ನವದೆಹಲಿ: ಪಶ್ಚಿಮ ಏಷ್ಯಾದ ಸಂಘರ್ಷಗಳಿಂದ ಹೊಸ ಹೊಸ ಸವಾಲುಗಳು ಹೊರಹೊಮ್ಮುತ್ತಿವೆ. ಈ ಹಿನ್ನೆಲೆಯಲ್ಲಿ ಜಾಗತಿಕ ಒಳಿತಿಗಾಗಿ ಜಾಗತಿಕ ದಕ್ಷಿಣದ ದೇಶಗಳು ಒಗ್ಗಟ್ಟಿನ ಮಂತ್ರ ಜಪಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಶುಕ್ರವಾರ ಭಾರತ ಆಯೋಜಿಸಿದ್ದ ವರ್ಚುಯಲ್ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯ ಎರಡನೇ ಆವೃತ್ತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
-
PM Narendra Modi inaugurates Global South Centre of Excellence
— ANI Digital (@ani_digital) November 17, 2023 " class="align-text-top noRightClick twitterSection" data="
Read @ANI Story | https://t.co/dFF0D2DVwM#PMModi #GlobalSouthCentreofExcellence #VoiceofGlobalSouthSummit pic.twitter.com/04fbcU2Hcv
">PM Narendra Modi inaugurates Global South Centre of Excellence
— ANI Digital (@ani_digital) November 17, 2023
Read @ANI Story | https://t.co/dFF0D2DVwM#PMModi #GlobalSouthCentreofExcellence #VoiceofGlobalSouthSummit pic.twitter.com/04fbcU2HcvPM Narendra Modi inaugurates Global South Centre of Excellence
— ANI Digital (@ani_digital) November 17, 2023
Read @ANI Story | https://t.co/dFF0D2DVwM#PMModi #GlobalSouthCentreofExcellence #VoiceofGlobalSouthSummit pic.twitter.com/04fbcU2Hcv
ಹಮಾಸ್ ಮತ್ತು ಇಸ್ರೇಲ್ ಸಂಘರ್ಷದಲ್ಲಿ ಭಾರತದ ನಿಲುವು ಪುನರುಚ್ಚರಿಸಿದ ಪ್ರಧಾನಿ ಮೋದಿ, ಈ ಸಂಘರ್ಷದಿಂದ ಉದ್ಭವಿಸುವ ಪರಿಸ್ಥಿತಿ ನಿಭಾಯಿಸಲು ಭಾರತ, ಸಂಯಮದಿಂದ ಮಾತುಕತೆ ನಡೆಸಲು ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡಿದೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆದ ಅನಾಗರಿಕ ಭಯೋತ್ಪಾದಕ ದಾಳಿಯನ್ನು ಭಾರತ ಒಪ್ಪುವುದಿಲ್ಲ. ಆದರೆ, ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ನಾಗರಿಕರ ಸಾವನ್ನು ಭಾರತ ಬಲವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದರು.
ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಘಟನೆಗಳಿಂದ ಹೊಸ ಹೊಸ ಸವಾಲುಗಳು ಹೊರಹೊಮ್ಮುತ್ತಿರುವುದನ್ನು ನಾವೆಲ್ಲರೂ ಇತ್ತೀಚೆಗೆ ಗಮನಿಸುತ್ತಿದ್ದೇವೆ. ಭಾರತ ಇದರಲ್ಲಿ ಸಂಯಮವನ್ನೂ ಅನುಸರಿಸಿದೆ. ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡಿದ್ದು, ಸಂಘರ್ಷದಲ್ಲಿ ಮಡಿದ ನಾಗರಿಕರ ಸಾವನ್ನು ಬಲವಾಗಿ ಖಂಡಿಸುತ್ತದೆ ಎಂದರು.
ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ, ನಾವು ಪ್ಯಾಲೆಸ್ಟೈನ್ ಜನರಿಗೆ ಮಾನವೀಯ ನೆರವನ್ನು ಸಹ ಕಳುಹಿಸಿದ್ದೇವೆ. ಜಾಗತಿಕ ದಕ್ಷಿಣದ ದೇಶಗಳು ಹೆಚ್ಚಿನ ಜಾಗತಿಕ ಒಳಿತಿಗಾಗಿ ಒಂದಾಗಬೇಕಾದ ಸಮಯ ಬಂದಿದೆ ಎಂದು ಅವರು ಇದೇ ವೇಳೆ ಹೇಳಿದರು.
ವಾಯ್ಸ್ ಆಫ್ ಗ್ಲೋಬಲ್ ಸೌತ್ 21ನೇ ಶತಮಾನದ ಬದಲಾಗುತ್ತಿರುವ ಜಗತ್ತನ್ನು ಪ್ರತಿಬಿಂಬಿಸುವ ಅತ್ಯಂತ ವಿಶಿಷ್ಟವಾದ ವೇದಿಕೆಯಾಗಿದೆ ಎಂದ ಪ್ರಧಾನಿ ಮೋದಿ, ಸಮಾಲೋಚನೆ, ಸಂವಹನ, ಸಹಕಾರ, ಸೃಜನಶೀಲತೆ, ಸಾಮರ್ಥ್ಯ ವರ್ಧನೆ ಈ ಚೌಕಟ್ಟಿನಡಿ ನಾವು ಸಹಕಾರಕ್ಕೆ ಸದಾ ಸಿದ್ಧ ಎಂದು ಹೇಳಿದರು.
ಜಾಗತಿಕ ಬೆಳವಣಿಗೆಗಳಿಂದ ಎದುರಾಗುವ ಸವಾಲುಗಳನ್ನು ಚರ್ಚಿಸಲು ಮತ್ತು ವರ್ಚುಯಲ್ G-20 ಶೃಂಗಸಭೆಯ ಮುಂದೆ ಹೆಚ್ಚು ಅಂತರ್ಗತ ವಿಶ್ವ ಕ್ರಮಕ್ಕಾಗಿ ಆವೇಗವನ್ನು ಉಳಿಸಿಕೊಳ್ಳಲು ಭಾರತವು ಎರಡನೇ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯನ್ನು ಆಯೋಜಿಸುತ್ತಿದೆ.
ಇದನ್ನೂ ಓದಿ: ಅಲ್-ಶಿಫಾದಲ್ಲಿ ತಪಾಸಣೆ ಮುಂದುವರಿಸಿದ ಇಸ್ರೇಲ್ ಸೇನೆ; ಇತರ ಆಸ್ಪತ್ರೆಗಳಿಗೂ ವಿಸ್ತರಿಸಿದ ಕಾರ್ಯಾಚರಣೆ