ETV Bharat / bharat

ಉಗ್ರರ ಅಡಗುದಾಣಗಳ ಮೇಲೆ ಕಣ್ಣಿಡಲಿದೆ ‘ಮೈಕ್ರೋಕಾಪ್ಟರ್​​’ - ಮೈಕ್ರೋಡ್ರೋಣ್

ಸದ್ಯ ಗಡಿಯುದ್ದಕ್ಕೂ ಕಣ್ಗಾವಲಿಗಾಗಿ ಸ್ವಿಚ್ ಡ್ರೋಣ್​​ಗಳ ಖರೀದಿಗೆ ಭಾರತ ಸಹಿ ಹಾಕಿದೆ. ಇದು ನೇರವಾಗಿ ಟೇಕಾಫ್ ಆಗಲು ಮತ್ತು ಗರಿಷ್ಠ 4,500 ಮೀಟರ್ ಎತ್ತರಕ್ಕೆ ಸತತ 2 ಗಂಟೆಗಳ ಕಾಲ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ಐಡಿಯಾ ಫೋರ್ಜ್​​ನ ಮೋಹಿತ್ ಬನ್ಸಾಲ್ ಹೇಳಿದ್ದಾರೆ.

indian-army-officer-develops-microcopter-for-tracking-terrorists-inside-buildings
ಉಗ್ರರ ಅಡಗುದಾಣಗಳ ಮೇಲೆ ಕಣ್ಣಿಡಲಿದೆ ‘ಮೈಕ್ರೋಕಾಪ್ಟರ್​​’
author img

By

Published : Jan 13, 2021, 10:49 PM IST

ನವದೆಹಲಿ: ಕೊಠಡಿ ಅಥವಾ ಕಟ್ಟಡದಲ್ಲಿ ಅಡಗಿರುವ ಉಗ್ರರನ್ನು ಪತ್ತೆ ಮಾಡಲು ಸೇನಾ ಅಧಿಕಾರಿಯೊಬ್ಬರು ‘ಮೈಕ್ರೋಕಾಪ್ಟರ್’​ ಅಭಿವೃದ್ಧಿ ಪಡಿಸಿದ್ದಾರೆ. ಸ್ಥಳೀಯ ಸೇನಾಧಿಕಾರಿ ಜಿವೈಕೆ ರೆಡ್ಡಿ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದು, ಭಯೋತ್ಪಾದಕರು ಅಡಗಿರುವ ಕಟ್ಟಡದೊಳಗೆ ಕಣ್ಗಾವಲು ನಡೆಸಲು ಇದು ಸಹಾಯಕವಾಗಲಿದೆ.

ಈ ಸಾಧನವನ್ನು ಜಮ್ಮು ಮತ್ತು ಕಾಶ್ಮೀರದ ವಿಶೇಷ ಪ್ಯಾರಾ ಬೆಟಾಲಿಯನ್ ಪಡೆಗಳು ಯಶಸ್ವಿಯಾಗಿ ಪ್ರಯೋಗ ನಡೆಸಿದ್ದು, ಈ ಮೈಕ್ರೋಡ್ರೋಣ್​​​ನಲ್ಲಿ ಹೆಚ್ಚಿನ ಸುಧಾರಣೆ ನಡೆಸಲಾಗುತ್ತಿದೆ.

ಸದ್ಯ ಗಡಿಯುದ್ದಕ್ಕೂ ಕಣ್ಗಾವಲಿಗಾಗಿ ಸ್ವಿಚ್ ಡ್ರೋಣ್​​ಗಳ ಖರೀದಿಗೆ ಭಾರತ ಸಹಿ ಹಾಕಿದೆ. ಇದು ನೇರವಾಗಿ ಟೇಕಾಫ್ ಆಗಲು ಮತ್ತು ಗರಿಷ್ಠ 4,500 ಮೀಟರ್ ಎತ್ತರಕ್ಕೆ ಸತತ 2 ಗಂಟೆಗಳ ಕಾಲ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ಐಡಿಯಾ ಫೋರ್ಜ್​​ನ ಮೋಹಿತ್ ಬನ್ಸಾಲ್ ಹೇಳಿದ್ದಾರೆ.

ಈ ಹಿಂದೆ ಈ ಸಂಸ್ಥೆ ಡಿಆರ್​ಡಿಒ ಜೊತೆಗೂಡಿ ‘ನೇತ್ರ’ ಡ್ರೋಣ್ ಅನ್ನು ಅಭಿವೃದ್ಧಿಪಡಿಸಿತ್ತು. ಈ ಡ್ರೋಣ್​​ಗಳನ್ನು ದೆಹಲಿಯಲ್ಲಿ ನಡೆದಿದ್ದ ಭಾರತೀಯ ಸೇನೆಯ ಆಂತರಿಕ ನಾವೀನ್ಯತೆ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿತ್ತು.

ಇದನ್ನೂ ಓದಿ: ಸ್ಪಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ.. ಹಿಮದ ರಾಶಿಗೆ ಇಂಡಿಗೋ ವಿಮಾನ ಡಿಕ್ಕಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.