ETV Bharat / bharat

ಸ್ವದೇಶಕ್ಕೆ ಮರಳಿದ ಭಾರತೀಯ ಚೆಸ್ ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ​ಗೆ ಅದ್ಧೂರಿ ಸ್ವಾಗತ!

author img

By ETV Bharat Karnataka Team

Published : Aug 30, 2023, 11:20 AM IST

Updated : Aug 30, 2023, 11:59 AM IST

ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣದಲ್ಲಿ ಚೆಸ್ ಗ್ರ್ಯಾಂಡ್ ಮಾಸ್ಟ್ ಪ್ರಜ್ಞಾನಂದ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು.

Indian chess grandmaster  2023 FIDE World Cup runner up R Praggnanandhaa  Praggnanandhaa received a grand welcome  ಸ್ವದೇಶಕ್ಕೆ ಮರಳಿದ ಭಾರತೀಯ ಚೆಸ್ ಗ್ರ್ಯಾಂಡ್‌ಮಾಸ್ಟರ್  ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ​ಗೆ ಅದ್ಧೂರಿ ಸ್ವಾಗತ  ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣ  ಪ್ರಜ್ಞಾನಂದ ಅವರಿಗೆ ಅದ್ದೂರಿ ಸ್ವಾಗತ  ಜರ್ಮನಿಯಿಂದ ಸ್ವದೇಶಕ್ಕೆ ಮರಳಿದ ಚೆಸ್ ಗ್ರ್ಯಾಂಡ್ ಮಾಸ್ಟರ್  ಪ್ರಜ್ಞಾನಂದರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ  ಪ್ರಜ್ಞಾನಂದ ಅವರಿಗೆ ಹೂಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು
ಸ್ವದೇಶಕ್ಕೆ ಮರಳಿದ ಭಾರತೀಯ ಚೆಸ್ ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ​ಗೆ ಅದ್ಧೂರಿ ಸ್ವಾಗತ!

ಚೆನ್ನೈ, ತಮಿಳುನಾಡು: ಜರ್ಮನಿಯಿಂದ ಸ್ವದೇಶಕ್ಕೆ ಮರಳಿದ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಅವರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ವಿಮಾನ ನಿಲ್ದಾಣದಲ್ಲಿ ಪ್ರಜ್ಞಾನಂದ ಅವರಿಗೆ ಹೂಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು.

  • #WATCH | Tamil Nadu | "It feels really great. I think it is good for Chess," says Indian chess grandmaster and 2023 FIDE World Cup runner-up R Praggnanandhaa, as his schoolmates, All India Chess Federation representatives and State Government representatives receive him at… pic.twitter.com/s2TpHCR7tz

    — ANI (@ANI) August 30, 2023 " class="align-text-top noRightClick twitterSection" data=" ">

ಹೌದು, ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಮತ್ತು 2023 ರ FIDE ವಿಶ್ವಕಪ್ ರನ್ನರ್ ಅಪ್ ಆರ್ ಪ್ರಜ್ಞಾನಂದ ಅವರು ದೇಶಕ್ಕೆ ಹಿಂದಿರುಗುತ್ತಿದ್ದಂತೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಸ್ವಾಗತ ಕೋರಲಾಯಿತು. ಈ ವೇಳೆ, ವಿಮಾನ ನಿಲ್ದಾಣದಲ್ಲಿ ಡೊಳ್ಳು, ಬಾಜಾ-ಭಜಂತ್ರಿ ಮುಂತಾದ ವಾದ್ಯ, ಮೊಳಗಿದವು. ಅಷ್ಟೇ ಅಲ್ಲ ಪ್ರಜ್ಞಾನಂದ ಅವರನ್ನು ಬರಮಾಡಿಕೊಳ್ಳಲು ಸಹಪಾಠಿಗಳು, ಅಖಿಲ ಭಾರತ ಚೆಸ್ ಫೆಡರೇಶನ್ ಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಮಾನ ನಿಲ್ದಾಣದಲ್ಲಿ ಇಷ್ಟೊಂದು ಜನರನ್ನು ನೋಡಿ ನನಗೆ ತುಂಬಾನೇ ಸಂತೋಷವಾಗಿದೆ. ಇದು ನಿಜವಾಗಿಯೂ ಅದ್ಭುತ ಕ್ಷಣವಾಗಿದೆ. ಇದು ಚೆಸ್‌ಗೆ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ ಎಂದು ಭಾರತೀಯ ಚೆಸ್ ಗ್ರ್ಯಾಂಡ್‌ಮಾಸ್ಟರ್ ಮತ್ತು 2023 ರ FIDE ವಿಶ್ವಕಪ್ ರನ್ನರ್-ಅಪ್ ಪ್ರಜ್ಞಾನಂದ ಅವರು ಹೇಳಿದರು.

ಚೆಸ್​ ವಿಶ್ವಕಪ್​ನಲ್ಲಿ ಪ್ರಜ್ಞಾನಂದ ರನ್ನರ್​-ಅಪ್​: ತೀವ್ರ ಕುತೂಹಲ ಕೆರಳಿಸಿದ್ದ ಫಿಡೆ ಚೆಸ್​​ ವಿಶ್ವಕಪ್​ನಲ್ಲಿ ನಾರ್ವೆಯ ಮ್ಯಾಗ್ನಸ್​ ಕಾರ್ಲ್​ಸನ್ ಕೊನೆಗೂ ಚಾಂಪಿಯನ್ ಆಗಿ ಹೊರಹೊಮ್ಮಿದರು. ಗುರುವಾರ ಆಗಸ್ಟ್​ 24ರಂದು ನಡೆದ ಟೈ-ಬ್ರೇಕ್​ ಪಂದ್ಯದಲ್ಲಿ ಭಾರತದ ಆರ್​.ಪ್ರಜ್ಞಾನಂದ ವೀರೋಚಿತ ಸೋಲು ಕಂಡರು. ಈ ಮೂಲಕ ಫಿಡೆ ಚೆಸ್​​ ವಿಶ್ವಕಪ್ ರನ್ನರ್​ ಅಪ್​ಗೆ ತೃಪ್ತಿಪಟ್ಟರು.

ವಿಶ್ವದ 2ನೇ ಶ್ರೇಯಾಂಕಿತ ಆಟಗಾರ ಹಿಕರು ನಕಮುರಾ ಹಾಗೂ 3ನೇ ಶ್ರೇಯಾಂಕಿತ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಮಣಿಸಿ ಪ್ರಜ್ಞಾನಂದ ಫೈನಲ್​ಗೆ ಲಗ್ಗೆ ಇಟ್ಟಿದ್ದರು. ಫೈನಲ್​ನಲ್ಲಿ ಅಗ್ರ ಶ್ರೇಯಾಂಕಿತ ಹಾಗೂ 5 ಬಾರಿಯ ವಿಶ್ವ ಚಾಂಪಿಯನ್​ ಮ್ಯಾಗ್ನಸ್​ ಕಾರ್ಲ್​ಸನ್ ವಿರುದ್ಧ ಪ್ರಶಸ್ತಿ ಗೆಲ್ಲಲು ತೀವ್ರ ಹಣಾಹಣಿ ನಡೆಸಿದ್ದರು. ಎರಡು ದಿನಗಳ ಕಾಲ ಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದೇ ಪ್ರಜ್ಞಾನಂದ ವೀರೋಚಿತ ಆಟಕ್ಕೆ ಸಾಕ್ಷಿಯಾಗಿತ್ತು.

ಇದೇ ಕಾರಣದಿಂದ ಮೂರನೇ ದಿನ ಟೈ-ಬ್ರೇಕ್​ಗೆ ಪಂದ್ಯ ಸಾಗಿತ್ತು. ಈ ಪಂದ್ಯದಲ್ಲಿ ಗೆದ್ದಿದ್ದರೆ ಚೆಸ್​ ವಿಶ್ವಕಪ್​ ಗೆದ್ದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ ಪಾತ್ರರಾಗುತ್ತಿದ್ದರು. ಆದರೆ, 18 ವರ್ಷದ ಪ್ರಜ್ಞಾನಂದ ಒಡ್ಡಿದ್ದ ಕಠಿಣ ಸವಾಲನ್ನು 32 ವರ್ಷದ ಕಾರ್ಲ್​ಸನ್​ ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾದರು. ಟೈ-ಬ್ರೇಕ್​ನ ಮೊದಲ ಪಂದ್ಯದಲ್ಲಿ 45 ನಡೆಗಳಿಂದ ಕಾರ್ಲ್​ಸನ್ ಗೆದ್ದಿದ್ದರು. ಎರಡನೇ ಪಂದ್ಯ 22 ನಡೆಗಳೊಂದಿಗೆ ಡ್ರಾ ಕಂಡಿತ್ತು. ಆದರೆ, ಮೊದಲ ಪಂದ್ಯ ಗೆದ್ದಿದ್ದ ಕಾರ್ಲ್​ಸನ್ ಎಚ್ಚರಿಕೆಯಿಂದ ಆಡುವ ಮೂಲಕ ಮೊದಲ ಚೆಸ್‌​ ವಿಶ್ವಕಪ್​ ಗೆದ್ದರು.

ಓದಿ: ವಿಶ್ವ ಚೆಸ್​ ಚಾಂಪಿಯನ್​ಶಿಪ್​: ಪ್ರಜ್ಞಾನಂದಗೆ ವಿಡಿಯೋ ಕಾಲ್​ ಮೂಲಕ ಅಭಿನಂದನೆ ಸಲ್ಲಿಸಿದ ಸಿಎಂ ಸ್ಟಾಲಿನ್​

Last Updated : Aug 30, 2023, 11:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.