ನವದೆಹಲಿ: ಭಾರತ - ಪಾಕ್ ನಡುವಿನ ಗಡಿ ಬಿಕ್ಕಟ್ಟು ವಿಚಾರವಾಗಿ ಮೂರನೇ ವ್ಯಕ್ತಿ ಮಧ್ಯಸ್ಥಿಕೆ ಭಾರತ ಸ್ವೀಕರಿಸುವುದಿಲ್ಲ ಎಂದು ರಾಯಭಾರಿ ಪಾರ್ಥಸಾರಥಿ ಸ್ಪಷ್ಟಪಡಿಸಿದ್ದಾರೆ. ಪಾಕ್ ವಿದೇಶಾಂಗ ಸಚಿವರು ಯುಎಇಯಲ್ಲಿ ಮೂರನೇ ವ್ಯಕ್ತಿ ಭಾರತ-ಪಾಕ್ ನಡುವಿನ ಬಿಕ್ಕಟ್ಟು ವಿಚಾರದಲ್ಲಿ ಭಾಗಿಯಾಗಬಹುದು ಎಂಬ ಹೇಳಿಕೆಗೆ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ-ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಬಗೆಹರಿಸಲು ಯುಎಇ ಸೇರಿದಂತೆ ಯಾವುದೇ ದೇಶ ಸಹ ಸಕಾರಾತ್ಮಕ ಪಾತ್ರ ನಿರ್ವಹಿಸಬಹುದು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮ್ಮದ್ ಖುರೇಷಿ ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಭಾರತ ತಿರುಗೇಟು ನೀಡಿದೆ.
-
Another productive interaction with FM @ABZayed on our bilateral cooperation. Took forward our ongoing discussions on this subject, starting in February. The strong focus on post-COVID economic recovery will remain a priority for us. pic.twitter.com/y1w3NXORBT
— Dr. S. Jaishankar (@DrSJaishankar) April 18, 2021 " class="align-text-top noRightClick twitterSection" data="
">Another productive interaction with FM @ABZayed on our bilateral cooperation. Took forward our ongoing discussions on this subject, starting in February. The strong focus on post-COVID economic recovery will remain a priority for us. pic.twitter.com/y1w3NXORBT
— Dr. S. Jaishankar (@DrSJaishankar) April 18, 2021Another productive interaction with FM @ABZayed on our bilateral cooperation. Took forward our ongoing discussions on this subject, starting in February. The strong focus on post-COVID economic recovery will remain a priority for us. pic.twitter.com/y1w3NXORBT
— Dr. S. Jaishankar (@DrSJaishankar) April 18, 2021
ಗಡಿ ಬಿಕ್ಕಟ್ಟು ವಿಚಾರದಲ್ಲಿ ಮೂರನೇ ವ್ಯಕ್ತಿ ಮಧ್ಯಸ್ಥಿಕೆ ವಹಿಸಲು ಭಾರತ ಬಯಸುವುದಿಲ್ಲ ಎಂದು ಜಿ ಪಾರ್ಥಸಾರಥಿ ಈಟಿವಿ ಭಾರತ್ಗೆ ತಿಳಿಸಿದ್ದು, ಇದರಲ್ಲಿ ಭಾರತದ ನಿಲುವು ತುಂಬಾ ಸ್ಪಷ್ಟವಾಗಿದ್ದು, ಈ ಸಮಸ್ಯೆ ದ್ವಿಪಕ್ಷೀಯವಾಗಿ ಅಥವಾ ಪರಸ್ಪರ ಒಪ್ಪಿದ ತತ್ವಗಳ ಮೂಲಕ ಇತ್ಯರ್ಥಪಡಿಸಬೇಕು ಎಂದಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಸಮಯದಲ್ಲಿ ಸಂವಾದ ನಿರೀಕ್ಷಿಸಬಹುದೇ ಎಂದು ಪ್ರಶ್ನೆ ಮಾಡಲಾಗಿದ್ದು, ಇಂಡೋ - ಪಾಕ್ ಸಂಭಾಷಣೆ ಬ್ಯಾಕ್ ಚಾನೆಲ್ ಮತ್ತು ರಹಸ್ಯವಾಗಿರಬೇಕು. ಇಲ್ಲದಿದ್ದರೆ ಅದು ಅರ್ಥಹೀನವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಪಾಕ್ ವಿದೇಶಾಂಗ ಸಚಿವ ಖುರೇಷಿ ಸದ್ಯ ಮೂರು ದಿನಗಳ ಯುಎಇ ಪ್ರವಾಸದಲ್ಲಿದ್ದು, ನಾನು ದ್ವಿಪಕ್ಷೀಯ ಭೇಟಿಯಾಗಿ ಇಲ್ಲಿದ್ದೇನೆ. ಭಾರತ-ಪಾಕಿಸ್ತಾನದ ಬಗ್ಗೆ ಮಾತನಾಡಲು ಅಲ್ಲ ಎಂದಿದ್ದಾರೆ. ಆದರೆ, ಉಭಯ ದೇಶಗಳ ನಡುವಿನ ಬಿಕ್ಕಟ್ಟಿನ ವಿಚಾರದಲ್ಲಿ ಮೂರನೇ ದೇಶ ಭಾಗಿಯಾಗುವುದಾದರೆ ಅದಕ್ಕೆ ನಮ್ಮ ಸ್ವಾಗತವಿದೆ ಎಂದಿದ್ದಾರೆ. ಇನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೂಡ ಭಾನುವಾರ ಅಬುಧಾಬಿಗೆ ಆಗಮಿಸಿದ್ದು, ಕೆಲವೊಂದು ದ್ವಿಪಕ್ಷೀಯ ವಿಚಾರವಾಗಿ ಮಾತುಕತೆ ನಡೆಸಿದರು. ಪುಲ್ವಾಮಾ ದಾಳಿ ಹಾಗೂ ಆರ್ಟಿಕಲ್ 370 ರದ್ಧುಗೊಳಿಸಿದ ಬಳಿಕ ಭಾರತ-ಪಾಕ್ ನಡುವಿನ ಸಂಬಂಧ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ.