ETV Bharat / bharat

ಕೃತಕ ಬುದ್ಧಿಮತ್ತೆ ಅಲ್ಗಾರಿದಮ್ ಅಭಿವೃದ್ಧಿಪಡಿಸಿದ ಭಾರತೀಯ ವಿಜ್ಞಾನಿಗಳು

author img

By

Published : Aug 12, 2022, 10:32 AM IST

ಭಾರತೀಯ ವಿಜ್ಞಾನಿಗಳು ಕೃತಕ ಬುದ್ಧಿಮತ್ತೆ ಅಲ್ಗಾರಿದಮ್ ಅನ್ನು ಅಭಿವೃದ್ಧಿಪಡಿಸಿದ್ದು, ಅದು ಇಸಿಜಿಯಿಂದ ಮಧುಮೇಹವನ್ನು ಪತ್ತೆ ಮಾಡುತ್ತದೆಯಂತೆ.

AI algorithm
ಕೃತಕ ಬುದ್ಧಿಮತ್ತೆ

ನವದೆಹಲಿ: ಭಾರತೀಯ ವಿಜ್ಞಾನಿಗಳ ತಂಡವೊಂದು ಕೃತಕ ಬುದ್ಧಿಮತ್ತೆ (ಎಐ) ಅಲ್ಗಾರಿದಮ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಇಸಿಜಿ (ಎಲೆಕ್ಟ್ರೋಕಾರ್ಡಿಯೋಗ್ರಾಮ್) ನಲ್ಲಿ ದಾಖಲಾಗುವ ಹೃದಯ ಬಡಿತದ ಸಹಾಯದಿಂದ ಮಧುಮೇಹ ಮತ್ತು ಪೂರ್ವ - ಮಧುಮೇಹವನ್ನು ನಿಖರವಾಗಿ ಊಹಿಸಲು ಸಹಕಾರಿಯಾಗಿದೆ.

ನಾಗ್ಪುರದ ಲತಾ ಮೆಡಿಕಲ್ ರಿಸರ್ಚ್ ಫೌಂಡೇಶನ್‌ನ ತಂಡವು 1,262 ವ್ಯಕ್ತಿಗಳಿಂದ ಕ್ಲಿನಿಕಲ್ ಡೇಟಾ ಸಂಗ್ರಹಿಸಿ ಅಧ್ಯಯನ ಮಾಡಿದೆ. ಇದು ವೈಯಕ್ತಿಕ ಹೃದಯ ಬಡಿತಗಳ ಆಕಾರ ಮತ್ತು ಗಾತ್ರದ ಆಧಾರದ ಮೇಲೆ ಅಲ್ಗಾರಿದಮ್, ಮಧುಮೇಹ ಮತ್ತು ಪ್ರಿಡಿಯಾಬಿಟಿಸ್ ಅನ್ನು ತ್ವರಿತವಾಗಿ ಪತ್ತೆ ಮಾಡುತ್ತದೆ.

ಪ್ರಸ್ತುತ ರೋಗನಿರ್ಣಯ ವಿಧಾನಗಳಿಗೆ ಹೋಲಿಸಿದರೆ ನಮ್ಮ ಅಧ್ಯಯನವು ತುಲನಾತ್ಮಕವಾಗಿದ್ದು, ಅಗ್ಗವಾಗಿದೆ ಎಂದು ವಿಜ್ಞಾನಿಗಳ ತಂಡ ತಿಳಿಸಿದೆ. 2019 ರಲ್ಲಿ ಪ್ರಪಂಚದಾದ್ಯಂತ ಅಂದಾಜು 463 ಮಿಲಿಯನ್ ವಯಸ್ಕರು ಮಧುಮೇಹ ಹೊಂದಿದ್ದರು. ರೋಗವನ್ನು ಆರಂಭಿಕ ಹಂತಗಳಲ್ಲಿ ಪತ್ತೆಹಚ್ಚುವುದರಿಂದ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುವುದನ್ನ ತಡೆಗಟ್ಟಬಹುದು. ಆದರೆ, ರೋಗ ನಿರ್ಣಯವು ರಕ್ತದಲ್ಲಿನ ಗ್ಲೂಕೋಸ್‌ನ ಮಾಪನದ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಕೃತಕ ಬುದ್ಧಿಮತ್ತೆ ಎಂದರೇನು?: ಕೃತಕ ಬುದ್ಧಿಮತ್ತೆ (ಎಐ) ಎನ್ನುವುದು ಕಂಪ್ಯೂಟರ್ ವಿಜ್ಞಾನದ ಶಾಖೆಯಾಗಿದೆ. ಮನುಷ್ಯರಂತೆ ಯೋಚಿಸಿ, ಕೆಲಸ ಮಾಡುವ ಬುದ್ಧಿವಂತ ಯಂತ್ರಗಳ ಅಭಿವೃದ್ಧಿಗೆ ಇದು ಒತ್ತು ನೀಡುತ್ತದೆ. ಚೆಸ್ ಆಡುವ ಕಂಪ್ಯೂಟರ್​ಗಳು, ಸ್ವಯಂಚಾಲಿತ ಕಾರ್​ಗಳು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ. ಸಾರಿಗೆ, ಉತ್ಪಾದನೆ, ಹಣಕಾಸು, ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿ ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಕೃತಕ ಬುದ್ಧಿಮತ್ತೆ ಬಳಸಲಾಗುತ್ತಿದೆ.

ಯಾಂತ್ರೀಕರಣ, ಚಾಣಾಕ್ಷತನದ ನಿರ್ಧಾರ, ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ, ಪುನರಾವರ್ತಿತ ಕೆಲಸದ ಸುಲಭ ನಿರ್ವಹಣೆ ಮುಂತಾದವುಗಳು ಎಐನ ಪ್ರಯೋಜನಗಳಾಗಿವೆ. ಅಮೆರಿಕದ ಕಂಪ್ಯೂಟರ್ ವಿಜ್ಞಾನಿ ಜಾನ್ ಮೆಕ್ ಕಾರ್ತಿ ಅವರನ್ನು ‘ಕೃತಕ ಬುದ್ಧಿಮತ್ತೆಯ ಜನಕ’ ಎಂದು ಗುರುತಿಸುತ್ತಾರೆ. 1980 ರ ದಶಕದ ಆರಂಭದಲ್ಲಿ ಕಂಪ್ಯೂಟಿಂಗ್ ವಿಜ್ಞಾನಿಗಳಾದ ಬಾರ್ ಮತ್ತು ಫೀಗೆನ್‌ಬಾಮ್ ಕೃತಕ ಬುದ್ಧಿಮತ್ತೆಯ (AI) ವ್ಯಾಖ್ಯಾನ ಪ್ರಸ್ತಾಪಿಸಿದರು. ನಂತರ, ಹಲವಾರು ಅಲ್ಗಾರಿದಮ್‌ಗಳು ಮತ್ತು ಸಾಫ್ಟ್‌ವೇರ್ ಸಿಸ್ಟಮ್‌ಗಳನ್ನು AI ಎಂದು ಉಲ್ಲೇಖಿಸಲು ಪ್ರಾರಂಭಿಸಲಾಯಿತು.

ಇದನ್ನೂ ಓದಿ: World Diabetes Day 2021: ಡಯಾಬಿಟೀಸ್​ನಿಂದ ನಿತ್ಯ ಸಾವಿನ ಸಂಖ್ಯೆ ಎಷ್ಟು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.