ನವದೆಹಲಿ: ಭಾರತ ಮತ್ತು ಸೌದಿ ಅರೇಬಿಯಾದ ಸೇನಾ ಮುಖ್ಯಸ್ಥರು ಮಂಗಳವಾರ ಸಭೆ ನಡೆಸಿದ್ದಾರೆ. ಈ ಸಭೆಯ ಫೋಟೋ ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಸಮೀಕರಣಗಳ ಪ್ರತಿಬಿಂಬದಂತೆ ಕಾಣುತ್ತಿದೆ.
ಡಿಸೆಂಬರ್ 16, 1971ರ ಛಾಯಾಚಿತ್ರದಲ್ಲಿ ಕುಳಿತಿರುವ ಲೆಫ್ಟಿನೆಂಟ್ ಜನರಲ್ ಎಎಕೆ ನಿಯಾಜಿ ಪೂರ್ವ ಪಾಕಿಸ್ತಾನ (ಈಗ ಬಾಂಗ್ಲಾದೇಶ) ಸೇನೆಯ ಕಮಾಂಡರ್, ಭಾರತದ ಪೂರ್ವ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರ ಮುಂದೆ ತನ್ನ ಪಡೆಗಳು ಶರಣಾಗತಿಯಾಗುವುದಾಗಿ ಸಹಿ ಹಾಕಿದ್ದಾರೆ. ಈ ಪೋಟೋದ ಮುಂದೆ ಎರಡು ದೇಶದ ಸೇನಾ ಮುಖ್ಯಸ್ಥರಾದ ಜನರಲ್ ಮನೋಜ್ ಮುಕುಂದ್ ನರವಣೆ ಮತ್ತು ಅವರ ಸೌದಿ ಸಹವರ್ತಿ ಲೆಫ್ಟಿನೆಂಟ್ ಜನರಲ್ ಫಹದ್ ಬಿನ್ ಅಬ್ದುಲ್ಲಾ ಮೊಹಮ್ಮದ್ ಅಲ್-ಮುತೈರ್ ಸೇನಾ ಒಪ್ಪಂದ ಮಾಡಿಕೊಂಡಿದ್ದಾರೆ.
2020 ರ ಡಿಸೆಂಬರ್‌ನಲ್ಲಿ ಜನರಲ್ ನರವಣೆ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದು, ಇದು ಅವರ ಮೊದಲ ಭೇಟಿಯಾಗಿತ್ತು. ಭಾರತ ಮತ್ತು ಸೌದಿ ಅರೇಬಿಯಾದ ಬಾಂಧವ್ಯ ಗಟ್ಟಿಗೊಳಿಸುವ ಉದ್ದೇಶದಿಂದ ಇಬ್ಬರು ಸೇನಾ ಮುಖ್ಯಸ್ಥರು ಚರ್ಚೆ ನಡೆಸಿದ್ದು, ಭಾರತೀಯ ಸೇನಾ ತುಕಡಿಯು ಇನ್ನೂ ಕೆಲವೇ ತಿಂಗಳುಗಳಲ್ಲಿ ಸೌದಿ ಅರೇಬಿಯಾಕ್ಕೆ ಹೊಗಲಿದೆ. ಅಲ್ಲಿ ಎರಡು ದೇಶದ ಸೇನೆಗಳು ಸೇನಾಭ್ಯಾಸ ನಡೆಸಲಿವೆ.
2021ರ ಆಗಸ್ಟ್‌ನಲ್ಲಿ ಕಿಂಗ್‌ಡಮ್‌ನ ಪೂರ್ವ ಕರಾವಳಿಯಲ್ಲಿರುವ ಜುಬೈಲ್‌ನಲ್ಲಿ ಎರಡು ರಾಷ್ಟ್ರಗಳ ನೌಕಾಪಡೆಗಳ ನಡುವೆ ಮೊದಲ ನೌಕಾ ದ್ವಿಪಕ್ಷೀಯ ವ್ಯಾಯಾಮ "ಅಲ್ ಮೊಹೆದ್-ಅಲ್ ಹಿಂದಿ" ಅನ್ನು ನಡೆಸಲಾಗಿತ್ತು.
ಇದನ್ನು ಓದಿ: