ETV Bharat / bharat

ಗಡಿಯಲ್ಲಿ ದೀಪ ಬೆಳಗಿಸಿ, ಪಟಾಕಿ ಸಿಡಿಸಿ ದೀಪಾವಳಿ ಸಂಭ್ರಮಿಸಿದ ಭಾರತೀಯ ಯೋಧರು - ದೀಪಾವಳಿ

ಭಾರತೀಯ ಸೈನಿಕರು ತಾವಿರುವ ಗಡಿಪ್ರದೇಶದಲ್ಲಿಯೇ ಹಣತೆಗಳನ್ನು ಹಚ್ಚಿ ಬೆಳಕಿನ ಹಬ್ಬವನ್ನು ಸ್ವಾಗತಿಸಿದರು.

Army soldiers celebrate Diwali
ಗಡಿಯಲ್ಲಿ ದೀಪ ಬೆಳಗಿ ದೀಪಾವಳಿ ಆಚರಿಸಿದ ಯೋಧರು
author img

By

Published : Oct 23, 2022, 7:27 AM IST

Updated : Oct 23, 2022, 7:50 AM IST

ಅಖ್ನೂರ್(ಜಮ್ಮು& ಕಾಶ್ಮೀರ): ಇಲ್ಲಿನ ಅಖ್ನೂರ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಭಾರತೀಯ ಸೇನಾ ಯೋಧರು ಪಟಾಕಿ ಸಿಡಿಸಿ, ದೀಪಗಳನ್ನು ಬೆಳಗಿಸುವ ಮೂಲಕ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಬರಮಾಡಿಕೊಂಡರು.

ದೇಶವಾಸಿಗಳಿಗೆ ಆತಂಕ ಬೇಡ. ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಎಂದು ಈ ಸಂದರ್ಭದಲ್ಲಿ ಯೋಧರೊಬ್ಬರು ಹೇಳಿದರು. ಕರ್ನಲ್ ಇಕ್ಬಾಲ್ ಸಿಂಗ್ ಎಲ್ಲರಿಗೂ ದೀಪಾವಳಿಯ ಶುಭಾಶಯ ಕೋರಿದರು.

ಗಡಿಯಲ್ಲಿ ದೀಪ ಬೆಳಗಿ ದೀಪಾವಳಿ ಆಚರಿಸಿದ ಯೋಧರು

ಕೋವಿಡ್​ ಸಾಂಕ್ರಾಮಿಕದ ಎರಡು ವರ್ಷಗಳ ತರುವಾಯ ದೀಪಗಳ ಹಬ್ಬ ದೀಪಾವಳಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ದೇಶದ ಜನರು ಹಾತೊರೆಯುತ್ತಿದ್ದಾರೆ.

ಶ್ರೀರಾಮನು ರಾವಣನನ್ನು ಸಂಹರಿಸಿ 14 ವರ್ಷಗಳ ವನವಾಸ ಕಳೆದ ನಂತರ ದೀಪಾವಳಿಯಂದು ಅಯೋಧ್ಯೆಗೆ ಹಿಂದಿರುಗಿದ್ದ ಎಂದು ಹಿಂದೂ ಪುರಾಣಗಳು ಹೇಳುತ್ತವೆ. ಹಬ್ಬದ ಅಂಗವಾಗಿ ಜನರು ಲಕ್ಷ್ಮಿ, ಗಣೇಶ ಮತ್ತು ಕುಬೇರನಿಗೆ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿ ಒದಗಿಸುವಂತೆ ಪ್ರಾರ್ಥಿಸುತ್ತಾರೆ.

ಇದನ್ನೂ ಓದಿ: ದೀಪಾವಳಿ ಸಂಭ್ರಮಾಚರಣೆಯ 'ಅರ್ಥ'.. ಹಬ್ಬ ತಿಳಿಸುವ ಆರ್ಥಿಕ ದೂರದೃಷ್ಟಿಯ ಪಾಠವಿದು

Last Updated : Oct 23, 2022, 7:50 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.