ETV Bharat / bharat

ಭಾರತದಲ್ಲಿ ಕೊರೊನಾಗೆ 3 ಲಕ್ಷ ಜನರು ಬಲಿ; ವಿಶ್ವದಲ್ಲಿ ಮೂರನೇ ಅತಿ ಹೆಚ್ಚು ಸಾವು - India virus death toll

ಕಳೆದ 24 ಗಂಟೆಗಳಲ್ಲಿ 4,454 ಕೊರೊನಾ ಸೋಂಕಿತರು​ ಸಾವನ್ನಪ್ಪಿದ್ದು, ಅಲ್ಲಿಗೆ ಭಾರತದಲ್ಲಿ ಒಟ್ಟು 3,03,720 ಜನರು ಶತಮಾನದ ಭೀಕರ ಸಾಂಕ್ರಾಮಿಕ ರೋಗಕ್ಕೆ ಬಲಿಯಾದಂತಾಗಿದೆ. ಇಂದು 2,22,315 ಜನರಿಗೆ ಹೊಸದಾಗಿ ಸೋಂಕು ತಗುಲಿದೆ.

india-virus-death-toll-passes-300-000-3rd-highest-in-world
ಭಾರತದಲ್ಲಿ ಕೊರೊನಾಗೆ 3 ಲಕ್ಷ ಜನ ಬಲಿ; ವಿಶ್ವದಲ್ಲಿ ಮೂರನೇ ಅತಿ ಹೆಚ್ಚು
author img

By

Published : May 25, 2021, 12:33 AM IST

ನವದೆಹಲಿ: ಭಾರತವು ಸೋಮವಾರ ಮತ್ತೊಂದು ವಿಷಾದದ ಮೈಲಿಗಲ್ಲನ್ನು ದಾಟಿದೆ. ದೇಶದಲ್ಲಿ 3 ಲಕ್ಷಕ್ಕೂ ಅಧಿಕ ಜನ ಕೋವಿಡ್​ಗೆ ಜೀವ ಕೊಟ್ಟಿದ್ದಾರೆ. ದೊಡ್ಡ ನಗರಗಳಲ್ಲಿ ಸೋಂಕಿನ ವಿನಾಶಕಾರಿ ಪರಿಣಾಮವು ತಗ್ಗುತ್ತಿದೆ ಎಂದುಕೊಳ್ಳುವಷ್ಟರಲ್ಲಿ, ಮಹಾಮಾರಿ ಗ್ರಾಮೀಣ ಭಾರತಕ್ಕೆ ವಿನಾಶದ ಅಲೆಯನ್ನೇ ತಂದೊಡ್ಡಿದೆ.

ಯು.ಎಸ್ ಮತ್ತು ಬ್ರೆಜಿಲ್ ನಂತರ ಭಾರತದ ಸಾವಿನ ಸಂಖ್ಯೆ ವಿಶ್ವದಲ್ಲೇ ಮೂರನೇ ಅತಿ ಹೆಚ್ಚು ಎಂದು ವರದಿಯಾಗಿದೆ. ಇದು ಜಾಗತಿಕವಾಗಿ ಸಂಭವಿಸಿದ ಸುಮಾರು 34.7 ಮಿಲಿಯನ್ ಕೊರೊನಾ ವೈರಸ್​ ಸಾವಿನ ಪೈಕಿ ಶೇ 8.6 ನಷ್ಟಿದೆ. ಆದರೂ ವಾಸ್ತವದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು ಎಂದು ಆತಂಕ ವ್ಯಕ್ತವಾಗಿದೆ.

ಕಳೆದ 24 ಗಂಟೆಗಳಲ್ಲಿ 4,454 ಕೊರೊನಾ ವೈರಸ್​ ಸಾವುಗಳು ಸಂಭವಿಸಿದ್ದು, ಅಲ್ಲಿಗೆ ಭಾರತದಲ್ಲಿ ಒಟ್ಟು 3,03,720 ಜನರು ಶತಮಾನದ ಭೀಕರ ಸಾಂಕ್ರಾಮಿಕ ರೋಗಕ್ಕೆ ಬಲಿಯಾದಂತಾಗಿದೆ. ಇಂದು 2,22,315 ಜನರಿಗೆ ಹೊಸದಾಗಿ ಸೋಂಕು ತಗುಲಿದೆ.

ಭಾರತದಲ್ಲಿ ಮೊದಲ ಬಾರಿಗೆ ತಿಳಿದಿರುವ COVID-19 ಸಾವು ಮಾರ್ಚ್ 12,2020 ರಂದು ದಕ್ಷಿಣ ರಾಜ್ಯವಾದ ಕರ್ನಾಟಕದಲ್ಲಿ ಸಂಭವಿಸಿತು. ನಂತರದ ಏಳು ತಿಂಗಳುಗಳಲ್ಲಿ 1 ಲಕ್ಷ ಜನ ಸಾವಿಗೀಡಾದರು. ಏಪ್ರಿಲ್ ಅಂತ್ಯದ ವೇಳೆಗೆ ಸಾವಿನ ಸಂಖ್ಯೆ 2 ಲಕ್ಷದಷ್ಟಾಗಿತ್ತು. ಆದರೆ ಇದರ ಮುಂದಿನ ಕೇವಲ 27 ದಿನಗಳಲ್ಲಿ ಮತ್ತೆ 1 ಲಕ್ಷ ಜನ ಕೊರೊನಾ ವೈರಸ್​ನಿಂದಾಗಿ ಪ್ರಾಣ ಬಿಟ್ಟಿದ್ದಾರೆ.

ಆದರೂ ಕಳೆದ ಕೆಲವು ವಾರಗಳಲ್ಲಿ ಸರಾಸರಿ ದೈನಂದಿನ ಸಾವು ಮತ್ತು ಹೊಸ ಪ್ರಕರಣಗಳು ಸ್ವಲ್ಪ ಕಡಿಮೆಯಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.