟಪ್​ಗಳು ಹಣಕಾಸು ಸಂಗ್ರಹಿಸಲು ಅವಕಾಶ ಪಡೆದಿದ್ದು, ಅವರಿಂದ ಉತ್ತಮವಾದ ಸ್ಪಂದನೆ ವ್ಯಕ್ತವಾಗಿದೆ. ಇದು ಯುಎಇಯೊಂದಿಗೆ ಭಾರತದ ಸ್ನೇಹ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಸಚಿವ ಪಿಯೂಷ್​ ಗೋಯಲ್​ ಹೇಳಿದ್ದಾರೆ.

ಸ್ಟಾರ್ಟ್​ಅಪ್​ಗಳನ್ನು ಉತ್ತೇಜಿಸುವಲ್ಲಿ ಸರ್ಕಾರದ ಪಾತ್ರದ ಕುರಿತು ಭಾರತವು ಸಮತಟ್ಟಾದ ಮೈದಾನ ಮತ್ತು ಅತ್ಯುತ್ತಮ ವ್ಯಾಪಾರ ಪರಿಸರ ವ್ಯವಸ್ಥೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ನಾವು ಇತ್ತೀಚೆಗೆ ಯುಎಇಯೊಂದಿಗೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು (CEPA) ಅಂತಿಮಗೊಳಿಸಿದ್ದೇವೆ. ಇದು ದ್ವಿಪಕ್ಷೀಯ ವ್ಯಾಪಾರವಾಗಿದ್ದು, ಆಕರ್ಷಕ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ನಿರೀಕ್ಷಿಸಲಾಗಿದೆ ಎಂದರು.

ಸುಸ್ಥಿರತೆ, ಏರೋಸ್ಪೇಸ್, ​​ಬಾಹ್ಯಾಕಾಶ ತಂತ್ರಜ್ಞಾನ, ಸಂಪರ್ಕ, ಡೇಟಾ ಅನಾಲಿಟಿಕ್ಸ್, 5G, ಮೆಟಾವರ್ಸ್ ಇತ್ಯಾದಿ ಕ್ಷೇತ್ರಗಳಲ್ಲಿ ಈ ಪಾಲುದಾರಿಕೆಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತೇವೆ ಎಂಬ ಭರವಸೆಯನ್ನು ನಾನು ನೀಡಬಲ್ಲೆ. ನಾವು ಪರಸ್ಪರರ ಕೊಡುಗೆಗಳು ಮತ್ತು ಪರಿಣತಿಯನ್ನು ಬಳಸಿಕೊಳ್ಳಲು ಎದುರು ನೋಡುತ್ತಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.

ಯುಎಇ-ಭಾರತ ಪಾಲುದಾರಿಕೆಯು ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲು ಉದ್ದೇಶಿಸಲಾಗಿದೆ. ಈ ಮೂಲಕ ಪ್ರಪಂಚದಾದ್ಯಂತ ಶತಕೋಟಿ ಜನರಿಗೆ ಉತ್ತಮ ಭವಿಷ್ಯವನ್ನು ಖಾತ್ರಿಪಡಿಸುತ್ತದೆ. ಇದು 21ನೇ ಶತಮಾನಕ್ಕೆ ನಿರ್ಣಾಯಕ ಪಾಲುದಾರಿಕೆಯಾಗಿದೆ ಪಿಯೂಷ್​ ಗೋಯಲ್​ ಘೋಷಿಸಿದರು.

ಇದನ್ನೂ ಓದಿ: ದೇಶದಲ್ಲಿ 7ನೇ ದಿನವೂ ತೈಲ ಬೆಲೆ ಏರಿಕೆ ಶಾಕ್‌; ಪೆಟ್ರೋಲ್‌ 80 ಪೈಸೆ, ಡೀಸೆಲ್‌ 70 ಪೈಸೆ ಹೆಚ್ಚಳ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.