ETV Bharat / bharat

ಸೂಪರ್​ಟೆಕ್​ನ ಅವಳಿ ಗೋಪುರ ನೆಲಸಮ ವಿಚಾರ.. ಇದೊಂದು ಸರಳ ಪ್ರಕ್ರಿಯೆ ಎಂದ ಬ್ಲಾಸ್ಟರ್ ಚೇತನ್ - ಅತಿದೊಡ್ಡ ಕಟ್ಟಡದ ನೆಲಸಮ ಕಾರ್ಯಾಚರಣೆ

ಸುಪ್ರೀಂ ಕೋರ್ಟ್, ನಿಬಂಧನೆಗಳಿಗೆ ವಿರುದ್ದವಾಗಿ ನಿರ್ಮಿಸುತ್ತಿದ್ದ ಸೂಪರ್‌ ಟೆಕ್ ಎಮರಾಲ್ಡ್ ಸಂಸ್ಥೆ 40 ಅಂತಸ್ತಿನ 2 ಟವರ್​ಗಳನ್ನು ಕೆಡವಲು ಆಗಸ್ಟ್​ 31, 2021ರಂದು ಆದೇಶಿಸಿತ್ತು.

supertech-twin-towers
ಬ್ಲಾಸ್ಟರ್ ಚೇತನ್ ದತ್ತಾ
author img

By

Published : Aug 26, 2022, 9:59 AM IST

ನೋಯ್ಡಾ(ಉತ್ತರ ಪ್ರದೇಶ) : ನಿಯಮ ಮೀರಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಆರೋಪದ ಮೇರೆಗೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶದ ನೋಯ್ಡಾದ ಸೂಪರ್​ಟೆಕ್​ನ ಅವಳಿ ಗೋಪುರ ಕಟ್ಟಡವನ್ನು ನೆಲ ಸಮಗೊಳಿಸಲು ಆದೇಶ ನೀಡಿದೆ.

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಇದೇ ಆಗಸ್ಟ್​ 28ರಂದು ಅವಳಿಗೋಪುರ ನೆಲಸಮ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಆ ಕಟ್ಟಡವನ್ನು ಯಾರಿಗೂ ಹಾನಿಯಾಗದಂತೆ ಹೇಗೆ ಕೆಡವಲಾಗುತ್ತದೆ ಎಂಬ ಬಗ್ಗೆ ಭಾರತೀಯ ಬ್ಲಾಸ್ಟರ್ ಚೇತನ್ ದತ್ತಾ ಪ್ರತಿಕ್ರಿಸಿದ್ದಾರೆ.

ಡೈನಮೋದಿಂದ ಕರೆಂಟ್ ಬಳಸಿ ಡಿಟೋನೇಟರ್‌ಗಳನ್ನು ಬ್ಲಾಸ್ಟ್​ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಕೇವಲ 9 ಸಕೆಂಡ್​ಗಳಲ್ಲಿ ಸೂಪರ್‌ಟೆಕ್ ಅವಳಿ ಗೋಪುರವನ್ನು ನೆಲಸಮಗೊಳಿಸಲಾಗುತ್ತದೆ. ಕಟ್ಟಡದಿಂದ ನಾವು ಸುಮಾರು 50-70ಮೀ ದೂರದಲ್ಲಿರುತ್ತೇವೆ. ಯಾವುದೇ ಅಪಾಯವಿಲ್ಲ ಮತ್ತು ಕಟ್ಟಡವು ಸರಿಯಾದ ರೀತಿಯಲ್ಲಿ ಕುಸಿಯುತ್ತದೆ ಎಂದು ನಮಗೆ ತುಂಬಾ ಖಚಿತವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬ್ಲಾಸ್ಟಿಂಗ್ ಪ್ರದೇಶವು ನಾಲ್ಕು ಪದರಗಳಿಂದ ಮುಚ್ಚಲ್ಪಟ್ಟಿದೆ. ಆದ್ದರಿಂದ ಯಾವುದೇ ಕಲ್ಲುಮಣ್ಣುಗಳು ಹಾರುವುದಿಲ್ಲ. ಆದರೆ ಧೂಳು ಮೇಲೇರುತ್ತದೆ ಎಂದು ಚೇತನ್ ದತ್ತಾ ಕಟ್ಟಡ ನೆಲಸಮದ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಚಾರ್​ಮಿನಾರ್​​​ಗಿಂತ ಎತ್ತರದ ಕಟ್ಟಡ: ಸೂಪರ್‌ಟೆಕ್‌ನ ಅಕ್ರಮ ಅವಳಿ ಗೋಪುರಗಳು ಕುತುಬ್ ಮಿನಾರ್‌ಗಿಂತ ಎತ್ತರದ ಕಟ್ಟಡವಾಗಿದೆ. ಆಗಸ್ಟ್ 28 ರಂದು ಮಧ್ಯಾಹ್ನ 2:30 ಕ್ಕೆ ಈ ಅತಿದೊಡ್ಡ ಕಟ್ಟಡದ ನೆಲಸಮ ಕಾರ್ಯಾಚರಣೆ ನಡೆಯಲಿದೆ. ಕೆಡವುವಾಗ ಉಂಟಾಗುವ ಕಂಪನವನ್ನು ತಗ್ಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಪೆಕ್ಸ್ (32 ಮಹಡಿಗಳು) ಮತ್ತು ಸೆಯಾನೆ (29 ಮಹಡಿಗಳು) ಕೆಡವುವಿಕೆಯು ಸರಿಸುಮಾರು 35,000 ಕ್ಯುಬಿಕ್ ಮೀಟರ್ ಅವಶೇಷ ಉಂಟಾಗುತ್ತದೆ. ಅದನ್ನು ತೆರವುಗೊಳಿಸಲು ಕನಿಷ್ಠ ಮೂರು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಚೇತನ್​ ತಿಳಿಸಿದ್ದಾರೆ.

ನೆಲಸಮ ಕಾರ್ಯ ಆಗಸ್ಟ್ 21 ರಂದು ಆಗಬೆಕಿತ್ತು. ಆದರೆ, ನೋಯ್ಡಾ ಪ್ರಾಧಿಕಾರದ ಕೋರಿಕೆಯ ಮೇರೆಗೆ ನ್ಯಾಯಾಲಯವು ನೆಲಸಮ ದಿನಾಂಕವನ್ನು ಆಗಸ್ಟ್ 28ಕ್ಕೆ ಮುಂದೂಡಿತ್ತು.

ಇದನ್ನೂ ಓದಿ : ನೋಯ್ಡಾ ಅವಳಿ ಕಟ್ಟಡ ಕೆಡವಲು ಮುಹೂರ್ತ ಫಿಕ್ಸ್​.. 3700 ಕೆಜಿ ಸ್ಫೋಟಕ ಸಜ್ಜು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.