ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿನ್ಯಾಸಗೊಳಿಸಿರುವ ದೇಶೀಯ ಸೀಕರ್ ಮತ್ತು ಬೂಸ್ಟರ್ ಹೊಂದಿರುವ ಬ್ರಹ್ಮೋಸ್ ನಿಖರ ದಾಳಿ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆ ಭಾನುವಾರ ತಿಳಿಸಿದೆ.
ಭಾರತೀಯ ನೌಕಾಪಡೆಯು ಅರೇಬಿಯನ್ ಸಮುದ್ರದಲ್ಲಿ ಹಡಗಿನ ಮೂಲಕ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾವಣೆ ಮಾಡಿದ್ದು, ಯಶಸ್ವಿ ನಿಖರ ದಾಳಿ ನಡೆಸಿದೆ. ಡಿಆರ್‌ಡಿಒ ವಿನ್ಯಾಸಗೊಳಿಸಿದ ಸೀಕರ್ ಮತ್ತು ಬೂಸ್ಟರ್ ದೇಶಿಯವಾಗಿ ಆತ್ಮನಿರ್ಭರ ಭಾರತ್ ಯೋಜನೆಯಲ್ಲಿ ನಿರ್ಮಾಣವಾಗಿದೆ " ಎಂದು ಭಾರತೀಯ ನೌಕಾಪಡೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ.
ವಿಶ್ವದ ಅತ್ಯಂತ ವೇಗದ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ: ಬ್ರಹ್ಮೋಸ್ ಒಂದು ಮಧ್ಯಮ ಶ್ರೇಣಿಯ ರಾಮ್‌ಜೆಟ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದ್ದು, ಇದನ್ನು ಜಲಾಂತರ್ಗಾಮಿ ನೌಕೆ ,ಹಡಗುಗಳು, ವಿಮಾನಗಳು ಅಥವಾ ಭೂಮಿಯಿಂದ ಉಡಾಯಿಸಬಹುದು, ವಿಶೇಷವಾಗಿ ಪರಿಚಯದ ಹಂತದ ವಿಶ್ವದ ಅತ್ಯಂತ ವೇಗದ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದೆ. ಜನವರಿಯಲ್ಲಿ ಭಾರತವು ಒಡಿಶಾ ಕರಾವಳಿಯ ಖಂಡಾಂತರ ಕ್ಷಿಪಣಿ ಪೃಥ್ವಿ -2 ರ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿತ್ತು.
-
#IndianNavy’s successful precision strike in the #ArabianSea by ship launched #BrahMos missile with @DRDO_India designed #Indigenous Seeker & Booster reinforces its commitment towards #AatmaNirbharta.#AatmaNirbharBharat@DefenceMinIndia @PMOIndia @IN_WNC @IN_WesternFleet pic.twitter.com/yErzO2Iout
— SpokespersonNavy (@indiannavy) March 5, 2023 " class="align-text-top noRightClick twitterSection" data="
">#IndianNavy’s successful precision strike in the #ArabianSea by ship launched #BrahMos missile with @DRDO_India designed #Indigenous Seeker & Booster reinforces its commitment towards #AatmaNirbharta.#AatmaNirbharBharat@DefenceMinIndia @PMOIndia @IN_WNC @IN_WesternFleet pic.twitter.com/yErzO2Iout
— SpokespersonNavy (@indiannavy) March 5, 2023#IndianNavy’s successful precision strike in the #ArabianSea by ship launched #BrahMos missile with @DRDO_India designed #Indigenous Seeker & Booster reinforces its commitment towards #AatmaNirbharta.#AatmaNirbharBharat@DefenceMinIndia @PMOIndia @IN_WNC @IN_WesternFleet pic.twitter.com/yErzO2Iout
— SpokespersonNavy (@indiannavy) March 5, 2023
ಕ್ಷಿಪಣಿ ತನ್ನ ಗುರಿಯನ್ನು ಹೆಚ್ಚಿನ ನಿಖರತೆಯಿಂದ ಹೊಡೆದುರುಳಿಸಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಪೃಥ್ವಿ-2 ಕ್ಷಿಪಣಿಯು ಸುಮಾರು 350 ಕಿಲೋಮೀಟರ್ ದಾಳಿಯ ವ್ಯಾಪ್ತಿಯನ್ನು ಹೊಂದಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಮತ್ತು ಡಿಆರ್‌ಡಿಒ ಮಾಜಿ ಮುಖ್ಯಸ್ಥ ಡಾ. ಜಿ. ಸತೀಶ್ ರೆಡ್ಡಿ, ಭಾರತವು ತನ್ನ ಶಸ್ತ್ರಾಗಾರದಲ್ಲಿ ಹೆಚ್ಚು ಶ್ರೇಣಿಯ ಕ್ಷಿಪಣಿಗಳೊಂದಿಗೆ ಕ್ಷಿಪಣಿ ತಂತ್ರಜ್ಞಾನದಲ್ಲಿ ಸ್ವಾವಲಂಬಿಯಾಗಿದೆ ಮತ್ತು ಜಾಗತಿಕ ನಿರ್ಬಂಧದ ಆಡಳಿತವು ಈ ಸ್ವಾವಲಂಬನೆಗೆ ಸಹಾಯ ಮಾಡಿದೆ ಎಂದು ಹೇಳಿದ್ದಾರೆ. ಯಾವುದೇ ದೇಶವು ತನ್ನ ರಕ್ಷಣೆಗಾಗಿ ಹೊಂದಲು ಬಯಸುವ ಕ್ಷಿಪಣಿಗಳ ಶ್ರೇಣಿಯನ್ನು ದೇಶವು ಇಂದು ಅಭಿವೃದ್ಧಿಪಡಿಸಿದೆ ಎಂದು ಡಾ. ರೆಡ್ಡಿ ತಿಳಿಸಿದರು.
ವೈವಿಧ್ಯಮಯ ಕ್ಷಿಪಣಿಗಳ ಅಭಿವೃದ್ಧಿ: ಭಾರತೀಯ ಕ್ಷಿಪಣಿ ಯೋಜನೆಗಳು ಬಹಳ ದೂರ ಸಾಗಿದೆ ಮತ್ತು ಹಲವಾರು ಕ್ಷಿಪಣಿ ವ್ಯವಸ್ಥೆಗಳನ್ನು ಹಾಗೂ ವೈವಿಧ್ಯಮಯ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಭೂಮಿಯಿಂದ ಭೂಮಿಗೆ ದಾಳಿ ನಡೆಸುವ ಕ್ಷಿಪಣಿಗಳು, ಭೂಮಿಯಿಂದ ಆಕಾಶಕ್ಕೆ ದಾಳಿ ನಡೆಸುವ ಕ್ಷಿಪಣಿಗಳು ಮತ್ತು ಆಕಾಶದಿಂದ ಆಕಾಶಕ್ಕೆ ದಾಳಿ ನಡೆಸುವ ಕ್ಷಿಪಣಿಗಳು, ಟ್ಯಾಂಕ್ ಗುರಿಯಾಗಿಸಿಕೊಂಡು ದಾಳಿ ನಡೆಸುವ ಕ್ಷಿಪಣಿಗಳು ಮತ್ತು ಇತರ ಅನೇಕ ರೀತಿಯ ಕ್ಷಿಪಣಿಗಳನ್ನು ದೇಶದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಭಾರತ ಕ್ಷಿಪಣಿ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಿದೆ: ದೇಶವು ಈ ತಂತ್ರಜ್ಞಾನದಲ್ಲಿ ಸಾಕಷ್ಟು ಜ್ಞಾನವನ್ನು ಗಳಿಸಿದೆ ಮತ್ತು ಈ ಎಲ್ಲಾ ರೀತಿಯ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ಇಂದು ಭಾರತ ಕ್ಷಿಪಣಿ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯನ್ನು ಸಾಧಿಸಿದೆ. ಯಾವುದೇ ರಾಷ್ಟ್ರವು ತಮ್ಮ ಅಗತ್ಯಗಳ ಆಧಾರದ ಮೇಲೆ ಹೊಂದಲು ಬಯಸುವ ಕ್ಷಿಪಣಿಗಳ ಶ್ರೇಣಿಯನ್ನು ದೇಶವು ಅಭಿವೃದ್ಧಿಪಡಿಸಿದೆ ಎಂದು ಡಾ.ಜಿ. ಸತೀಶ್ ರೆಡ್ಡಿ ಹೇಳಿದರು.
ಇದನ್ನೂ ಓದಿ:ಭಾರತೀಯ UPSC ಪರೀಕ್ಷೆಯಲ್ಲಿ ಕೃತಕ ಬುದ್ದಿಮತ್ತೆ ಚಾಟ್ಜಿಪಿಟಿ ವಿಫಲ