ETV Bharat / bharat

RECAI ಸೂಚ್ಯಂಕದಲ್ಲಿ 3ನೇ ಸ್ಥಾನ ಉಳಿಸಿಕೊಂಡ ಭಾರತ : Ernst & Young ವರದಿ - ನವೀಕರಿಸಬಹುದಾದ ಇಂಧನ ಹೂಡಿಕೆ ಆಕರ್ಷಕ ಸೂಚ್ಯಂಕದಲ್ಲಿ ಭಾರತದ ಸ್ಥಾನ

ಭಾರತದ ಅಭಿವೃದ್ಧಿ ಹೊಂದುತ್ತಿರುವ ನವೀಕರಿಸಬಹುದಾದ ಇಂಧನ ಮಾರುಕಟ್ಟೆ ಪರಿಸ್ಥಿತಿಗಳು, ಅಂತರ್ಗತ ನೀತಿ ನಿರ್ಧಾರಗಳು, ಹೂಡಿಕೆ ಮತ್ತು ತಂತ್ರಜ್ಞಾನದ ಸುಧಾರಣೆಗಳು ಸ್ವಾವಲಂಬಿ ಪೂರೈಕೆ ಸರಪಳಿಗಳ ಮೇಲೆ ಕೇಂದ್ರೀಕರಿಸುವುದು ಶುದ್ಧ ಶಕ್ತಿಯ ಪರಿವರ್ತನೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ..

index
RECAI ಸೂಚ್ಯಂಕ
author img

By

Published : Oct 13, 2021, 7:57 PM IST

ನವದೆಹಲಿ : ಕನ್ಸಲ್ಟೆನ್ಸಿ ಸಂಸ್ಥೆ ಇವೈ(Ernst & Young) ಬಿಡುಗಡೆ ಮಾಡಿದ 'ನವೀಕರಿಸಬಹುದಾದ ಇಂಧನ ದೇಶದ ಆಕರ್ಷಣೆ ಸೂಚ್ಯಂಕ'(RECAI)ದಲ್ಲಿ ಭಾರತ ತನ್ನ 3ನೇ ಸ್ಥಾನ ಉಳಿಸಿಕೊಂಡಿದೆ.

ಇವೈ ಬಿಡುಗಡೆ ಮಾಡಿದ ನವೀಕರಿಸಬಹುದಾದ ಇಂಧನ ಹೂಡಿಕೆ ಮತ್ತು ನಿಯೋಜನೆ ಅವಕಾಶಗಳ ಆಕರ್ಷಣೆಯ ವಿಶ್ವದ ಅಗ್ರ 40 ಮಾರುಕಟ್ಟೆಗಳ (ರಾಷ್ಟ್ರಗಳು) ಪೈಕಿ ಸೂಚ್ಯಂಕದಲ್ಲಿ ಭಾರತ 3ನೇ ಸ್ಥಾನದಲ್ಲಿದೆ ಎಂದು EY ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪರಿಸರ, ಸಾಮಾಜಿಕ ಮತ್ತು ಆಡಳಿತದ (ಇಎಸ್‌ಜಿ) ಕ್ರಮಗಳು ಕಂಪನಿಗಳು ಮತ್ತು ಹೂಡಿಕೆದಾರರ ಕಾರ್ಯಸೂಚಿಯ ಮೇಲ್ಭಾಗಕ್ಕೆ ಏರಿದಾಗ, RECAI(ನವೀಕರಿಸಬಹುದಾದ ಇಂಧನ ಹೂಡಿಕೆ ಆಕರ್ಷಕ ಸೂಚ್ಯಂಕ) ಸಹ ಕಾರ್ಪೊರೇಟ್ ವಿದ್ಯುತ್ ಖರೀದಿ ಒಪ್ಪಂದಗಳು (ಪಿಪಿಎ) ಸ್ವಚ್ಛ ಶಕ್ತಿಯ ಬೆಳವಣಿಗೆಯ ಪ್ರಮುಖ ಚಾಲಕರಾಗಿ ಹೊರ ಹೊಮ್ಮುತ್ತಿದೆ ಎಂದು ತೋರಿಸುತ್ತಿದೆ.

RECAIಯ ಈ ಆವೃತ್ತಿಯಲ್ಲಿ ಪರಿಚಯಿಸಲಾದ ಹೊಸ PPA ಸೂಚ್ಯಂಕ-ನವೀಕರಿಸಬಹುದಾದ ವಿದ್ಯುತ್ ಸಂಗ್ರಹಣೆಯ ಆಕರ್ಷಣೆಯ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ರಾಷ್ಟ್ರದ ಕಾರ್ಪೊರೇಟ್ PPA(power purchase agreements) ಮಾರುಕಟ್ಟೆಯ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿದೆ. ಅಗ್ರ 30 ಪಿಪಿಎ ಮಾರುಕಟ್ಟೆಗಳಲ್ಲಿ ಭಾರತ 6ನೇ ಸ್ಥಾನದಲ್ಲಿದೆ.

ಭಾರತದ ಅಭಿವೃದ್ಧಿ ಹೊಂದುತ್ತಿರುವ ನವೀಕರಿಸಬಹುದಾದ ಇಂಧನ ಮಾರುಕಟ್ಟೆ ಪರಿಸ್ಥಿತಿಗಳು, ಅಂತರ್ಗತ ನೀತಿ ನಿರ್ಧಾರಗಳು, ಹೂಡಿಕೆ ಮತ್ತು ತಂತ್ರಜ್ಞಾನದ ಸುಧಾರಣೆಗಳು ಸ್ವಾವಲಂಬಿ ಪೂರೈಕೆ ಸರಪಳಿಗಳ ಮೇಲೆ ಕೇಂದ್ರೀಕರಿಸುವುದು ಶುದ್ಧ ಶಕ್ತಿಯ ಪರಿವರ್ತನೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜಾಗತಿಕ ಮಟ್ಟದಲ್ಲಿ ಶಕ್ತಿ ಪ್ರಸರಣ ಮೂಲಸೌಕರ್ಯವನ್ನು ಅಪ್‌ಗ್ರೇಡ್ ಮಾಡಲು ಮತ್ತು ವಿಸ್ತರಿಸಲು ಅಗತ್ಯವಿರುವ ಹೂಡಿಕೆಯು ಪ್ರಮುಖ ಸವಾಲಾಗಿರುತ್ತದೆ ಎಂದು ಇವೈ ಹೇಳಿದೆ. ಇವೈ ವರದಿಯ ಪ್ರಕಾರ, ಅಮೆರಿಕ ಚೀನಾ ಮತ್ತು ಭಾರತ ಮೊದಲ ಮೂರು ಶ್ರೇಯಾಂಕಗಳನ್ನು ಉಳಿಸಿಕೊಂಡಿವೆ ಮತ್ತು ಇಂಡೋನೇಷ್ಯಾ RECAIಗೆ ಹೊಸ ಸೇರ್ಪಡೆಗೊಂಡಿದೆ.

ನವೀಕರಿಸಬಹುದಾದ ಇಂಧನ ಹೂಡಿಕೆ ಆಕರ್ಷಕ ಸೂಚ್ಯಂಕದಲ್ಲಿ ಯುಎಸ್ ತನ್ನ ಉನ್ನತ ಸ್ಥಾನದಲ್ಲಿ ಮುಂದುವರಿದಿದೆ ಮತ್ತು ಯುಎಸ್​ ಅಧ್ಯಕ್ಷ ಜೋ ಬೈಡನ್ ಅವರ ಅಧಿಕಾರಾವಧಿಯಲ್ಲಿ ಹೊಸ ಉಪಕ್ರಮಗಳನ್ನು ಘೋಷಿಸಲಾಗುತ್ತಿರುವುದರಿಂದ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.

ಇನ್ನು, ಚೀನಾ ಮತ್ತು ಭಾರತ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ಬದಲಾಗದೆ ಉಳಿದಿವೆ. ಯಾಕೆಂದರೆ, ಈ ಮಾರುಕಟ್ಟೆಗಳಲ್ಲಿ ಅನುಕೂಲಕರ ನಿಯಂತ್ರಣ ಮತ್ತು ಹೂಡಿಕೆ ಪರಿಸ್ಥಿತಿಗಳು ಮುಂದುವರಿದಿದೆ ಎಂದು ಅದು ಹೇಳಿದೆ. ಉಳಿದಂತೆ ಫ್ರಾನ್ಸ್ (ನಾಲ್ಕನೇ ಸ್ಥಾನ,) ಮತ್ತು ಯುಕೆ(ಐದನೇ ಸ್ಥಾನ), ಜರ್ಮನಿ ಆರನೇ ಸ್ಥಾನದಲ್ಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.