ETV Bharat / bharat

IND vs WI 3rd ODI: 96 ರನ್​ಗಳ ಜಯ ಸಾಧಿಸಿದ ಭಾರತ.. 3-0 ಅಂತರದಲ್ಲಿ ಸರಣಿ ಕ್ಲೀನ್​ಸ್ವೀಪ್​

author img

By

Published : Feb 11, 2022, 9:01 PM IST

Updated : Feb 11, 2022, 9:54 PM IST

ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧ ಮೂರನೇ ಏಕದಿನ ಪಂದ್ಯವನ್ನೂ ಗೆಲ್ಲುವ ಮೂಲಕ ಭಾರತ ಸರಣಿ ಕ್ಲೀನ್​ಸ್ವೀಪ್​ ಸಾಧಿಸಿದೆ.

west-indies
ಕ್ಲೀನ್​ಸ್ವೀಪ್

ಅಹಮದಾಬಾದ್​: ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನೂ ಗೆಲ್ಲುವ ಮೂಲಕ ಭಾರತ 3-0 ಅಂತರದಲ್ಲಿ ಸರಣಿಯನ್ನು ಕ್ಲೀನ್​ಸ್ವೀಪ್​ ಸಾಧಿಸಿದೆ.

ಶುಕ್ರವಾರ ನಡೆದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 266 ರನ್​ಗಳ ಗುರಿ ಬೆನ್ನತ್ತಿದ್ದ ವೆಸ್ಟ್​ ಇಂಡೀಸ್​ ತಂಡ 37.1 ಓವರ್​ಗಳಲ್ಲಿ 169 ರನ್​ಗಳಿಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ದಯನೀಯ ಸೋಲು ಅನುಭವಿಸಿತು. ಈ ಮೂಲಕ ಭಾರತ ಮೂರನೇ ಪಂದ್ಯದಲ್ಲಿ 96 ರನ್​ಗಳ ಜಯ ಸಾಧಿಸಿತು.

ಭಾರತೀಯ ಬೌಲರ್​ಗಳ ಕರಾರುವಾಕ್​ ದಾಳಿ: ಭಾರತೀಯ ಬೌಲರ್​ಗಳ ದಾಳಿಯ ಮುಂದೆ ವೆಸ್ಟ್​ ಇಂಡೀಸ್​ ದೈತ್ಯ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೊಬ್ಬರು ಪೆವಿಲಿಯನ್​ ಪರೇಡ್​ ನಡೆಸಿದರು. ವೇಗದ ಬೌಲರ್​ ಮೊಹಮದ್​ ಸಿರಾಜ್​ ತಾವೆಸೆದ ಮೂರನೇ ಓವರ್​ನಲ್ಲಿಯೇ ಶಾಯ್​ ಹೋಪ್​ ಅವರನ್ನು ಬಲಿ ತೆಗೆದುಕೊಳ್ಳುವ ಮೂಲಕ ಕೆರೆಬಿಯನ್ನರ ಪತನಕ್ಕೆ ನಾಂದಿ ಹಾಡಿದರು.

ವೆಸ್ಟ್​ ಇಂಡೀಸ್​ ತಂಡ 25 ರನ್​ ಗಳಿಸುವಷ್ಟರಲ್ಲಿ ಪ್ರಮುಖ ಬ್ಯಾಟ್ಸ್​ಮನ್​ಗಳಾದ ಶಾಯ್ ಹೋಪ್​(5), ಬ್ರೆಂಡೆನ್​ ಕಿಂಗ್​(14), ಶಮ್ರಾಹ್​ ಬ್ರೂಕ್ಸ್​(0) ವಿಕೆಟ್​ ಕಳೆದುಕೊಂಡು ಪತನದ ಹಾದಿ ಹಿಡಿಯಿತು. ಈ ವೇಳೆ ಡ್ಯಾರನ್​ ಬ್ರಾವೋ(19) ಮತ್ತು ನಿಕೋಲಸ್​ ಪೂರನ್​(34) ಅಲ್ಪ ವಿರೋಧ ತೋರಿಸಿದರು.

ಜೊತೆಯಾಟ ಕಟ್ಟುತ್ತಿದ್ದ ಇಬ್ಬರನ್ನು ಬೇರ್ಪಡಿಸಲು ನಾಯಕ ರೋಹಿತ್​ ಶರ್ಮಾ ಯುವ ವೇಗಿ ಪ್ರಸಿದ್ಧ ಕೃಷ್ಣರನ್ನು ದಾಳಿಗಿಳಿಸಿದ್ದು ಫಲ ನೀಡಿತು. 19 ರನ್​ ಗಳಿಸಿದ್ದ ಡ್ಯಾರನ್​ ಬ್ರಾವೋ ವಿರಾಟ್​ ಕೊಹ್ಲಿಗೆ ಕ್ಯಾಚ್​ ನೀಡಿ ಔಟಾದರು.

ಸ್ಮಿತ್​-ಜೋಸೆಫ್​ ಹೊಡಿಬಡಿ ಆಟ: ಬಳಿಕ ಕ್ರೀಸ್​ಗೆ ಬಂದ ಜಾಸನ್​ ಹೋಲ್ಡರ್​ (6) ಮತ್ತು ಫ್ಯಾಬಿಯನ್​ ಅಲೆನ್​(0) ಸುತ್ತುವ ಮೂಲಕ ಮತ್ತೆ ಕುಸಿತಕ್ಕೆ ಕಾರಣವಾದರು. ಕಳೆದ ಪಂದ್ಯದಲ್ಲೂ ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟ್​ ಬೀಸಿ ಗುಡುಗಿದ್ದ ಓಡಿಯನ್​ ಸ್ಮಿತ್​(36)ಮತ್ತು ಅಲ್ಜಾರಿ ಜೋಸೆಫ್​(29) ಈ ಪಂದ್ಯದಲ್ಲೂ ರನ್​ ಪೇರಿಸಿದರು. ಸ್ಮಿತ್​ 3 ಸಿಕ್ಸರ್ ಸಿಡಿಸಿದರೆ, ಜೋಸೆಫ್​ 2 ಬೌಂಡರಿ ಗೆರೆ ದಾಟಿಸಿ ಭಾರತೀಯ ಬೌಲರ್​ಗಳ ಕಾಡಿದರು.

ಕೃಷ್ಣ - ಸಿರಾಜ್​ ಮೊನಚಿನ ದಾಳಿ: ಪ್ರಸಿದ್ಧ ಕೃಷ್ಣ ಸರಣಿಯಲ್ಲಿ ಉತ್ತಮ ಬೌಲಿಂಗ್​ ಲಯದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ 4 ವಿಕೆಟ್​ ಪಡೆದಿದ್ದ ಕೃಷ್ಣ ಈ ಪಂದ್ಯದಲ್ಲಿ 3 ವಿಕೆಟ್​ ಕಿತ್ತು ಕೆರೆಬಿಯನ್ನರ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಪ್ರಸಿದ್ಧ ಕೃಷ್ಣಗೆ ಸಾಥ್​ ನೀಡಿದ ಮೊಹಮದ್​ ಸಿರಾಜ್​ ಕೂಡ 3 ವಿಕೆಟ್​ ಕಿತ್ತು ಪ್ರವಾಸಿಗರ ಗೆಲುವಿನ ಆಸೆಗೆ ತಣ್ಣೀರೆರಚಿದರು.

ಇನ್ನು ವರ್ಷಗಳ ತರುವಾಯ ಏಕದಿನದಲ್ಲಿ ಸ್ಥಾನ ಪಡೆದ ಕುಲದೀಪ್​ ಯಾದವ್​ ಸಿಕ್ಕ ಅವಕಾಶವನ್ನು ಬಳಸಿಕೊಂಡು ಪ್ರಮುಖ 2 ವಿಕೆಟ್​ ಪಡೆದರೆ, ಬ್ಯಾಟಿಂಗ್​ನಲ್ಲಿ ಗುಡುಗಿದ್ದ ದೀಪಕ್​ ಚಹರ್​ ಬೌಲಿಂಗ್​ನಲ್ಲೂ 2 ವಿಕೆಟ್​ ಪಡೆದು ಮಿಂಚಿದರು.

ಅಂಗಳದಲ್ಲಿ ಮೆರೆದ ಶ್ರೇಯಸ್​ ಅಯ್ಯರ್​-ರಿಷಭ್​ ಪಂತ್​: ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಭಾರತದ ಇನಿಂಗ್ಸ್​ ಆರಂಭ ಕೂಡ ಕೆಟ್ಟದಾಗಿತ್ತು. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಶಿಖರ್​ ಧವನ್​ ಜೊತೆ ಬ್ಯಾಟಿಂಗ್​ಗೆ ಇಳಿದ ನಾಯಕ ರೋಹಿತ್​ ಶರ್ಮಾ(13) 3 ಬೌಂಡರಿ ಸಿಡಿಸಿ ಮಾರಕವಾಗುವ ಸೂಚನೆ ನೀಡಿದ್ದರು.

ಈ ವೇಳೆ, ಅಲ್ಜಾರಿ ಜೋಸೆಫ್​ ಎಸೆತದಲ್ಲಿ ಕ್ಲೀನ್​ಬೌಲ್ಡ್​ ಆಗಿ ಪೆವಿಲಿಯನ್​ನತ್ತ ಮುಖ ಮಾಡಿದರೆ, ಬಳಿಕ ಬಂದ ವಿರಾಟ್​ ಕೊಹ್ಲಿ(0) ಸೊನ್ನೆಗೆ ಔಟ್​ ಆಗುವ ಮೂಲಕ ಮತ್ತೊಮ್ಮೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು. ವಿರಾಟ್​ ಔಟಾದ ಬೆನ್ನಲ್ಲೇ ಶಿಖರ್​ ಧವನ್​(10)ಕೂಡ ವಿಕೆಟ್​ ಒಪ್ಪಿಸಿ ತಂಡ ಆರಂಭಿಕ ಕುಸಿತ ಕಂಡಿತ್ತು.

ಶತಕದ ಹಾದಿಯಲ್ಲಿ ಎಡವಿದ ಶ್ರೇಯಸ್​ ಅಯ್ಯರ್​: ಈ ವೇಳೆ ಕ್ರೀಸ್​ನಲ್ಲಿ ಜೊತೆಯಾದ ಶ್ರೇಯಸ್​ ಅಯ್ಯರ್​(80)ಮತ್ತು ವಿಕೆಟ್​ ಕೀಪರ್​ ರಿಷಭ್​​ ಪಂತ್​ (56) ಇಬ್ಬರೂ ಅರ್ಧಶತಕ ಸಿಡಿಸುವ ಮೂಲಕ 110 ರನ್​ಗಳ ಜೊತೆಯಾಟವಾಡಿ ವೆಸ್ಟ್​ ಇಂಡೀಸ್​ ಬೌಲರ್​ಗಳ ಬೆವರಿಳಿಸಿದರು. ಈ ಜೋಡಿ ಬೇರ್ಪಟ್ಟ ಬಳಿಕ ಮೈದಾನಕ್ಕೆ ಬಂದ ಕಳೆದ ಪಂದ್ಯದ ಸ್ಟಾರ್ ಸೂರ್ಯಕುಮಾರ್​ ಯಾದವ್​(6) ಫ್ಯಾಬಿಯಾನ್​ ಅಲೆನ್​ಗೆ ಸುಲಭ ತುತ್ತಾಗಿ ಔಟಾದರು.

ಶ್ರೇಯಸ್​ ಅಯ್ಯರನ್ನು ಸೇರಿಕೊಂಡ ವಾಷಿಂಗ್ಟ​ನ್​ ಸುಂದರ್​(33) ರನ್​ ಸಿಡಿಸಿ ತಂಡ 200 ಗಡಿ ದಾಟುವಂತೆ ನೋಡಿಕೊಂಡರು. ಶತಕದ ಹೊಸ್ತಿಲಲ್ಲಿದ್ದ ಶ್ರೇಯಸ್​ ಅಯ್ಯರ್​(80) ಹೈಡನ್​ ವಾಲ್ಶ್​ ಎಸೆತದಲ್ಲಿ ಔಟಾಗಿ ಶತಕ ವಂಚಿತರಾದರು.

ಅಯ್ಯರ್​ ಬಳಿಕ ಬಂದ ಬೌಲರ್​ ದೀಪಕ್​ ಚಹರ್​ 3 ಬೌಂಡರಿ, 2 ಸಿಕ್ಸರ್​ ಸಮೇತ 38 ರನ್​ ಕಲೆ ಹಾಕಿ ವೆಸ್ಟ್​ ಇಂಡೀಸ್​ ಬೌಲರ್​ಗಳ ಮೇಲೆ ಸವಾರಿ ಮಾಡಿದರು. ಅಂತಿಮವಾಗಿ ಭಾರತ 10 ವಿಕೆಟ್​ ನಷ್ಟಕ್ಕೆ 265 ರನ್​ ಕಲೆ ಹಾಕಿತ್ತು. ವೆಸ್ಟ್​ ಇಂಡೀಸ್​ ಪರವಾಗಿ ಜಾಸನ್​ ಹೋಲ್ಡರ್​ 34 ರನ್​ ನೀಡಿ 4 ವಿಕೆಟ್​ ಪಡೆದರೆ, ಅಲ್ಜಾರ್ರಿ ಜೋಶೆಫ್​ 2, ಹೈಡೆನ್​ ವಾಲ್ಶ್​ 2 ವಿಕೆಟ್​ ಕಿತ್ತು ಭಾರತೀಯ ಬ್ಯಾಟ್ಸಮನ್​ಗಳನ್ನು ಕಾಡಿದರು.

ಓದಿ: ವಿಂಡೀಸ್​ ವಿರುದ್ಧದ ಟಿ-20 ಸರಣಿಗೂ ಮುನ್ನ ಭಾರತಕ್ಕೆ ಆಘಾತ: ಇಬ್ಬರು ಆಟಗಾರರು ಔಟ್​

Last Updated : Feb 11, 2022, 9:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.