ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಏರಿಳಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 8,822 ಹೊಸ ಕೇಸ್‌ಗಳು ದಾಖಲಾಗಿದೆ. ನಿನ್ನೆಗೆ ಹೊಲಿಕೆ ಮಾಡಿದರೆ ಎರಡೂವರೆ ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಜಾಸ್ತಿ ಕಂಡು ಬಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 5,718 ಜನರು ಕೋವಿಡ್ನಿಂದ ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 4,26,67,088 ಜನರು ಕೋವಿಡ್ನಿಂದ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 53,637 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ ಕೋವಿಡ್ನಿಂದ 15 ಜನ ಸಾವನ್ನಪ್ಪಿದ್ದು, ಈವರೆಗೆ ಕೋವಿಡ್ ಸಾವಿನ ಸಂಖ್ಯೆ 5,24,792 ಇದೆ.
ಓದಿ: ಬೆಂಗಳೂರಿನ ಎರಡು ಶಾಲೆಗಳ 31 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಪತ್ತೆ
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಜೂ.14 ರವರೆಗೆ ಕೋವಿಡ್ಗಾಗಿ 85.58 ಕೋಟಿ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 4,40,278 ಮಾದರಿಗಳನ್ನು ಟೆಸ್ಟ್ ಮಾಡಲಾಗಿದೆ.
ಕರ್ನಾಟಕದಲ್ಲೂ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಬಿಬಿಎಂಪಿ ವ್ಯಾಪ್ತಿಯ ದಾಸರಹಳ್ಳಿ ವಲಯದ ಎರಡು ಶಾಲೆಗಳ 31 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತರಗತಿಗಳನ್ನು ಬಂದ್ ಮಾಡಿಸಿದ್ದಾರೆ. ಭಾರತದ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ನಲ್ಲಿ 195.5 ಕೋಟಿ ಮೀರಿ ಮುನ್ನಡೆಯುತ್ತಿದೆ.
ಇತರ ದೇಶಗಳಲ್ಲಿನ ಕೋವಿಡ್ ವರದಿ...
- ಸೋಮವಾರ ಅಮೆರಿಕದಲ್ಲಿ ಸುಮಾರು 50,000 ಪ್ರಕರಣಗಳು ಬೆಳಕಿಗೆ ಬಂದಿದ್ದು, 100 ಕ್ಕೂ ಹೆಚ್ಚು ಜನರು ಕೋವಿಡ್ಗೆ ಬಲಿಯಾಗಿದ್ದಾರೆ.
- ತೈವಾನ್‌ನಲ್ಲಿ 45,000 ಪ್ರಕರಣಗಳಿಗಿಂತ ಹೆಚ್ಚು ಕಂಡು ಬಂದಿದ್ದು, ಕೊರೊನಾದಿಂದ 100 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ.
- ಬ್ರೆಜಿಲ್‌ನಲ್ಲಿ 40,000ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಮತ್ತು 53 ಸಾವುಗಳು ಸಂಭವಿಸಿವೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
- ಜರ್ಮನಿಯಲ್ಲಿ ಒಂದೇ ದಿನದಲ್ಲಿ 38,000 ಕ್ಕೂ ಹೆಚ್ಚು ಕೋವಿಡ್‌ಗಳು ಸೋಂಕಿಗೆ ಒಳಗಾಗಿದ್ದು, 30 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.