ನವದೆಹಲಿ (ಭಾರತ): ನವೆಂಬರ್ 26ರಂದು ನಾಪತ್ತೆಯಾಗಿದ್ದ ಮಿಗ್-29ಕೆ ಫೈಟರ್ ಜೆಟ್ ಪೈಲೆಟ್ ಕಮಾಂಡರ್ ನಿಶಾಂತ್ ಸಿಂಗ್ ಅವರ ಮೃತದೇಹವನ್ನು ಭಾರತೀಯ ನೌಕಾಪಡೆ ಪತ್ತೆ ಮಾಡಿದೆ.
ವ್ಯಾಪಕ ಹುಡುಕಾಟದ ನಂತರ ನಾಪತ್ತೆಯಾಗಿದ್ದ ಮಿಗ್-29 ಕೆ ಪೈಲೆಟ್ ಕಮಾಂಡರ್ ನಿಶಾಂತ್ ಸಿಂಗ್ ಅವರ ಮೈತದೇಹವು ಗೋವಾ ಕರಾವಳಿಯಿಂದ 30 ಮೈಲಿ ದೂರ ಮತ್ತು ಸಮುದ್ರದ 70 ಮೀಟರ್ ಆಳದಲ್ಲಿ ಪತ್ತೆಯಾಗಿದೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 26ರಂದು ಅಪಘಾತ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಪೈಲೆಟ್ ತನ್ನ ಸಹ ಪೈಲೆಟ್ ಜೊತೆಗೆ ಸಮುದ್ರಕ್ಕೆ ಹಾರಿದ್ದರೆನ್ನಲಾಗಿತ್ತು. ಈ ವೇಳೆ ಸಹ ಪೈಲೆಟ್ ಬದುಕುಳಿದಿದ್ದು, ಅವರನ್ನು ನೌಕಾಪಡೆ ರಕ್ಷಣೆ ಮಾಡಿತ್ತು. ಆದರೆ ನಿಶಾಂತ್ ಸಿಂಗ್ ಅವರ ಬಗ್ಗೆ ಯಾವುದೇ ಸುಳಿವು ದೊರೆತಿರಲಿಲ್ಲ.