ETV Bharat / bharat

ಭಾರತೀಯ ವಾಯುಪಡೆಯಲ್ಲಿ ಅಭೂತಪೂರ್ವ ಪರಿವರ್ತನೆಯಾಗುತ್ತಿದೆ: ಐಎಎಫ್ ಮುಖ್ಯಸ್ಥ - ಸಂಯೋಜಿತ ಪದವಿ ಪರೇಡ್

ಕಳೆದ ಕೆಲವು ದಶಕಗಳಲ್ಲಿ ಯಾವುದೇ ಸಂಘರ್ಷದಲ್ಲಿ ಗೆಲುವು ಸಾಧಿಸುವಲ್ಲಿ ವಾಯುಪಡೆಯ ಶಕ್ತಿ ನಿರ್ಣಾಯಕವಾಗಿದೆ. ಈ ಹಿನ್ನೆಲೆಯಲ್ಲಿಯೇ ಐಎಎಫ್‌ನ ಪ್ರಸ್ತುತ ಸಾಮರ್ಥ್ಯ ವರ್ಧನೆಯು ಮಹತ್ತರವಾದ ಮಹತ್ವವನ್ನು ಪಡೆದುಕೊಂಡಿದೆ ಎಂದು ಎಂದು ಭದೌರಿಯಾ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ವಾಯುಪಡೆಯಲ್ಲಿ ಅಭೂತಪೂರ್ವ ಪರಿವರ್ತನೆಯಾಗುತ್ತಿದೆ: ಐಎಎಫ್ ಮುಖ್ಯಸ್ಥ
author img

By

Published : Jun 19, 2021, 12:04 PM IST

Updated : Jun 19, 2021, 12:12 PM IST

ಹೈದರಾಬಾದ್: ದೇಶದಲ್ಲಿ ಭದ್ರತಾ ಸವಾಲುಗಳು ವೇಗವಾಗಿ ವಿಕಸನಗೊಳ್ಳುತ್ತಿದ್ದು, ಇದರ ಜೊತೆಗೆ ನೆರೆಹೊರೆಯ ರಾಷ್ಟ್ರಗಳ ಜೊತೆಗೆ ರಾಜಕೀಯ ಮತ್ತು ಭೌಗೋಳಿಕ ಅನಿಶ್ಚಿತತೆ ಇರುವ ಕಾರಣದಿಂದಾಗಿ ಆದಷ್ಟು ಬೇಗ ಭಾರತೀಯ ವಾಯುಪಡೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗುತ್ತಿದೆ ಎಂದು ಐಎಎಫ್ ಮುಖ್ಯಸ್ಥ ಆರ್​ಕೆಎಸ್​ ಭದೌರಿಯಾ ಸ್ಪಷ್ಟನೆ ನೀಡಿದ್ದಾರೆ.

ಹೈದರಾಬಾದ್​ನ ವಾಯುಪಡೆಯ ಅಕಾಡೆಮಿಯಲ್ಲಿ ಸಂಯೋಜಿತ ಪದವಿ ಪರೇಡ್ (ಸಿಜಿಪಿ) ಉದ್ದೇಶಿಸಿ ಮಾತನಾಡಿದ ಭದೌರಿಯಾ, ವಾಯುಪಡೆ ಒಂದು ಮಹತ್ವದ ಪರಿವರ್ತನೆಗೆ ಒಳಗಾಗುತ್ತಿದೆ. ನಮ್ಮ ಕಾರ್ಯಾಚರಣೆಯ ಪ್ರತಿಯೊಂದು ಅಂಶಗಳಲ್ಲೂ ಅತ್ಯುನ್ನತ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

ಕಳೆದ ಕೆಲವು ದಶಕಗಳಲ್ಲಿ ಯಾವುದೇ ಸಂಘರ್ಷದಲ್ಲಿ ಗೆಲುವು ಸಾಧಿಸುವಲ್ಲಿ ವಾಯುಪಡೆಯ ಶಕ್ತಿ ನಿರ್ಣಾಯಕವಾಗಿದೆ. ಈ ಹಿನ್ನೆಲೆಯಲ್ಲಿಯೇ ಐಎಎಫ್‌ನ ಪ್ರಸ್ತುತ ಸಾಮರ್ಥ್ಯ ವರ್ಧನೆಯು ಮಹತ್ತರವಾದ ಮಹತ್ವವನ್ನು ಪಡೆದುಕೊಂಡಿದೆ ಎಂದು ಭದೌರಿಯಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: SSLC ಪರೀಕ್ಷೆ ಸರಳೀಕರಣ: ಎರಡೇ ದಿನದಲ್ಲಿ 6 ವಿಷಯಗಳಿಗೂ ಎಕ್ಸಾಂ!

ಇದರ ಜೊತೆಗೆ ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ರಾಷ್ಟ್ರೀಯ ಹೋರಾಟದಲ್ಲಿ ಐಎಎಫ್ ವಹಿಸಿದ ನಿರ್ಣಾಯಕ ಪಾತ್ರದ ಬಗ್ಗೆಯೂ ಆರ್​ಕೆಎಸ್ ಭದೌರಿಯಾ ಮಾತನಾಡಿದ್ದಾರೆ.

Last Updated : Jun 19, 2021, 12:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.