ನವದೆಹಲಿ: ಭಾರತದ 10 ರಾಜ್ಯಗಳು ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟಾರೆ ಸಾವಿನ ಪ್ರಮಾಣದಲ್ಲಿ ಶೇ 85.83ರಷ್ಟು ದಾಖಲಿಸಿವೆ. ಇದರಲ್ಲಿ ಮಹಾರಾಷ್ಟ್ರ, ದೆಹಲಿ ಮತ್ತು ಛತ್ತೀಸ್‌ಗಢ ಅರ್ಧಕ್ಕಿಂತ ಹೆಚ್ಚು ವರದಿ ಮಾಡಿವೆ.
ಕಳೆದ 24 ಗಂಟೆಗಳಲ್ಲಿ ಒಟ್ಟು 1,341 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಸಾವು - ನೋವು (398), ದೆಹಲಿ (141), ಛತ್ತೀಸ್‌ಗಢ 138, ಉತ್ತರ ಪ್ರದೇಶ (103), ಗುಜರಾತ್ (94), ಕರ್ನಾಟಕ (78), ಮಧ್ಯಪ್ರದೇಶ (60), ಜಾರ್ಖಂಡ್ (56), ಪಂಜಾಬ್ (50) ಮತ್ತು ತಮಿಳುನಾಡು (33) ದಾಖಲಿಸಿವೆ.
ಇದೇ ಅವಧಿಯಲ್ಲಿ ಒಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಯಾವುದೇ ಕೋವಿಡ್ -19 ಸಾವು ವರದಿ ಮಾಡಿಲ್ಲ. ಲಡಾಖ್ (ಯುಟಿ), ಡಿ & ಡಿ ಮತ್ತು ಡಿ & ಎನ್, ತ್ರಿಪುರ, ಸಿಕ್ಕಿಂ, ಮಿಜೋರಾಂ, ಮಣಿಪುರ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಹಾಗೂ ಅರುಣಾಚಲ ಪ್ರದೇಶ.
ಭಾರತದ ಒಟ್ಟು ಸಕ್ರಿಯ ಸೋಂಕಿನ ಪ್ರಕರಣಗಳು 16,79,740 ತಲುಪಿದೆ. ಈಗ ದೇಶದ ಒಟ್ಟು ಸಕಾರಾತ್ಮಕ ಪ್ರಕರಣಗಳಲ್ಲಿ ಶೇ 11.56ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು ಸಕ್ರಿಯ ಕೇಸ್ 1,09,997 ಪ್ರಕರಣಗಳಷ್ಟಾಗಿದೆ.
ಮಹಾರಾಷ್ಟ್ರ, ಛತ್ತೀಸ್‌ಗಢ, ಉತ್ತರ ಪ್ರದೇಶ, ಕರ್ನಾಟಕ ಮತ್ತು ಕೇರಳದ ಐದು ರಾಜ್ಯಗಳು ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ 65.02ರಷ್ಟು ಹೊಂದಿವೆ. ದೇಶದ ಒಟ್ಟು ಕ್ರಿಯಾಶೀಲ ಕೇಸ್ಗಳ ಪೈಕಿ ಶೇ 38.09ರಷ್ಟು ಮಹಾರಾಷ್ಟ್ರ ಹೊಂದಿದೆ.