ಮುಂಬೈ(ಮಹಾರಾಷ್ಟ್ರ): ಹೊಸ ವಿಶ್ವ ಕ್ರಮಾಂಕ ರೂಪುಗೊಳ್ಳುತ್ತಿದೆ. ಬದಲಾಗುತ್ತಿರುವ ಈ ವಿಶ್ವ ಕ್ರಮಾಂಕದಲ್ಲಿ ಇಡೀ ಜಗತ್ತು ಹೊಸ ಆಕಾಂಕ್ಷೆಗಳೊಂದಿಗೆ ಭಾರತದತ್ತ ನೋಡುತ್ತಿದೆ. ಜಗತ್ತಿಗೆ ಮಾದರಿಯಾಗಲು, ಇಂದಿನ ಭಾರತದ ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಕೆಲಸ ಮಾಡುತ್ತಿದೆ. ಆ ನಿಟ್ಟಿನಲ್ಲಿ ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಿದ್ದೇವೆ. ಹಾಗಾಗಿ ಭಾರತ ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಸ್ಥಾನ ಪಡೆಯುವ ದಿನ ದೂರವಿಲ್ಲ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
-
#WATCH | Prime Minister Narendra Modi inaugurates the third edition of the Global Maritime India Summit (GMIS) 2023, via video conferencing pic.twitter.com/5JnU2hiAvV
— ANI (@ANI) October 17, 2023 " class="align-text-top noRightClick twitterSection" data="
">#WATCH | Prime Minister Narendra Modi inaugurates the third edition of the Global Maritime India Summit (GMIS) 2023, via video conferencing pic.twitter.com/5JnU2hiAvV
— ANI (@ANI) October 17, 2023#WATCH | Prime Minister Narendra Modi inaugurates the third edition of the Global Maritime India Summit (GMIS) 2023, via video conferencing pic.twitter.com/5JnU2hiAvV
— ANI (@ANI) October 17, 2023
ಇಂದು ಗ್ಲೋಬಲ್ ಮ್ಯಾರಿಟೈಮ್ ಇಂಡಿಯಾ ಶೃಂಗಸಭೆ (GMIS) 2023ರ ಮೂರನೇ ಆವೃತ್ತಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. "ಭಾರತದ ಕಡಲ ಸಾಮರ್ಥ್ಯಗಳು ಬಲಿಷ್ಠವಾಗಿರುವಾಗಲೆಲ್ಲಾ ದೇಶ ಹಾಗೂ ಜಗತ್ತು ಅದರ ಪ್ರಯೋಜನವನ್ನು ಪಡೆದುಕೊಂಡಿದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಕಳೆದ 9- 10 ವರ್ಷಗಳಿಂದ ನಮ್ಮ ಸರ್ಕಾರ ಕಡಲ ವಲಯವನ್ನು ಬಲಪಡಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ" ಎಂದು ಅವರು ಹೇಳಿದರು.
ಭಾರತದ ಬೆಳವಣಿಗೆಯ ಪ್ರಯಾಣದ ಭಾಗವಾಗಲು ಜಾಗತಿಕ ಹೂಡಿಕೆದಾರರನ್ನು ಆಹ್ವಾನಿಸಿದ ಪ್ರಧಾನಿ ಮೋದಿ, ಜಿ 20 ಶೃಂಗಸಭೆಯಲ್ಲಿ ಭಾರತವು ಕಾರಿಡಾರ್ ಕುರಿತು ಒಮ್ಮತ ರೂಪಿಸಲು ಮುಂದಾಳತ್ವ ವಹಿಸಿದೆ. ಕೆಲವೇ ದೇಶಗಳು ಅಭಿವೃದ್ಧಿ, ಜನಸಂಖ್ಯಾಶಾಸ್ತ್ರ, ಪ್ರಜಾಪ್ರಭುತ್ವ ಹಾಗೂ ಬೇಡಿಕೆಗಳಲ್ಲಿ ಅದೃಷ್ಟ ಮಾಡಿವೆ ಎಂದು ಹೇಳಿದರು.
"ಭಾರತವು ವಿಶಾಲವಾದ ಕರಾವಳಿ, ಬಲಿಷ್ಠ ಪರಿಸರ ವ್ಯವಸ್ಥೆ, ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ನಾವು ವಿಶ್ವದ ಅತಿದೊಡ್ಡ ರಿವರ್ ಕ್ರೂಸ್ ಸೇವೆ ಪ್ರಾರಂಭಿಸಿದ್ದೇವೆ. ನಾವು ಮುಂಬೈನಲ್ಲಿ ಆಧುನಿಕ ಕ್ರೂಸ್ ಟರ್ಮಿನಲ್ ಅನ್ನು ಸಹ ಪ್ರಾರಂಭಿಸುತ್ತಿದ್ದೇವೆ. ಕಳೆದ ಒಂದು ದಶಕದಲ್ಲಿ ಬಂದರು ಸಂಪರ್ಕ ಹೆಚ್ಚಿದೆ. ಸಾಗರಮಾಲಾ ತೆಗೆಯುವ ಮೂಲಕ ಮೂಲಸೌಕರ್ಯಗಳನ್ನು ಹೆಚ್ಚಿಸಲಾಯಿತು. ಕಂಟೈನರ್‌ಗಳ ಮೂಲಕ ಸರಕು ನಿರ್ವಹಣೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕಳೆದ 9 ವರ್ಷಗಳಲ್ಲಿ ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಸೂಚ್ಯಂಕವು ಸಾಕಷ್ಟು ಸುಧಾರಿಸಿದೆ. ಐಎನ್‌ಎಸ್ ವಿಕ್ರಾಂತ್ ನಮ್ಮ ಶಕ್ತಿಯ ಪ್ರತೀಕ" ಎಂದು ಮಾಹಿತಿ ನೀಡಿದರು.
ಇದೇ ವೇಳೆ, ಭಾರತದ ಸಾಗರ ಇಂಡಿಗೋ ಆರ್ಥಿಕತೆಯ ದೀರ್ಘಾವಧಿಯ ನೀಲನಕ್ಷೆ "ಅಮೃತ್ ಕಲ್ ವಿಷನ್ 2047" ಅನ್ನು ಪ್ರಧಾನಮಂತ್ರಿ ಮೋದಿ ಅನಾವರಣಗೊಳಿಸಿದರು. ಈ ನೀಲನಕ್ಷೆಯಲ್ಲಿ ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸಲು ಹಾಗೂ ಬಂದರುಗಳಲ್ಲಿ ಸೇವೆಗಳನ್ನು ಹೆಚ್ಚಿಸುವುದು ಸೇರಿದಂತೆ ಅಂತಾರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸಲು ಹಲವಾರು ಕಾರ್ಯತಂತ್ರದ ಕ್ರಮಗಳು ಇವೆ.
ಇವುಗಳ ಜೊತೆಗೆ 18 ಸಾವಿರ ಕೋಟಿ ವೆಚ್ಚದ 21 ಬಂದರು ಯೋಜನೆಗಳನ್ನು ರಿಮೋಟ್ ಮೂಲಕ ಪ್ರಧಾನಿ ಮೋದಿ ಉದ್ಘಾಟಿಸಿದರು. ಗುಜರಾತ್ನ ದೀನ ದಯಾಳ್ ಬಂದರು ಪ್ರಾಧಿಕಾರದಲ್ಲಿ 4,500 ಕೋಟಿ ರೂಪಾಯಿ ವೆಚ್ಚದ ಟ್ಯೂನ ಟೆಕ್ರಾ ಆಲ್- ವೆದರ್ ಡೀಪ್ ಡ್ರಾಫ್ಟ್ ಟರ್ಮಿನಲ್ ಶಿಲಾನ್ಯಾಸ ಅನಾವರಣಗೊಳಿಸಿದರು. ಸುಮಾರು 23 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಿವಿಧ ಯೋಜನೆಗಳನ್ನು ಇಂದು ಪ್ರಧಾನಿ ಉದ್ಘಾಟಿಸಿದರು.
ಮುಂಬೈ ಪೋರ್ಟ್ ಟ್ರಸ್ಟ್‌ನ 150 ವರ್ಷಗಳ ನೆನಪಿಗಾಗಿ ಅಂಚೆ ಚೀಟಿಯನ್ನು ಸಹ ಅನಾವರಣಗೊಳಿಸಲಾಯಿತು. ಕಡಲ ವಲಯದಲ್ಲಿ ದೇಶೀಯ ಮತ್ತು ವಿದೇಶಿ ಹೂಡಿಕೆಗಾಗಿ 7 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ 300ಕ್ಕೂ ಹೆಚ್ಚು ಎಂಒಯುಗಳಿಗೆ ಸಹಿ ಹಾಕಲಾಯಿತು.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮೂರನೇ ಜಾಗತಿಕ ಸಾಗರ ಶೃಂಗಸಭೆಯಲ್ಲಿ ಮಾತನಾಡಿದ್ದು, ರೈಲು, ಸಮುದ್ರ ಮತ್ತು ಜಲಮಾರ್ಗಗಳನ್ನು ಸಂಯೋಜಿಸುವ ಮಲ್ಟಿಮೋಡಲ್ ಸಂಪರ್ಕವನ್ನು ಅಭಿವೃದ್ಧಿಪಡಿಸಲು ನಾವು ಗಮನಹರಿಸಿದ್ದೇವೆ. ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಯಲ್ಲಿ ಲಾಜಿಸ್ಟಿಕ್ಸ್ ದಕ್ಷತೆ ಮತ್ತು ಸಂಪರ್ಕವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ : ಮಧ್ಯಪ್ರದೇಶದಲ್ಲೂ 'ಕೈ' ಗ್ಯಾರಂಟಿ ಮಂತ್ರ: ಒಬಿಸಿಗಳಿಗೆ ಶೇ.27 ಮೀಸಲಾತಿ, ₹ 25 ಲಕ್ಷ ಆರೋಗ್ಯ ವಿಮೆ, ಮಹಿಳೆಯರಿಗೆ ಮಾಸಿಕ1500 ರೂ ನೆರವು!