ETV Bharat / bharat

ಸೋಶಿಯಲ್ ಮೀಡಿಯಾ ಗೆಳೆಯನ ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಿದ ರಾಜಸ್ಥಾನದ ವಿವಾಹಿತ ಮಹಿಳೆ - ಫೇಸ್​ಬುಕ್​ನಲ್ಲಿ ಅರಳಿದ ಪ್ರೀತಿ

ಪಾಕಿಸ್ತಾನದ ಮಹಿಳೆಯೊಬ್ಬಳು ತನ್ನ ಪ್ರಿಯಕರನನ್ನು ಭೇಟಿ ಮಾಡಲು ಭಾರತಕ್ಕೆ ಆಗಮಿಸಿದ್ದ ಘಟನೆಯ ಬೆನ್ನಲ್ಲೇ ಭಾರತದ ಮಹಿಳೆಯೊಬ್ಬಳು ತನ್ನ ಸೋಶಿಯಲ್‌ ಮೀಡಿಯಾ ಗೆಳೆಯನ ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

indian-woman-went-to-pakistan-to-meet-her-lover
ಪ್ರಿಯಕರನನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಿದ ಭಾರತೀಯ ವಿವಾಹಿತ ಮಹಿಳೆ
author img

By

Published : Jul 24, 2023, 11:35 AM IST

Updated : Jul 24, 2023, 2:16 PM IST

ಜೈಪುರ/ಪೇಶಾವರ : ಪಾಕಿಸ್ತಾನದ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಭೇಟಿಗೆಂದು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಪಾಕಿಸ್ತಾನದ ಸೀಮಾ ಗುಲಾಂ ಹೈದರ್​ ತನ್ನ ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಆಗಮಿಸಿ ಪ್ರಿಯಕರ ಸಚಿನ್ ಮೀನಾನೊಂದಿಗೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ವಾಸವಾಗಿದ್ದಳು. ಈಕೆಯ ಬಗ್ಗೆ ತಿಳಿದ ಉತ್ತರ ಪ್ರದೇಶ ಪೊಲೀಸರು ಇಬ್ಬರನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.

ಈ ಪ್ರಕರಣದ ಬೆನ್ನಲ್ಲೇ ಇಂತಹುದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಎರಡು ಮಕ್ಕಳ ತಾಯಿಯೊಬ್ಬಳು ತನ್ನ ಫೇಸ್​ಬುಕ್​​ ಗೆಳೆಯನನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಿದ್ದಾರೆ. ಉತ್ತರ ಪ್ರದೇಶದ ಕೈಲರ್​ ಗ್ರಾಮದ ನಿವಾಸಿ, ಸದ್ಯ ರಾಜಸ್ಥಾನದ ಅಲ್ವರ್​ ಜಿಲ್ಲೆಯಲ್ಲಿ ವಾಸವಾಗಿದ್ದ ಅಂಜು ಎಂಬ ಮಹಿಳೆಯೇ ಪಾಕಿಸ್ತಾನಕ್ಕೆ ತೆರಳಿದವರು.

  • #WATCH | Bhiwadi, Rajasthan | Arvind Kumar, husband of Anju, who travelled to Pakistan, says "Before leaving, my wife told me that she is visiting one of her friends in Jaipur. I got a voice call last night, she said that I am in Lahore. I have no idea why has she gone to Lahore… pic.twitter.com/DT7rH7Ddwo

    — ANI MP/CG/Rajasthan (@ANI_MP_CG_RJ) July 24, 2023 " class="align-text-top noRightClick twitterSection" data=" ">

ಗೆಳೆಯನ ಅರಸಿ ಪಾಕ್​ಗೆ ತೆರಳಿದ ಎರಡು ಮಕ್ಕಳ ತಾಯಿ : 34 ವರ್ಷ ಅಂಜು ಎಂಬ ಮಹಿಳೆಗೆ ಫೇಸ್​ಬುಕ್​ನಲ್ಲಿ 29 ವರ್ಷದ ನಸ್ರುಲ್ಲ ಎಂಬಾತನ ಪರಿಚಯವಾಗಿತ್ತು. ಇಬ್ಬರ ಪರಿಚಯ ಗಾಢ ಸ್ನೇಹಕ್ಕೆ ತಿರುಗಿದೆ. ಅಂಜು ತನ್ನ ಗೆಳೆಯ ನಸ್ರುಲ್ಲನನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಿದ್ದರು. ಸದ್ಯ ಈ ಮಹಿಳೆಯು ಪಾಕಿಸ್ತಾನದ ಅಪ್ಪರ್​ ದಿರ್​ ಜಿಲ್ಲೆಯ ಖೈಬರ್ ಪಖ್ತುಂಖ್ವಾದಲ್ಲಿ ಇರುವುದಾಗಿ ತಿಳಿದುಬಂದಿದೆ. ಅಲ್ಲದೇ ಪಾಕಿಸ್ತಾನಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು, ಪಾಸ್​ಪೋರ್ಟ್​ ಪರಿಶೀಲನೆ ನಡೆಸಿ ಬಿಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಫೇಸ್​ಬುಕ್​ನಲ್ಲಿ ಮೂಲಕ ಪ್ರೀತಿ : ಪಾಕಿಸ್ತಾನದ ನಸ್ರುಲ್ಲ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ. ಈತನಿಗೆ ಕಳೆದ ಕೆಲವು ತಿಂಗಳುಗಳ ಹಿಂದೆ ಫೇಸ್​ಬುಕ್​ನಲ್ಲಿ ಅಂಜು ಎಂಬ ಭಾರತೀಯ ಮಹಿಳೆಯ ಪರಿಚಯವಾಗಿದೆ. ಇದಾದ ನಂತರದ ಬೆಳವಣಿಗೆಯಲ್ಲಿ ತನ್ನ ಗೆಳೆಯ ನಸ್ರುಲ್ಲಾನನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಲು ನಿರ್ಧರಿಸಿದ್ದ ಅಂಜು, ಪಾಸ್​ಪೋರ್ಟ್​ ಮತ್ತು ವಿವಿಧ ದಾಖಲೆಗಳೊಂದಿಗೆ ಆ ದೇಶಕ್ಕೆ ತೆರಳಿದ್ದಳು. ಈ ಬಗ್ಗೆ ಮಾಹಿತಿ ನೀಡಿರುವ ಪಾಕ್​ ಪೊಲೀಸ್​ ಅಧಿಕಾರಿಗಳು, ಅಂಜು ಮತ್ತು ಆಕೆಯ ಗೆಳೆಯನನ್ನು ಈಗಾಗಲೇ ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲನೆ ನಡೆಸಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

  • #WATCH | Bhiwadi ASP Sujit Shankar, says "According to the preliminary investigation, we got to know that this woman, Anju was in touch with a Pakistan-based man for 2-3 years through Facebook, and WhatsApp. She informed her family members that she is travelling to Amritsar but… pic.twitter.com/v15Sw1XV2o

ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ತೆರಳಿದ ಮಹಿಳೆ : ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ರಾಜಸ್ಥಾನ ಪೊಲೀಸರು ಭಿವಾಡಿಯಲ್ಲಿರುವ ಅಂಜು ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಾಹಿತಿ ನೀಡಿದ ಅಂಜು ಪತ್ನಿ ಅರವಿಂದ್​, "ಪತ್ನಿ ಕಳೆದ ಗುರುವಾರ ಜೈಪುರಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಳು. ಗೆಳತಿಯನ್ನು ಭೇಟಿ ಮಾಡಲು ಹೋಗುತ್ತಿರುವುದಾಗಿ ಹೇಳಿದ್ದಳು. ಇದಾದ ನಂತರ ಪಾಕಿಸ್ತಾನಕ್ಕೆ ತೆರಳಿರುವುದು ಗೊತ್ತಾಗಿದೆ. ಕಳೆದ ಕೆಲವು ದಿನಗಳ ಹಿಂದೆ ವಾಟ್ಸ್‌ ಆ್ಯಪ್​ನಲ್ಲಿ ಮಾತನಾಡಿದೆ. ಈ ಸಂದರ್ಭದಲ್ಲಿ ಆಕೆ ಪಾಕಿಸ್ತಾನದ ಲಾಹೋರ್​ನಲ್ಲಿ ಇರುವುದು ತಿಳಿಯಿತು" ಎಂದರು.

"ನಾವು 2007ರಲ್ಲಿ ಮದುವೆಯಾಗಿದ್ದೆವು. ಅಲ್ಲಿಂದ ಇಲ್ಲಿಯವರೆಗೆ ಒಟ್ಟಿಗೆ ಸಂಸಾರ ನಡೆಸುತ್ತಿದ್ದೆವು. ನಮಗೆ 15 ವರ್ಷದ ಹೆಣ್ಣು ಮಗು ಮತ್ತು 6 ವರ್ಷದ ಒಂದು ಗಂಡು ಮಗುವಿದೆ" ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅರವಿಂದ್​, "ಪತ್ನಿ ಅಂಜು ತನ್ನ ತಂಗಿಗೆ ಕರೆ ಮಾಡಿ ನಾನು ಲಾಹೋರ್​ನಲ್ಲಿ ಇರುವುದಾಗಿ ಹೇಳಿದ್ದಾಳೆ. ನಾನು ಆಕೆಯಲ್ಲಿ ಮಾತನಾಡಿದ್ದೇನೆ. ಜೊತೆಗೆ ಆಕೆಯಲ್ಲಿ ಮರಳಿ ಭಾರತಕ್ಕೆ ಬರುವಂತೆ ವಿನಂತಿಸಿದ್ದೇನೆ" ಎಂದರು. "ವಿದೇಶದಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು 2020ರಲ್ಲಿ ಪಾಸ್​ಪೋರ್ಟ್​ ಪಡೆದುಕೊಂಡಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಯಾರೊಂದಿಗೆ ಸಂಬಂಧ ಹೊಂದಿದ್ದಳು ಎಂಬ ಬಗ್ಗೆ ನನಗೆ ಗೊತ್ತಿಲ್ಲ" ಎಂದು ಹೇಳಿದರು.

ಈ ಸಂಬಂಧ ಭಿವಾಡಿ ಎಎಸ್ಪಿ ಸುಜಿತ್ ಶಂಕರ್ ಮಾತನಾಡಿ, ‘‘ಪ್ರಾಥಮಿಕ ತನಿಖೆಯ ಪ್ರಕಾರ, ಅಂಜು ಎಂಬ ಮಹಿಳೆ ಪಾಕಿಸ್ತಾನ ಮೂಲದ ವ್ಯಕ್ತಿಯೊಂದಿಗೆ ಕಳೆದ 2-3 ವರ್ಷಗಳಿಂದ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್ ಮೂಲಕ ಸಂಪರ್ಕದಲ್ಲಿದ್ದಳು. ಈಕೆ ಅಮೃತಸರಕ್ಕೆ ತೆರಳುವುದಾಗಿ ಕುಟುಂಬ ಸದಸ್ಯರಿಗೆ ಹೇಳಿ ಜುಲೈ 21 ರಂದು ಪಾಕಿಸ್ತಾನಕ್ಕೆ ತೆರಳಿದ್ದಾಳೆ. ಈ ಬಗ್ಗೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ಅಂಜು ಇಂದು ಮರಳಿ ಬರುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಇದೊಂದು ಪ್ರೇಮ ಪ್ರಕರಣವಾಗಿರಬಹುದು. ಈ ಬಗ್ಗೆ ಸಾಕ್ಷ್ಯ ಸಿಗುವವರೆಗೆ ಹೆಚ್ಚು ಏನನ್ನೂ ಹೇಳಲಾಗುವುದಿಲ್ಲ. ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲವಾದ್ದರಿಂದ ಔಪಚಾರಿಕ ತನಿಖೆ ನಡೆಸಿಲ್ಲ. ಈ ಸಂಬಂಧ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಭಾರತದ ಅಂಜು ವಾಘಾ ಮತ್ತು ಅಟ್ಟಾರಿ ಗಡಿ ಪ್ರದೇಶದ ಮೂಲಕ ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಸೀಮಾ ಹೈದರ್​ ಪ್ರಕರಣದಲ್ಲಿ ಆಕೆ ನೇಪಾಳದ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದರು.

ಇದನ್ನೂ ಓದಿ : ಬಿಡುವಿಲ್ಲದೇ ಮಾಧ್ಯಮಗಳಿಗೆ ಸಂದರ್ಶನ: ಪಾಕಿಸ್ತಾನದ ಸೀಮಾ ಹೈದರ್​ ಸುಸ್ತು

Last Updated : Jul 24, 2023, 2:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.