ETV Bharat / bharat

11ನೇ ಜಲಾಂತರ್ಗಾಮಿ ಯುದ್ಧ ವಿಮಾನ ಪಿ-8ಐ ಅನ್ನು ಸ್ವೀಕರಿಸಿದ ಭಾರತೀಯ ನೌಕಾಪಡೆ - ಜಲಾಂತರ್ಗಾಮಿ ಯುದ್ಧ ವಿಮಾನ

ಭಾರತೀಯ ನೌಕಾಪಡೆಯ ವಿಮಾನ ಸಿಬ್ಬಂದಿ, ಬಿಡಿಭಾಗಗಳು, ನೆಲದ ಬೆಂಬಲ ಸಾಧನ ಮತ್ತು ಕ್ಷೇತ್ರ ಸೇವಾ ಪ್ರತಿನಿಧಿ ಬೆಂಬಲವನ್ನು ನೀಡುವ ಮೂಲಕ ಬೋಯಿಂಗ್ ಭಾರತದ ಬೆಳೆಯುತ್ತಿರುವ P-8I ಫ್ಲೀಟ್ ಅನ್ನು ಬೆಂಬಲಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ..

ಪಿ-8ಐ
ಪಿ-8ಐ
author img

By

Published : Oct 18, 2021, 9:03 PM IST

ನವದೆಹಲಿ : ಭಾರತೀಯ ನೌಕಾಪಡೆಯು ಅಮೆರಿಕ ಮೂಲದ ಏರೋಸ್ಪೇಸ್ ಕಂಪನಿ ಬೋಯಿಂಗ್ (Boeing)ನಿಂದ 11ನೇ ಜಲಾಂತರ್ಗಾಮಿ ಯುದ್ಧ ವಿಮಾನ ಪಿ -8ಐ(P-8I) ಅನ್ನು ಸ್ವೀಕರಿಸಿದೆ. 2009ರಲ್ಲಿ ರಕ್ಷಣಾ ಸಚಿವಾಲಯವು ಮೊದಲು ಎಂಟು ಪಿ -8ಐ ವಿಮಾನಗಳ ಒಪ್ಪಂದಕ್ಕೆ ಸಹಿ ಹಾಕಿತು.

ನಂತರ 2016ರಲ್ಲಿ ನಾಲ್ಕು ಹೆಚ್ಚುವರಿ ಪಿ-8ಐ ವಿಮಾನಗಳ ಒಪ್ಪಂದಕ್ಕೆ ಸಹಿ ಹಾಕಿತು. ಇದು 2016ರಲ್ಲಿ ಭಾರತೀಯ ರಕ್ಷಣಾ ಸಚಿವಾಲಯ ನೀಡಿದ ನಾಲ್ಕು ಹೆಚ್ಚುವರಿ ವಿಮಾನಗಳ ಆಯ್ಕೆ ಒಪ್ಪಂದದ ಅಡಿಯಲ್ಲಿ ತಲುಪಿಸಿದ ಮೂರನೇ ವಿಮಾನ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

'ಸಾಟಿಯಿಲ್ಲದ ಕಡಲ ವಿಚಕ್ಷಣ ಮತ್ತು ಜಲಾಂತರ್ಗಾಮಿ ಯುದ್ಧ ವಿರೋಧಿ ಸಾಮರ್ಥ್ಯಗಳ ಜೊತೆಗೆ ಪಿ-8ಐ ಅನ್ನು ವಿಪತ್ತು ಪರಿಹಾರ ಮತ್ತು ಮಾನವೀಯ ಕಾರ್ಯಾಚರಣೆಗಳ ಸಮಯದಲ್ಲಿ ಸಹಾಯ ಮಾಡಲು ನಿಯೋಜಿಸಲಾಗಿದೆ.

ಭಾರತೀಯ ನೌಕಾಪಡೆಯು ಕಳೆದ ವರ್ಷ ನವೆಂಬರ್‌ನಲ್ಲಿ ಒಂಬತ್ತನೇ ಪಿ-8ಐ ವಿಮಾನವನ್ನು ಪಡೆದಿತ್ತು. ಈ ವರ್ಷದ ಜುಲೈನಲ್ಲಿ 10ನೇ ಪಿ-8ಐ ವಿಮಾನವನ್ನು ಪಡೆಯಿತು. ಗಸ್ತು ವಿಮಾನವು ಭಾರತೀಯ ನೌಕಾಪಡೆಯ ಅವಿಭಾಜ್ಯ ಅಂಗವಾಗಿದೆ.

ಭಾರತೀಯ ನೌಕಾಪಡೆಯ ವಿಮಾನ ಸಿಬ್ಬಂದಿ, ಬಿಡಿಭಾಗಗಳು, ನೆಲದ ಬೆಂಬಲ ಸಾಧನ ಮತ್ತು ಕ್ಷೇತ್ರ ಸೇವಾ ಪ್ರತಿನಿಧಿ ಬೆಂಬಲವನ್ನು ನೀಡುವ ಮೂಲಕ ಬೋಯಿಂಗ್ ಭಾರತದ ಬೆಳೆಯುತ್ತಿರುವ P-8I ಫ್ಲೀಟ್ ಅನ್ನು ಬೆಂಬಲಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.