ETV Bharat / bharat

ಗಾಳಿಪಟಕ್ಕೆ ಚೀನಾದ ದಾರ ಬಳಕೆ, ಅಪಾಯದಿಂದ ಪಾರಾಗಲೂ ರಾಡ್ ಅಳವಡಿಸಿದ ಬೈಕ್ ಸವಾರರು.. - 300 ಕ್ಕೂ ಹೆಚ್ಚು ವರದಿಗಳು

ಚೀನಾದ ಮಾಂಜಾ ಮಾರಾಟ ಹಾಗೂ ಬಳಕೆಗೆ ನಿಷೇಧವಿದ್ದರೂ ಗುಜರಾತ್ ಅಹಮದಾಬಾದ್ ನಗರದಲ್ಲಿ ಮುಂದುವರಿದ ಅಕ್ರಮ ಮಾರಾಟ, ಚೀನಾ ಮಾಂಜಾ ಅಪಾಯಕಾರಿ, ಜೀವಕ್ಕೆ ಕುತ್ತು ತರುವಂತಹದ್ದು, ಕತ್ತು ಸೀಳುವಷ್ಟು ಹರಿತ. ಚೀನಾದ ಮಾಂಜಾ ಅಕ್ರಮ ಮಾರಾಟ ಮಾಡುತ್ತಿದ್ದ 400ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ ಪೊಲೀಸರು.

Bike rider stuck in Chinese manja
ಚೀನಾದ ದಾರಕ್ಕೆ ಸಿಲುಕಿದ ಬೈಕ್ ಸವಾರ
author img

By

Published : Jan 11, 2023, 5:13 PM IST

ಅಹಮದಾಬಾದ್(ಗುಜರಾತ್​): ಚೀನಾದ ಮಾಂಜಾ(ಗಾಳಿಪಟದ ದಾರ)ಮಾರಾಟ ಹಾಗೂ ಬಳಕೆಗೆ ನಿಷೇಧವಿದ್ದರೂ, ಅಹಮದಾಬಾದ್​ನಲ್ಲಿ ಚೀನಾ ದಾರವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ.ಇದರಿಂದ ಜನರು ಹಾಗೂ ಪ್ರಾಣಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆಗಳು ಮುಂದುವರೆದಿವೆ. ಚೀನಾ ಮಾಂಜಾ ಅಪಾಯಕಾರಿ, ಜೀವಕ್ಕೆ ಕುತ್ತು ತರುವಂತಹದ್ದು, ಕತ್ತು ಸೀಳುವಷ್ಟು ಹರಿತವಾಗಿದ್ದು, ಜೀವದ ಸುರಕ್ಷತೆಗಾಗಿ ಅಹಮದಾಬಾದ್​ನ ಜನರು ಬೈಕ್​ಗೆ ರಾಡ್ ಅಳವಡಿಕೊಳ್ಳುತ್ತಿದ್ದಾರೆ.

ಚೀನಾ ಮಾಂಜಾ ಸಂಪೂರ್ಣ ನಿಷೇಧಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಮಾಂಜಾ ಬಳಕೆ ತಡೆಗೆ ಅಧಿಕಾರಿಗಳು ಹಾಗೂ ಪೊಲೀಸರು ನಿರಂತರ ಶ್ರಮಿಸುತ್ತಿದ್ದರೂ, ಅವರ ಕಣ್ಣುತಪ್ಪಿಸಿ ಮಾರಾಟಗಾರರು ಅಕ್ರಮವಾಗಿ ದಾರಗಳನ್ನು ಅಲ್ಲಲ್ಲಿ ಮಾರುತ್ತಿದ್ದು, ಆಕಸ್ಮಿಕ ಅಪರಾಧ ಘಟನೆಗಳೂ ಅಲ್ಲಲ್ಲಿ ಜರುಗುತ್ತಿವೆ. ಈ ಗಾಳಿಪಟ ಮಾಂಜಾದಿಂದ ಬೈಕ್ ಸವಾರರು ತೀವ್ರವಾಗಿ ಗಾಯಗೊಂಡಿರುವ ವರದಿಗಳು ಅಲ್ಲಲ್ಲಿ ನಡೆಯುತ್ತಿವೆ. ಈ ಮಾಂಜಾ ಗಂಟಲನ್ನೂ ಸೀಳುವಷ್ಟು ತೀಕ್ಷ್ಣವಾಗಿದ್ದು, ಅಕ್ರಮವಾಗಿ ಮಾಂಜಾ ಮಾರಾಟ ಮಾರುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಜನರು ಅಧಿಕಾರಿಗಳಿಗೆ ಆಗ್ರಹಿಸುತ್ತಿದ್ದಾರೆ.

ಸುರಕ್ಷತೆಗಾಗಿ ವಾಹನಗಳಿಗೆ ರಾಡ್​ ಬಳಕೆ: ಚೀನಾ ಮಾಂಜಾ ಅಪಾಯ ತಡೆಗೆ ವಾಹನ ಸವಾರರು ತಮ್ಮ ವಾಹನಗಳಿಗೆ ರಾಡ್ ಬಾರ್​ಗಳನ್ನು ಜೋಡಿಸಿದ್ದು, ತಮ್ಮ ರಕ್ಷಣೆಗಾಗಿ ಉತ್ತಮ ಪರಿಹಾರ ಕಂಡು ಕೊಂಡಿದ್ದಾರೆ. ಈಟಿವಿ ಭಾರತ್ ಜತೆಗೆ ಬೈಕ್ ಸವಾರ್ ಶೈಲೇಶ್ ಮಾತನಾಡಿ, ಚೀನಾ ಮಾಂಜಾ ನಿಷೇಧದ ನಡುವೆಯೂ ಜನರು ಈ ದಾರದ ಮಾರಾಟ ಹಾಗೂ ಬಳಕೆ ಮಾಡುತ್ತಿರುವುದು ದುರದೃಷ್ಟಕರ.

ಈ ಚೀನಾ ದಾರ ತುಂಬಾ ಅಪಾಯಕಾರಿ ಮತ್ತು ಜೀವಕ್ಕೆ ಕುತ್ತು ತರುವಂತಹದ್ದು, ಮಕ್ಕಳು ಸಹ ಬೈಕ್ ಮೇಲೆ ಕುಳಿತುಕೊಳ್ಳುತ್ತಾರೆ. ದಾರವು ಅವರ ಕತ್ತು ಸೀಳುವಷ್ಟು ಹರಿತವಾಗಿದೆ. ಹೈಕೋರ್ಟ್ ಚೀನಾ ಮಾಂಜಾ ನಿಷೇಧಿಸಲು ಆದೇಶಿಸಿದೆ. ಆದರೆ ಜನರು ಇನ್ನೂ ಮಾರಾಟ, ಬಳಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಮತ್ತು ಬಿಡಲು ಮಾತ್ರ ಮೋಟಾರ್​ ಸೈಕಲ್​ಗಳನ್ನು ಬಳಸುತ್ತೇವೆ, ಮಕ್ಕಳ ಸುರಕ್ಷತೆ ಮೊದಲ ಪ್ರಶ್ನೆ. ಈ ಕಾರಣದಿಂದ ವಿಶೇಷವಾಗಿ ಪ್ರತಿಯೊಬ್ಬರೂ ತಮ್ಮ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಈ ರಾಡ್ ತಮ್ಮ ವಾಹನಗಳಿಗೆ ಜೋಡಿಸಬೇಕು ಎಂದು ತಿಳಿಸಿದ್ದಾರೆ.

ಸುರಕ್ಷತೆಗೆ ರಾಡ್​​​​​​​ ಜತೆಗೆ ಕುತ್ತಿಗೆ ಪಟ್ಟಿ: ಚೀನಾದ ಮಾಂಜಾವೂ ಜೀವಕ್ಕೆ ಮಾರಕ ಎನ್ನಲಾಗುತ್ತಿದೆ. ಆದರೆ, ಮನೆಯಿಂದ ಹೊರಗೆ ಹೋದರೆ ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಅದಕ್ಕಾಗಿ ನಾವು ಸುರಕ್ಷತೆ ರಾಡ್ ಜತೆಗೆ ಕುತ್ತಿಗೆ ಪಟ್ಟಿಯನ್ನು ಬಳಸುತ್ತೇವೆ. ಚೀನಾ ಮಾಂಜಾವನ್ನು ಕಡ್ಡಾಯವಾಗಿ ನಿಷೇಧ ಜಾರಿಗೊಳಿಸಲು ಹೈಕೋರ್ಟ್​ ರಾಜ್ಯ ಸರ್ಕಾರಕ್ಕೆ ಸಲಹೆಗಳನ್ನೂ ನೀಡಿದೆ. ಚುನಾವಣೆಯಲ್ಲಿ ಪ್ರಚಾರ ಮಾಡುವಂತೆಯೇ ಮನೆ ಮನೆಗೆ ಮಾಂಜಾ ದುರುಪಯೋಗದ ಬಗ್ಗೆಯೂ ಪ್ರಚಾರ ಮಾಡಬೇಕು ಎಂದು ತಿಳಿಸಿದ್ದಾರೆ.

ನಿತ್ಯ 40 ರಿಂದ 50 ಸವಾರರು ಬೈಕ್ ಸಮೇತ ಬರುತ್ತಿದ್ದಾರೆ. ಚೀನಾ ಮಾಂಜಾದಿಂದ ತಪ್ಪಿಸಿಕೊಳ್ಳಲು, ಸುರಕ್ಷತೆಗ ರಾಡ್ ಅಳವಡಿಕೆಯಿಂದ ಜೀವ ಹಾನಿ ತಡೆಯಬಹುದು ಎಂದು ರಾಡ್ ಅಳವಡಿಕೆದಾರರಾದ ಮಹೇಶಭಾಯ್ ತಿಳಿಸಿದ್ದಾರೆ. ಇದುವರೆಗೆ ಚೀನಾದ ಮಾಂಜಾ ಮಾರಾಟ ಮಾಡುತ್ತಿದ್ದ 400ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಹಮದಾಬಾದ್ ಪೊಲೀಸರಿಗೆ ಅಕ್ರಮ ಮಾರಾಟದ ಬಗ್ಗೆ 338 ದೂರುಗಳು ಬಂದಿದ್ದು, ಅದರ ಆಧಾರದ ಮೇಲೆ 400 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ ಸಾವಿರಾರು ಚೀನಾ ಮಾಂಜಾದ ರೀಲುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

300 ಕ್ಕೂ ಹೆಚ್ಚು ವರದಿಗಳು: ಅಹಮದಾಬಾದ್ ನಗರದಲ್ಲಿ ಪೊಲೀಸರು ಚೀನಾದ ದಾರ ಮಾರಾಟಕ್ಕೆ ಸಂಬಂಧಿಸಿದಂತೆ 100 ಕ್ಕೂ ಹೆಚ್ಚು ನಿಯಂತ್ರಣ ಕೊಠಡಿಯಿಂದ 309 ವರದಿಗಳನ್ನು ಸ್ವೀಕರಿಸಿದ್ದಾರೆ. ಇವುಗಳ ಪೈಕಿ 29 ಅಪರಾಧ ಪ್ರಕರಣಗಳನ್ನು ದಾಖಲಿಸಿ ಕ್ರಮಕ್ಕೆ ಆದೇಶಿಸಿದ್ದಾರೆ. ಚೀನಾ ಮಾಂಜಾ ಬಳಕೆ ತಡೆಗೆ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಯಿಂದ ಅನೇಕ ರೀತಿಯ ಕಾರ್ಯಾಚರಣೆಗಳು ನಡೆಸುತ್ತಿದ್ದರೂ ಚೀನಾದ ದಾರದ ಮಾರಾಟದಿಂದ ಆಗುತ್ತಿರುವ ಅನಾಹುತಗಳನ್ನು ಪೊಲೀಸರ ಗಮನಕ್ಕೆ ತರುತ್ತಿದ್ದಾರೆ. ಆದ್ದರಿಂದ ಜನರು ಈಗ ಚೀನಾ ಮಾಂಜಾದಿಂದ ತಪ್ಪಿಸಿಕೊಳ್ಳಲು ತಮ್ಮದೇ ಆದ ಮಾರ್ಗಗಳನ್ನು ಕಂಡು ಕೊಂಡಿದ್ದಾರೆ.

ಇದನ್ನೂಓದಿ:ಮೆಟ್ರೋ ಪಿಲ್ಲರ್ ದುರಂತ: ದಾವಣಗೆರೆಯಲ್ಲಿ ನೆರವೇರಿದ ತಾಯಿ, ಮಗುವಿನ ಅಂತ್ಯಕ್ರಿಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.