ETV Bharat / bharat

ರೈಲಲ್ಲಿ ಬಿಟ್ಟಿದ್ದ ಆಟಿಕೆ ಮಗುವಿಗೆ ಮರಳಿಸಿದ ರೈಲ್ವೆ ಇಲಾಖೆ.. ಇದಕ್ಕಾಗಿ ಮಾಡಿದ ಸಾಹಸ ಅಷ್ಟಿಷ್ಟಲ್ಲ!

author img

By

Published : Jan 7, 2023, 10:32 AM IST

ರೈಲಿನಲ್ಲಿ ಬಿಟ್ಟು ಹೋಗಿದ್ದ ಆಟಿಕೆ ಮರಳಿಸಿದ ಇಲಾಖೆ- ಆಟಿಕೆಯ ಬಗ್ಗೆ ಸಹ ಪ್ರಯಾಣಿಕ ಮಾಹಿತಿ- ರೈಲು ಟ್ರೇಸ್​​ ಮಾಡಿ ಆಟಿಕೆ ಪಡೆದ ರೈಲ್ವೆ ಅಧಿಕಾರಿಗಳು- ಆಟಿಕೆ ಮರಳಿ ಪಡೆದ ಮಗು ಫುಲ್​ ಖುಷ್​

indian-railway-brings-back-joy
ರೈಲಲ್ಲಿ ಬಿಟ್ಟಿದ್ದ ಆಟಿಕೆ ಮಗುವಿಗೆ ಮರಳಿಸಿದ ರೈಲ್ವೆ ಇಲಾಖೆ

ನವದೆಹಲಿ: ಈವರೆಗೆ ರೈಲ್ವೆ ಪೊಲೀಸರು ರೈಲು ನಿಲ್ದಾಣಗಳಲ್ಲಿ ಯಾರಾದರೂ ಅಪಾಯಕ್ಕೆ ಸಿಲುಕಿದ್ದರೆ ಅವರನ್ನು ರಕ್ಷಿಸಿ ಸಾರ್ವಜನಿಕರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಪಡೆದಿದ್ದಾರೆ. ಜೊತೆಗೆ ಪ್ರಯಾಣಿಕರಿಗೆ ತೊಂದರೆಯಾದಲ್ಲಿ ತಕ್ಷಣಕ್ಕೆ ಸ್ಪಂದಿಸುವ ಮೂಲಕ ನೆರವಾಗಿರುವ ಬಗ್ಗೆ ಸುದ್ದಿಗಳನ್ನು ನೋಡಿದ್ದೀರಿ. ಇತ್ತೀಚೆಗಷ್ಟೇ ಕಲಬುರಗಿ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಪ್ರಾಣಾಪಾಯಕ್ಕೆ ಸಿಲುಕಿದ್ದ ಮಹಿಳೆಯ ಜೀವವನ್ನು ಆರ್​ಪಿಎಫ್​ ಸಿಬ್ಬಂದಿ ಉಳಿಸಿದ್ದರು. ಆದ್ರೆ ಈಗ ಅವರು ಬೇಸರದಲ್ಲಿದ್ದ ಮಗುವಿನ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿ ಸುದ್ದಿಯಾಗಿದ್ದಾರೆ.

ಮಗುವಿನನಲ್ಲಿ ನಗು ಅರಳಿಸಿದ ಆರ್​ಪಿಎಫ್​ ಸಿಬ್ಬಂದಿ.. ಹೌದು, ಮಕ್ಕಳಿಗೆ ಆಟಿಕೆ ವಸ್ತುಗಳ ಮೇಲೆ ಅತಿಯಾದ ಪ್ರೀತಿ ಇರುತ್ತೆ. ಅದು ಅವರಿಂದ ದೂರವಾದರೆ ಸಂಕಟ ಪಡುತ್ತಾರೆ. ಈ ನೋವು ಆಗಬಾರದು ಎಂದು ಸಹ ಪ್ರಯಾಣಿಕ ಮತ್ತು ರೈಲ್ವೆ ಇಲಾಖೆ ಕಳೆದುಹೋಗಿದ್ದ ಆಟಿಕೆಯನ್ನು ಮತ್ತೆ ಮಗುವಿನ ಕೈ ಸೇರುವಂತೆ ಮಾಡಿದ್ದಾರೆ. ಆಟಿಕೆಯನ್ನು ಕಂಡ ಮಗು ಖುಷಿಯಲ್ಲಿ ತೇಲಾಡಿದೆ. ಇದು ಎಲ್ಲರಲ್ಲೂ ಸಾರ್ಥಕ ಭಾವ ಮೂಡಿಸಿದೆ.

ಸಿಕಂದರಾಬಾದ್​- ಅಗರ್ತಲಾ ವಿಶೇಷ ರೈಲಿನಲ್ಲಿ ಈ ಅಪರೂಪದ ಘಟನೆ ನಡೆದಿದೆ. ರೈಲು ಸಂಖ್ಯೆ 07030 ದಲ್ಲಿ ದಂಪತಿ ಮತ್ತು ಮಗು ಪ್ರಯಾಣಿಸುತ್ತಿದ್ದರು. ಉತ್ತರಪ್ರದೇಶದ ಜಲಪೈಗುರಿಯಲ್ಲಿ ಅವರು ಇಳಿದಿದ್ದಾರೆ. ಈ ವೇಳೆ ಮಗುವಿನ ಆಟಿಕೆಯನ್ನು ಅವರು ಅಲ್ಲೇ ಬಿಟ್ಟು ಹೋಗಿದ್ದರು. ಇದನ್ನು ಸಹಪ್ರಯಾಣಿಕರೊಬ್ಬರು ಗಮನಿಸಿದ್ದಾರೆ. ಪ್ರಯಾಣದ ವೇಳೆ ಮಗು ಆಟಿಕೆಯ ಜೊತೆಗೆ ಅನ್ಯೋನ್ಯವಾಗಿ ಆಡುತ್ತಿದ್ದುದನ್ನು ಅವರು ಕಂಡಿದ್ದರು.

ಸಹಾಯವಾಣಿ ಸಂಪರ್ಕ.. ತಕ್ಷಣವೇ ಅವರು ಆಟಿಕೆಯನ್ನು ಹೇಗಾದರೂ ಮಾಡಿ ಮಗುವಿಗೆ ತಲುಪಿಸಬೇಕು ಎಂದು ಯೋಚಿಸಿ ರೈಲ್ವೆ ಇಲಾಖೆಯ ಸಹಾಯವಾಣಿ 139 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆಗ ಅಧಿಕಾರಿಗಳು ಪ್ರಯಾಣಿಕರ ಸಂಪರ್ಕ ಮಾಹಿತಿ ನೀಡುವಂತೆ ಕೇಳಿದಾಗ, ಅವರು ಅಪರಿಚಿತರು ಎಂಬುದನ್ನು ಪ್ರಯಾಣಿಕ ತಿಳಿಸಿದ್ದಾರೆ.

ಇಲಾಖೆಯಿಂದಲೇ ಮಾಹಿತಿ ಸಂಗ್ರಹ.. ಬಳಿಕ ರೈಲ್ವೆ ಇಲಾಖೆಯೇ ಅವರ ದಾಖಲೆಗಳನ್ನು ತಡಕಾಡಿ ರೈಲು ಮತ್ತು ಬೋಗಿಯ ಸಂಖ್ಯೆಯ ಆಧಾರದ ಮೇಲೆ ಪ್ರಯಾಣಿಕರನ್ನು ಗುರುತಿಸಿದ್ದಾರೆ. ಬಳಿಕ ಆಟಿಕೆಯನ್ನು ರೈಲಿನ ಪ್ರಯಾಣಿಕನಿಂದ ಪಡೆದುಕೊಳ್ಳಲು ಅಧಿಕಾರಿಗಳು ರೈಲನ್ನು ಟ್ರೇಸ್​ ಮಾಡಿ ಪ್ರಯಾಣಿಕನಿಂದ ಪಡೆದುಕೊಂಡರು. ಇದಾದ ಬಳಿಕ ಮಗು ಮತ್ತು ದಂಪತಿಯ ವಿಳಾಸ ಪತ್ತೆ ಮಾಡಿ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕುಟುಂಬ ಉತ್ತರ ದಿನಾಜ್‌ಪುರ ಜಿಲ್ಲೆಯ ಖಾಜಿ ಗಾಂವ್ ಗ್ರಾಮದಲ್ಲಿ ವಾಸಿಸುತ್ತಿತ್ತು. ಅಲುಬಾರಿ ರೈಲು ನಿಲ್ದಾಣದಿಂದ ಸುಮಾರು 20 ಕಿ.ಮೀ. ದೂರದಲ್ಲಿದ್ದ ಮಗುವಿನ ಮನೆಯನ್ನು ರೈಲ್ವೆ ಅಧಿಕಾರಿಗಳ ತಂಡ ಪತ್ತೆ ಮಾಡಿ ಆಟಿಕೆಯನ್ನು ಹಸ್ತಾಂತರಿಸಿದ್ದಾರೆ.

ಮಗುವಿನ ಮೊಗದಲ್ಲಿ ಮೂಡಿತು ಮಂದಹಾಸ.. ಆಟಿಕೆಯನ್ನು ಕಳೆದುಕೊಂಡು ಬೇಸರದಲ್ಲಿ ಪುಟ್ಟ ಕಂದಮ್ಮ ತನ್ನ ಆಟಿಕೆ ಮತ್ತೆ ಕೈಸೇರಿತು ಎಂದು ಖುಷಿಯಿಂದ ನಗೆಬೀರಿದೆ.

ರೈಲ್ವೆ ಇಲಾಖೆ ಮತ್ತು ಸಿಬ್ಬಂದಿಯ ಕಾರ್ಯಕ್ಕೆ ಕೃತಜ್ಞತೆ.. ಚಿಕ್ಕ ಆಟಿಕೆಗಾಗಿ ರೈಲ್ವೆ ಇಲಾಖೆ ಇಷ್ಟೆಲ್ಲಾ ಪ್ರಯಾಸ ಪಟ್ಟಿದ್ದಕ್ಕೆ ಮಗುವಿನ ತಂದೆ ಕೃತಜ್ಞತೆ ಸಲ್ಲಿಸಿದ್ದಾರೆ. ನಾನು ಆಟಿಕೆ ಕಳೆದು ಹೋಗಿದ್ದರ ಬಗ್ಗೆ ಯಾವುದೇ ದೂರು ನೀಡಿರಲಿಲ್ಲ. ಆದರೂ, ಸಹ ಪ್ರಯಾಣಿಕ ಮತ್ತು ರೈಲ್ವೆ ಅಧಿಕಾರಿಗಳು ನಮ್ಮ ಮಗುವಿನ ಸಂತೋಷಕ್ಕಾಗಿ ಇಷ್ಟೆಲ್ಲಾ ಪ್ರಯತ್ನ ಮಾಡಿ ಆಟಿಕೆಯನ್ನು ತಂದು ಕೊಟ್ಟಿದ್ದಾರೆ. ಅವರಿಗೆ ನಾನು ಆಭಾರಿ ಎಂದು ಹೇಳಿದ್ದಾರೆ.

ಓದಿ: ಪ್ರಪ್ರಥಮ ಬಾರಿಗೆ ಹೆಜ್ಜೇನು ದಾಳಿಗೆ ಎರಡು ಕುದುರೆಗಳು ಬಲಿ.. ಕೋಟ್ಯಾಂತರ ರೂಪಾಯಿ ನಷ್ಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.