ಲಡಾಖ್: ಭಾರತ -ಚೀನಾ ಮಧ್ಯೆ ಲಡಾಖ್ನ ಪ್ಯಾಂಗಾಂಗ್ನಲ್ಲಿ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ಈಗ ತಿಳಿಯಾಗಿದೆ.
2020 ಆರಂಭದಿಂದ ತ್ವೇಷಮಯದಿಂದ ಕೂಡಿದ್ದ ವಾತಾವರಣ, ಸತತ ಒಂಬತ್ತು ಸುತ್ತಿನ ಮಾತುಕತೆ ಬಳಿಕ ಇದೀಗ ತಿಳಿಯಾಗಿದೆ. ಎರಡೂ ರಾಷ್ಟ್ರಗಳ ನಡುವಿನ ಶಾಂತಿ ಮಾತುಕತೆ ಮೂಲಕ ಮಾಡಿಕೊಂಡ ಒಪ್ಪಂದದಂತೆ ಉಭಯ ದೇಶಗಳು ತಮ್ಮ ಸೇನೆಯನ್ನ ವಿವಾದಿತ ಜಾಗದಿಂದ ವಾಪಸ್ ಪಡೆಯುತ್ತಿವೆ.
ಮಾತುಕತೆ ಯಶಸ್ಸಿನ ಬಳಿಕ ಚೀನಾ ಸೇನಾ ಪಡೆ ಪ್ಯಾಂಗಾಂಗ್ ಸರೋವರದ ತೀರದಿಂದ ಹಿಂದೆ ಸರಿಯುತ್ತಿರುವ ವಿಡಿಯೋಗಳನ್ನ ಭಾರತದ ಸೇನೆ ಬಿಡುಗಡೆ ಮಾಡಿತ್ತು. ಪ್ಯಾಂಗಾಂಗ್ ಸರೋವರ ತೀರದಿಂದ ಉಭಯ ಸೇನೆಗಳು ಹಿಂದೆ ಸರಿಯುತ್ತಿರುವ ಫೋಟೋ ಮತ್ತು ವಿಡಿಯೋಗಳನ್ನ ಭಾರತೀಯ ಸೇನೆ ಬಿಡುಗಡೆ ಮಾಡಿದೆ.
ಸುಮಾರು ಹತ್ತು ತಿಂಗಳ ಕಾಲ ಉಭಯ ರಾಷ್ಟ್ರಗಳ ಸೇನಾ ಪಡೆಗಳು ಮೈ ಕೊರೆಯುವ ಚಳಿಯಲ್ಲಿ ಪರಸ್ಪರ ಎದುರು ಬದುರಾಗಿದ್ದವು.