ETV Bharat / bharat

India Covid Report: 538 ದಿನಗಳ ಬಳಿಕ ಭಾರತದಲ್ಲಿ ಅತಿ ಕಡಿಮೆ ಕೋವಿಡ್​ ಕೇಸ್ - ದೇಶದಲ್ಲಿ ಕೋವಿಡ್​ ಗುಣಮುಖರ ಪ್ರಮಾಣ

ಸತತ 45 ದಿನಗಳಿಂದ ದೇಶದಲ್ಲಿ ಪತ್ತೆಯಾಗುತ್ತಿರುವ ಹೊಸ ಕೇಸ್​ಗಳ ಸಂಖ್ಯೆ 20 ಸಾವಿರ ಗಡಿಯಿಂದ ಕೆಳಗಿದ್ದು. ನಿನ್ನೆ 8,488 ಮಂದಿ ಕೊರೊನಾ​ ಸೋಂಕಿತರು ಪತ್ತೆಯಾಗಿದ್ದಾರೆ.

India Covid Report
India Covid Report
author img

By

Published : Nov 22, 2021, 1:11 PM IST

ನವದೆಹಲಿ: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 8,488 ಮಂದಿ ಕೊರೊನಾ​ ಸೋಂಕಿತರು ಪತ್ತೆಯಾಗಿದ್ದು, 538 ದಿನಗಳ ಬಳಿಕ ಇಷ್ಟು ಕಡಿಮೆ ಕೇಸ್​ಗಳು ವರದಿಯಾಗಿವೆ. ಸತತ 45 ದಿನಗಳಿಂದ ದೇಶದಲ್ಲಿ ಪತ್ತೆಯಾಗುತ್ತಿರುವ ಹೊಸ ಕೇಸ್​ಗಳ ಸಂಖ್ಯೆ 20 ಸಾವಿರ ಗಡಿಯಿಂದ ಕೆಳಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Ministry of Health and Family Welfare) ಮಾಹಿತಿ ನೀಡಿದೆ.

ಇನ್ನು ನಿನ್ನೆ 249 ಮಂದಿ ಸೋಂಕಿಗೆ ಬಲಿಯಾಗಿದ್ದು, ಕೋವಿಡ್​ ಮೃತರ ಸಂಖ್ಯೆ 4,65,911 ಹೆಚ್ಚಳವಾಗಿದೆ. ಇಲ್ಲಿಯವರೆಗೆ ಒಟ್ಟು 3,45,18,901 ಜನರಿಗೆ ವೈರಸ್​​​ ಅಂಟಿದ್ದು, ಇವರಲ್ಲಿ ಶೇ.98.31ರಷ್ಟು ಮಂದಿ (3,39,34,547) ಗುಣಮುಖರಾಗಿ (India's covid recovery rate), ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. 534 ದಿನಗಳ ಬಳಿಕ ಆ್ಯಕ್ಟಿವ್​ ಕೇಸ್​ ಪ್ರಮಾಣ ಶೇ.0.34ಕ್ಕೆ ಇಳಿಕೆಯಾಗಿದ್ದು, ಪ್ರಸ್ತುತ 1,18,443 ಪ್ರಕರಣಗಳು ಸಕ್ರಿಯವಾಗಿವೆ.

ಇದನ್ನೂ ಓದಿ: ದಿನಕ್ಕೆ 70 ಬಾರಿ ವಾಂತಿ ಮಾಡುವ ವಿಚಿತ್ರ ಕಾಯಿಲೆ.. ಈ ಮಹಿಳೆ ಪರಿಸ್ಥಿತಿ ಅಯೋಮಯ!

ನಿನ್ನೆ ಪತ್ತೆಯಾದ 8,488 ಕೋವಿಡ್​ ಸೋಂಕಿತರು ಮತ್ತು 249 ಮಂದಿ ಸಾವಿನ ಪೈಕಿ ಕೇರಳ ರಾಜ್ಯವೊಂದರಲ್ಲೇ 5,080 ಪ್ರಕರಣಗಳು ಹಾಗೂ 40 ಸಾವು ವರದಿಯಾಗಿದೆ.

116.87 ಕೋಟಿ ಡೋಸ್​ ವ್ಯಾಕ್ಸಿನೇಷನ್​ (India covid vaccination)

ದೇಶಾದ್ಯಂತ ಜನವರಿ 16 ರಿಂದ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಈವರೆಗೆ 116.87 ಕೋಟಿಗೂ ಅಧಿಕ ಡೋಸ್​ ವ್ಯಾಕ್ಸಿನ್​ ನೀಡಲಾಗಿದೆ. ನಿನ್ನೆ ಒಂದೇ ದಿನ 33 ಲಕ್ಷಕ್ಕೂ ಅಧಿಕ ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.