ETV Bharat / bharat

ದೇಶದ ಪ್ರಗತಿಗೆ ಪ್ರತಿ ಪ್ರಧಾನಿಯ ಕೊಡುಗೆಯೂ ಅಪಾರ: ನರೇಂದ್ರ ಮೋದಿ

author img

By

Published : Apr 14, 2022, 6:45 PM IST

'ಪ್ರಧಾನಮಂತ್ರಿ ಸಂಗ್ರಹಾಲಯ'ವನ್ನು ರಾಷ್ಟ್ರಕ್ಕೆ ಅರ್ಪಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಸ್ವತಂತ್ರ ಭಾರತದ ಇತಿಹಾಸದೊಂದಿಗೆ ಎಲ್ಲ ಪ್ರಧಾನಿಗಳನ್ನೂ ಈ ಸಂಗ್ರಹಾಲಯ ನೆನಪಿಸುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಪ್ರಧಾನಮಂತ್ರಿ ಸಂಗ್ರಹಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ: ಭಾರತದ ಪ್ರಜಾಪ್ರಭುತ್ವವು ಹೊಸ ಆಲೋಚನೆಗಳು ಮತ್ತು ಆವಿಷ್ಕಾರಗಳನ್ನು ಪರಿಚಯಿಸಲು ಜನರನ್ನು ಪ್ರೇರೇಪಿಸುತ್ತದೆ. ಪ್ರತಿಯೊಬ್ಬರ ದೃಷ್ಟಿಯೂ ದೇಶದ ವಿಕಾಸದತ್ತವೇ ಇರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ನೆಹರೂ ಮ್ಯೂಸಿಯಂನಲ್ಲಿ ಗುರುವಾರ 'ಪ್ರಧಾನಮಂತ್ರಿ ಸಂಗ್ರಹಾಲಯ' ಉದ್ಘಾಟನಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಪ್ರಧಾನಿಯೂ ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸಾಂವಿಧಾನಿಕ ಪ್ರಜಾಪ್ರಭುತ್ವದ ಗುರಿಗಳ ಈಡೇರಿಕೆಗೆ ಪ್ರಧಾನಿಗಳ ಕೊಡುಗೆ ಇದೆ. ಇಂದು ಈ ಸಂಗ್ರಹಾಲಯವನ್ನು ರಾಷ್ಟ್ರಕ್ಕೆ ಅರ್ಪಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಸ್ವತಂತ್ರ ಭಾರತದ ಇತಿಹಾಸದೊಂದಿಗೆ ಎಲ್ಲ ಪ್ರಧಾನಿಗಳನ್ನು ಈ ಸಂಗ್ರಹಾಲಯ ನೆನಪಿಸುತ್ತದೆ ಎಂದು ತಿಳಿಸಿದರು.

ಅಲ್ಲದೇ, ಇವತ್ತು ಇಡೀ ವಿಶ್ವವೇ ಭಾರತದತ್ತ ಭರವಸೆಯಿಂದ ನೋಡುತ್ತಿದೆ. ಮುಂದಿನ ದಿನಗಳಲ್ಲಿ ಈ 'ಪ್ರಧಾನಮಂತ್ರಿ ಸಂಗ್ರಹಾಲಯ'ಕ್ಕೆ ಯಾರದ್ದೇ ಹೆಸರು ಸೇರಿದರೂ ಅದು ನವ ಭಾರತದ ಶಕ್ತಿ ಮತ್ತು ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಜಗತ್ತು ನಮ್ಮ ದೇಶದತ್ತ ವಿಶ್ವಾಸದಿಂದ ನೋಡುತ್ತಿದ್ದು ನಾವು ಮುಂದಿನ 25 ವರ್ಷಗಳಲ್ಲಿ ಹೊಸ ಎತ್ತರವನ್ನು ತಲುಪಬೇಕಿದೆ ಎಂದರು.

ಸಂಗ್ರಹಾಲಯದ ಚಿಹ್ನೆ ಬಗ್ಗೆ ಉಲ್ಲೇಖಿಸಿ ಮಾತನಾಡಿದ ಪ್ರಧಾನಿ, ಇದು ಭಾರತೀಯರು ಹಿಡಿದಿರುವ 'ಧರ್ಮ ಚಕ್ರ'ದ ಕೈಗಳು ಮತ್ತು ನಮ್ಮ ರಾಷ್ಟ್ರ ಮತ್ತು ಪ್ರಜಾಪ್ರಭುತ್ವದ ಸಂತೇಕವಾಗಿದೆ. ಅಲ್ಲದೇ, ಸಂಸದೀಯ ವ್ಯವಸ್ಥೆಯ ನೆಲೆಯನ್ನು ನಮಗೆ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ್ದಾರೆ ಎಂದು ಹೇಳಿದರು.

ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ, ಮ್ಯೂಸಿಯಂನ ಪ್ರಥಮ ಎಂಟ್ರಿ ಟಿಕೆಟ್ ಖರೀದಿಸಿದರು. ಈ 'ಪ್ರಧಾನಮಂತ್ರಿ ಸಂಗ್ರಹಾಲಯ'ವನ್ನು ದೇಶದ ಎಲ್ಲ ಪ್ರಧಾನಿಗಳ ನಾಯಕತ್ವ, ದೂರದೃಷ್ಟಿ ಮತ್ತು ಸಾಧನೆಗಳ ಬಗ್ಗೆ ಯುವ ಪೀಳಿಗೆಗೆ ತಿಳಿಸುವ ಮತ್ತು ಯುವಜನರಿಗೆ ಪ್ರೇರೇಪಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ.

ಇದನ್ನೂ ಓದಿ: 'ಜಿಲ್ಲಾಧಿಕಾರಿಯ ಕಪಾಳಕ್ಕೆ ಬಾರಿಸಿದರೆ ರಾಜಕಾರಣಿ': ಬಿಜೆಪಿ ಸಂಸದನ 'ರಾಜಕೀಯ ಪಾಠ'!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.