ಹೈದರಾಬಾದ್: ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಶುರುವಾಗಿದೆ. ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ಫೆ.12,13 ರಂದು ಮಧ್ಯಾಹ್ನ 12 ಗಂಟೆಯಿಂದ ಎರಡು ದಿನ ಐಪಿಎಲ್ 15 ನೇ ಆವೃತ್ತಿಯ ಮೆಗಾ ಹರಾಜು ನಡೆಯಲಿದ್ದು, ಯಾವ ಆಟಗಾರರು ಯಾವೆಲ್ಲಾ ತಂಡಗಳ ಪಾಲಾಗಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.
15 ನೇ ಆವೃತ್ತಿಯ ಐಪಿಎಲ್ನ ಹರಾಜಿನಲ್ಲಿ ಇದೀಗ ಅಂಡರ್-19 ತಂಡ ವಿಶ್ವಕಪ್ ವಿಜೇತ ತಂಡದ ಕೆಲ ಆಟಗಾರರೂ ಕೂಡ ಹರಾಜಿಗೆ ಲಭ್ಯರಿದ್ದಾರೆ. ಹೀಗಾಗಿ ಹರಾಜಿಗಿರುವ ಆಟಗಾರರ ಸಂಖ್ಯೆ 600 ಕ್ಕೆ ಏರಿದೆ. ಶನಿವಾರ ನಡೆಯುವ ಮೊದಲ ದಿನದ ಬಿಡ್ನಲ್ಲಿ 161 ಆಟಗಾರರು ಹರಾಜಾಗಲಿದ್ದಾರೆ. ಎರಡನೇ ದಿನ ಉಳಿದ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಅಹಮದಾಬಾದ್ ಮತ್ತು ಪುಣೆ ತಂಡಗಳು ಈ ಬಾರಿಯ ಹರಾಜಿಗೆ ಹೊಸದಾಗಿ ಸೇರಿದ ತಂಡಗಳಾಗಿವೆ. ಒಟ್ಟು ಹತ್ತು ತಂಡಗಳು ಆಟಗಾರರ ಖರೀದಿಗೆ ಸ್ಪರ್ಧಿಸಲಿವೆ.
ತಂಡಗಳು ಉಳಿಸಿಕೊಂಡಿರುವ ಆಟಗಾರರಿವರು: ಈಗಾಗಲೇ ಹಿರಿಯ ಮತ್ತು ಸ್ಟಾರ್ ಆಟಗಾರರಾದ ಮಹೇಂದ್ರ ಸಿಂಗ್ ದೋನಿ(ಸಿಎಸ್ಕೆ), ವಿರಾಟ್ ಕೊಹ್ಲಿ(ಆರ್ಸಿ), ಕೆ.ಎಲ್.ರಾಹುಲ್, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯಾ, ರಶೀದ್ ಖಾನ್, ಕೀರನ್ ಪೊಲಾರ್ಡ್ರನ್ನು ತಂಡಗಳು ತಮ್ಮಲ್ಲಿಯೇ ಉಳಿಸಿಕೊಂಡಿವೆ.
ಒಂದು ತಂಡ ಒಟ್ಟಾರೆ 90 ಕೋಟಿ ರೂಪಾಯಿಗಳಷ್ಟು ಹಣ ಹೊಂದಿವೆ. ಹರಾಜು ಪ್ರಕ್ರಿಯೆಯಲ್ಲಿ ಒಂದು ತಂಡ ಗರಿಷ್ಠ 67.5 ಕೋಟಿ ಹಣವನ್ನು ಆಟಗಾರರ ಮೇಲೆ ಬಿಡ್ ಮಾಡಬಹುದು. ತಂಡವೊಂದು ಕನಿಷ್ಠ 18 ಆಟಗಾರರು, ಗರಿಷ್ಠ 25 ಆಟಗಾರರನ್ನು ಹೊಂದಬಹುದಾಗಿದೆ.
ಹರಾಜಿಗಿರುವ ಅತಿ ಕಿರಿಯ - ಹಿರಿಯ ಆಟಗಾರರು: ಹರಾಜು ಪ್ರಕ್ರಿಯೆಯಲ್ಲಿ 229 ಅಂತಾರಾಷ್ಟ್ರೀಯ ಆಟಗಾರರು, 354 ಪ್ರಾದೇಶಿಕ ಆಟಗಾರರು(ಅನ್ಕ್ಯಾಪ್ಡ್) ಮತ್ತು 7 ಐಸಿಸಿ ಸದಸ್ಯ ರಾಷ್ಟ್ರಗಳ ಆಟಗಾರರು ಲಭ್ಯರಿದ್ದಾರೆ. ಇದರಲ್ಲಿ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್ ಅತಿ ಹಿರಿಯ ಆಟಗಾರರಾಗಿದ್ದರೆ, 17 ವರ್ಷದ ನೂರ್ ಅಹಮದ್ ಅತಿ ಕಿರಿಯ ಆಟಗಾರರಾಗಿದ್ದಾರೆ.
ಯಾವ ತಂಡದಲ್ಲಿ ಎಷ್ಟು ಹಣವಿದೆ: ಡೆಲ್ಲಿ ಕ್ಯಾಪಿಟಲ್ (47.5 ಕೋಟಿ), ಮುಂಬೈ ಇಂಡಿಯನ್ಸ್(48 ಕೋಟಿ), ಚೆನ್ನೈ ಸೂಪರ್ ಕಿಂಗ್ಸ್ (48), ಕೋಲ್ಕತ್ತಾ ನೈಟ್ ರೈಡರ್ಸ್ (48), ಗುಜರಾತ್(52), ರಾಯಲ್ ಚಾಲೆಂಜರ್ಸ್ ಬೆಂಗಳೂರು(57), ಲಖನೌ(59), ರಾಜಸ್ಥಾನ ರಾಯಲ್ಸ್(62), ಸನ್ರೈಸರ್ಸ್ ಹೈದರಾಬಾದ್(68) ಪಂಜಾಬ್ ಕಿಂಗ್ಸ್ ತಂಡದಲ್ಲಿ 72 ಕೋಟಿ ರೂಪಾಯಿ ಮೊತ್ತ ಉಳಿದಿದೆ. ಎರಡು ದಿನ ನಡೆಯುವ ಹರಾಜು ಪ್ರಕ್ರಿಯೆಯನ್ನು ಹ್ಯೂಸ್ ಎಡ್ಮಿಡೀಸ್ ನಡೆಸಿಕೊಡಲಿದ್ದಾರೆ.
ಹರಾಜಿಗೆ ಲಭ್ಯವಿರುವ ಪ್ರಮುಖ ಆಟಗಾರರು: ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಯಜುವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್, ಶಿಖರ್ ಧವನ್, ದೇವದತ್ತ ಪಡಿಕಲ್, ದೀಪಕ್ ಹೂಡಾ.
ಹಿರಿಯ ಆಟಗಾರರು: ಭುವನೇಶ್ವರ್ ಕುಮಾರ್, ದಿನೇಶ್ ಕಾರ್ತಿಕ್, ಅಂಬಟಿ ರಾಯುಡು, ಆರ್.ಅಶ್ವಿನ್, ಉಮೇಶ್ ಯಾದವ್, ಮಹಮದ್ ಶಮಿ.
ವಿದೇಶಿ ಆಟಗಾರರು: ಡೇವಿಡ್ ವಾರ್ನರ್, ಕ್ವಿಂಟನ್ ಡಿ ಕಾಕ್, ಕಗಿಸೋ ರಬಾಡ, ಜಾಸನ್ ರಾಯ್, ಜಾನಿ ಬೈರ್ಸ್ಟೋ.
ಅಂಡರ್-19 ಆಟಗಾರರು: ರಾಜವರ್ಧನ್ ಹಂಗರ್ಗೇಕರ್, ವಿಕ್ಕಿ ಓತ್ಸವಾಲ್, ಯಶ್ ದುಳ್.
ಓದಿ: IND vs WI 3rd ODI: ಶ್ರೇಯಸ್ ಅಯ್ಯರ್ 80, ರಿಷಬ್ ಪಂತ್ 56...ವೆಸ್ಟ್ ಇಂಡೀಸ್ಗೆ 266 ರನ್ಗಳ ಗುರಿ