ನವದೆಹಲಿ: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 8,865 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 287 ದಿನಗಳ ಬಳಿಕ ಇಷ್ಟು ಕಡಿಮೆ ಕೇಸ್ಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Ministry of Health and Family Welfare) ಮಾಹಿತಿ ನೀಡಿದೆ.
ಇನ್ನು ನಿನ್ನೆ 197 ಮಂದಿ ಸೋಂಕಿಗೆ ಬಲಿಯಾಗಿದ್ದು, ಕೋವಿಡ್ ಮೃತರ ಸಂಖ್ಯೆ 4,63,852 ಹೆಚ್ಚಳವಾಗಿದೆ. ಇಲ್ಲಿಯವರೆಗೆ ಒಟ್ಟು 3,44,56,401 ಜನರಿಗೆ ವೈರಸ್ ಅಂಟಿದ್ದು, ಇವರಲ್ಲಿ ಶೇ.98.27ರಷ್ಟು ಮಂದಿ ಗುಣಮುಖರಾಗಿ (India's covid recovery rate), ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 525 ದಿನಗಳ ಬಳಿಕ ಆ್ಯಕ್ಟಿವ್ ಕೇಸ್ ಪ್ರಮಾಣ ಶೇ.0.38 ಕ್ಕೆ ಇಳಿಕೆಯಾಗಿದ್ದು, ಪ್ರಸ್ತುತ 1,30,793 ಪ್ರಕರಣಗಳು ಸಕ್ರಿಯವಾಗಿವೆ.
ಇದನ್ನೂ ಓದಿ: Coronavirus - Shaped Cucumber: ಇದು ಕೊರೊನಾ ವೈರಸ್ ಅಲ್ಲ, ಸೌತೆಕಾಯಿ..!
ನಿನ್ನೆ ಪತ್ತೆಯಾದ 8,865 ಕೋವಿಡ್ ಸೋಂಕಿತರು ಮತ್ತು 197 ಮಂದಿ ಸಾವಿನ ಪೈಕಿ ಕೇರಳ ರಾಜ್ಯವೊಂದರಲ್ಲೇ 4,547 ಪ್ರಕರಣಗಳು ಹಾಗೂ 57 ಸಾವು ವರದಿಯಾಗಿದೆ.
112.97 ಕೋಟಿ ಡೋಸ್ ವ್ಯಾಕ್ಸಿನೇಷನ್ (India covid vaccination)
ದೇಶಾದ್ಯಂತ ಜನವರಿ 16ರಿಂದ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಈವರೆಗೆ 1,12,97,84,045 ಡೋಸ್ ವ್ಯಾಕ್ಸಿನ್ ನೀಡಲಾಗಿದೆ. ನಿನ್ನೆ ಒಂದೇ ದಿನ 59,75,469 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.