ಹೈದರಾಬಾದ್ (ತೆಲಂಗಾಣ): 2022ರ ಜನವರಿ ಅಂತ್ಯದ ವೇಳೆಗೆ ಭಾರತವು ಕೋವಿಡ್ -19 ಪ್ರಕರಣಗಳಲ್ಲಿ ಉಲ್ಬಣ ಕಾಣಲಿದೆ ಎಂದು ಹೈದರಾಬಾದ್‌ನ ಕೃಷ್ಣ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಕಿಮ್ಸ್) ನಿರ್ದೇಶಕ ಡಾ. ಸಂಬಿತ್ ಸಾಹು ಹೇಳಿದ್ದಾರೆ.
ನಾವು ಪ್ರಪಂಚಕ್ಕಿಂತ ಭಿನ್ನವಾಗಿಲ್ಲ. ಜಗತ್ತು ಎದುರಿಸುತ್ತಿರುವುದನ್ನು ನಾವು ಎದುರಿಸುತ್ತೇವೆ. ಅದರಂತೆ ಜನವರಿ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ ಕೊರೊನಾ ಉಲ್ಬಣಿಸಲಿದೆ. ಆದರೆ, ಎರಡನೇ ಅಲೆಯಂತೆ ತೀವ್ರ ಅನಾರೋಗ್ಯದಿಂದ ಬಳಲುವವರ ಸಂಖ್ಯೆ ಹೆಚ್ಚಿರುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಸಂಬಿತ್ ಸಾಹು ತಿಳಿಸಿದರು.
ಇದನ್ನೂ ಓದಿ: ದೇಶದಲ್ಲಿ ಒಟ್ಟು 436 ಒಮಿಕ್ರಾನ್ ಕೇಸ್ : ವಿಶ್ಲೇಷಿತ ಸೋಂಕಿತರಲ್ಲಿ ಶೇ.91 ಮಂದಿಗೆ ಸಂಪೂರ್ಣ ಲಸಿಕೆ
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 7,189 ಮಂದಿ ಹೊಸ ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, 387 ಮಂದಿ ಬಲಿಯಾಗಿದ್ದಾರೆ. ದೇಶದ ಒಟ್ಟು ಸೋಂಕಿತರ ಸಂಖ್ಯೆ 3,47,79,815ಕ್ಕೆ ಹಾಗೂ ಮೃತರ ಸಂಖ್ಯೆ 4,79,520ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ ಭಾರತದಲ್ಲಿ ಹೊಸ ರೂಪಾಂತರಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 400ರ ಗಡಿ ದಾಟಿದ್ದು, ಮೂರನೇ ಅಲೆ ಆತಂಕ್ಕೆ ಕಾರಣವಾಗಿದೆ.