ETV Bharat / bharat

ಟರ್ಬೈನ್, ವಿಮಾನದ ಭಾಗಗಳ ದುರಸ್ತಿಗಾಗಿ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಭಾರತದ ವಿಜ್ಞಾನಿ - ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಭಾರತದಲ್ಲಿ ಈಗ ವೆಲ್ಡಿಂಗ್ ಮತ್ತು ಥರ್ಮಲ್ ಸ್ಪ್ರೇಯಿಂಗ್ ಹಾಗೂ ಇತರ ದುರಸ್ತಿ ತಂತ್ರಗಳಿವೆ. ಈ ತಂತ್ರಗಳು ತಾತ್ಕಾಲಿಕವಾಗಿರುತ್ತವೆ ಮತ್ತು ನಿಖರತೆಯನ್ನು ಒದಗಿಸುವುದಿಲ್ಲ. ಆದರೆ ಹೊಸ ತಂತ್ರಜ್ಞಾನ ಭಿನ್ನವಾಗಿದ್ದು, ದುರಸ್ತಿ ಗುಣಮಟ್ಟ ಉತ್ತಮವಾಗಿರುತ್ತದೆ.

Indian scientist develops tech for repair of turbine blades, aerospace components
ಟರ್ಬೈನ್, ವಿಮಾನದ ಭಾಗಗಳ ದುರಸ್ಥಿಗಾಗಿ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಭಾರತದ ವಿಜ್ಞಾನಿ
author img

By

Published : Feb 19, 2022, 12:50 PM IST

ನವದೆಹಲಿ: ಭಾರತೀಯ ವಿಜ್ಞಾನಿಯೊಬ್ಬರು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ತಂತ್ರಜ್ಞಾನದ ಮೂಲಕ ಟರ್ಬೈನ್ ಬ್ಲೇಡ್‌ಗಳು, ಅಚ್ಚುಗಳು ಮತ್ತು ಏರೋಸ್ಪೇಸ್​ಗೆ ಸಂಬಂಧಿಸಿದ ವಸ್ತುಗಳನ್ನು ಕಡಿಮೆ ಮಾನವ ಸಂಪನ್ಮೂಲವನ್ನು ಬಳಸಿ ದುರಸ್ತಿ ಮಾಡಬಹುದು ಮತ್ತು ಮರುಸ್ಥಾಪನೆ ಮಾಡಬಹುದಾಗಿದೆ.

ಐಐಟಿ ಬಾಂಬೆಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊಫೆಸರ್ ರಮೇಶ್ ಕುಮಾರ್ ಸಿಂಗ್ ಅವರು ಲೇಸರ್ ಆಧಾರಿತ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಈ ತಂತ್ರಜ್ಞಾನದ ಬಳಕೆಯಲ್ಲಿ ಮಾನವನ ಹಸ್ತಕ್ಷೇಪ ಕಡಿಮೆಯಾಗಿರುತ್ತದೆ.

ಈ ತಂತ್ರಜ್ಞಾನ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ. ಅನೇಕ ಯಂತ್ರಗಳ ದುರಸ್ತಿಯ ವಿಚಾರದಲ್ಲಿ ಆತ್ಮನಿರ್ಭರ್ ಭಾರತ್​ ವ್ಯವಸ್ಥೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬಹುದಾದ ಪರಿಸರ ವ್ಯವಸ್ಥೆ ನಿರ್ಮಾಣ ಮಾಡುತ್ತದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರಕಟಣೆ ಶುಕ್ರವಾರ ತಿಳಿಸಿದೆ.

ಭಾರತದಲ್ಲಿ ಈಗ ವೆಲ್ಡಿಂಗ್ ಮತ್ತು ಥರ್ಮಲ್ ಸ್ಪ್ರೇಯಿಂಗ್ ಹಾಗೂ ಇತರ ದುರಸ್ತಿ ತಂತ್ರಗಳಿವೆ. ಈ ತಂತ್ರಗಳು ತಾತ್ಕಾಲಿಕವಾಗಿರುತ್ತವೆ ಮತ್ತು ನಿಖರತೆಯನ್ನು ಒದಗಿಸುವುದಿಲ್ಲ. ಅದರ ಜೊತೆಗೆ ಈ ಎಲ್ಲ ತಂತ್ರಗಳು ಹಸ್ತಚಾಲಿತವಾಗಿರುತ್ತವೆ. ವ್ಯಕ್ತಿಯ ಕೌಶಲ್ಯ ದುರಸ್ತಿಯ ಗುಣಮಟ್ಟವನ್ನು ನಿರ್ಧಾರ ಮಾಡುತ್ತದೆ. ಆದರೆ, ಹೊಸ ತಂತ್ರಜ್ಞಾನ ಭಿನ್ನವಾಗಿದ್ದು, ದುರಸ್ತಿ ಗುಣಮಟ್ಟ ಉತ್ತಮವಾಗಿರುತ್ತದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜೀಸ್ ಪ್ರೋಗ್ರಾಂನ ಬೆಂಬಲದೊಂದಿಗೆ ರಮೇಶ್ ಕುಮಾರ್ ಸಿಂಗ್ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದು, ಈ ನೂತನ ತಂತ್ರಜ್ಞಾನವನ್ನು ಈಗ ಪರೀಕ್ಷೆಗ ಒಳಪಡಿಸಲಾಗಿದೆ.

ಇದನ್ನೂ ಓದಿ: ಬಿಪಿ ನಿಯಂತ್ರಣ, ಗಾಯಕ್ಕೆ ಹೊಸ ಔಷದ ಕಂಡು ಹಿಡಿದ ಪ್ರಾಂಶುಪಾಲ!

ಈ ತಂತ್ರಜ್ಞಾನದಲ್ಲಿ ದೋಷ ಹೊಂದಿರುವ ಯಂತ್ರದ ಭಾಗವನ್ನು ಲೇಸರ್ ಸ್ಕ್ಯಾನರ್ ಮೂಲಕ ಪತ್ತೆ ಹಚ್ಚಲಾಗುತ್ತದೆ. ನಂತರ ದುರಸ್ತಿ ಮಾಡಿ, ಆ ಭಾಗವನ್ನು ಮರುಸ್ಥಾಪನೆ ಮಾಡುತ್ತದೆ. ಇದೆಲ್ಲವನ್ನೂ ಮುಗಿಸಿದ ನಂತರ ಮತ್ತೆ ಯಂತ್ರವನ್ನು ತಪಾಸಣೆ ಮಾಡುತ್ತದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಮೇಶ್ ಕುಮಾರ್ ಸಿಂಗ್ ಈ ತಂತ್ರಜ್ಞಾನವು ಬಹಳ ಪ್ರಭಾವಶಾಲಿಯಾಗಿದೆ ಮತ್ತು ಉತ್ಪಾದನಾ ಉದ್ಯಮದಲ್ಲಿ ಇದೊಂದು ಗೇಮ್ ಚೇಂಜರ್ ಆಗಿದೆ. ದುರಸ್ತಿಯ ನಿಖರತೆಯ ಮಟ್ಟ ಮತ್ತು ಫಲಿತಾಂಶ ಅಸಾಧಾರಣವಾಗಿದೆ ಮತ್ತು ಪ್ರಸ್ತುತ ಇರುವ ಅತ್ಯಾಧುನಿಕ ವಿಧಾನಗಳಿಗಿಂತ ಈ ತಂತ್ರಜ್ಞಾನ ಬಹಳ ಮುಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.