ನವದೆಹಲಿ: ಭಾರತದಲ್ಲಿ ಕಳೆದೆರಡು ತಿಂಗಳಿಂದ ಕೋವಿಡ್ ಕೇಸ್ಗಳು ತಗ್ಗುತ್ತಿವೆಯಾದರೂ ಮೃತರ ಸಂಖ್ಯೆಯಲ್ಲಿ ಇಳಿಕೆ ಕಂಡು ಬರದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ನಿನ್ನೆ ಪತ್ತೆಯಾದದ್ದು 9,119 ಹೊಸ ಸೋಂಕಿತರಾದರೂ ಸಾವನ್ನಪ್ಪಿದ್ದು ಮಾತ್ರ ಬರೋಬ್ಬರಿ 396 ಮಂದಿ.
ದೇಶದಲ್ಲಿನ ಒಟ್ಟು ಕೋವಿಡ್ ಕೇಸ್ಗಳ ಸಂಖ್ಯೆ 3,45,35,763 ಹಾಗೂ ಮೃತರ ಸಂಖ್ಯೆ 4,66,584ಕ್ಕೆ ಏರಿಕೆಯಾಗಿದೆ. ಗುಣಮುಖರ ಪ್ರಮಾಣ ಶೇ.96.33ಕ್ಕೆ ಏರಿಕೆಯಾಗಿದ್ದು, 539 ದಿನಗಳ ಬಳಿಕ ಸಕ್ರಿಯ ಪ್ರಕರಣಗಳ ಸಂಖ್ಯೆ 1,09,940ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಶೇ.54 ರಷ್ಟು ಜನರಿಗೆ ದೇಶದಲ್ಲಿ ಕ್ರಿಪ್ಟೋಕರೆನ್ಸಿ ಕಾನೂನುಬದ್ಧಗೊಳಿಸುವುದು ಇಷ್ಟವಿಲ್ಲವಂತೆ!
119 ಕೋಟಿ ಡೋಸ್ ವ್ಯಾಕ್ಸಿನೇಷನ್
ದೇಶಾದ್ಯಂತ ಜನವರಿ 16ರಿಂದ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಅಕ್ಟೋಬರ್ 21ಕ್ಕೆ ನೂರು ಕೋಟಿ ಡೋಸ್ ಲಸಿಕೆ ವಿತರಿಸಿ ಭಾರತ ಇತಿಹಾಸ ಬರೆದಿತ್ತು. ಇಲ್ಲಿಯವರೆಗೂ 119 ಕೋಟಿಗೂ ಅಧಿಕ ಡೋಸ್ ವ್ಯಾಕ್ಸಿನ್ ಅನ್ನು ಜನರು ಪಡೆದಿದ್ದಾರೆ.