ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೋವಿಡ್ ಸೋಂಕಿತ ಪ್ರಕರಣಗಳಲ್ಲಿ ಏರಿಕೆ ಕಂಡು ಬರಲು ಶುರುವಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ದಾಖಲೆಯ 8,329 ಹೊಸ ಕೇಸ್ಗಳು ದಾಖಲಾಗಿವೆ. ಇದರ ಜೊತೆಗೆ 10 ಜನರು ಡೆಡ್ಲಿ ವೈರಸ್ಗೆ ಪ್ರಾಣ ಕಳೆದುಕೊಂಡಿದ್ದಾರೆ.
-
#COVID19 | India reports 8,329 fresh cases, 4,216 recoveries, and 10 deaths in the last 24 hours.
— ANI (@ANI) June 11, 2022 " class="align-text-top noRightClick twitterSection" data="
Total active cases are 40,370 pic.twitter.com/svqgvbjtpx
">#COVID19 | India reports 8,329 fresh cases, 4,216 recoveries, and 10 deaths in the last 24 hours.
— ANI (@ANI) June 11, 2022
Total active cases are 40,370 pic.twitter.com/svqgvbjtpx#COVID19 | India reports 8,329 fresh cases, 4,216 recoveries, and 10 deaths in the last 24 hours.
— ANI (@ANI) June 11, 2022
Total active cases are 40,370 pic.twitter.com/svqgvbjtpx
ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 4,216 ಜನರು ಕೋವಿಡ್ನಿಂದ ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ದೇಶದಲ್ಲಿ 40,370 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲೇ 3,081 ಕೋವಿಡ್ ಪ್ರಕರಣ ದಾಖಲಾಗಿದ್ದು, ಮುಂಬೈನಲ್ಲೇ 1,956 ಕೇಸ್ ಕಂಡು ಬಂದಿವೆ. ನಿನ್ನೆ ಒಂದೇ ದಿನ ದೇಶಾದ್ಯಂತ 3,44,994 ಜನರನ್ನ ಪರೀಕ್ಷೆಗೊಳಪಡಿಸಲಾಗಿದೆ. ಕೇರಳದಲ್ಲೂ 1,301 ಪ್ರಕರಣ ಹೊಸದಾಗಿ ಕಂಡು ಬಂದಿವೆ.
ಇದನ್ನೂ ಓದಿ: ಮಧ್ಯರಾತ್ರಿ ಹೈಡ್ರಾಮಾ: ಮಹಾರಾಷ್ಟ್ರದಲ್ಲಿ ಗೆದ್ದು ಬಿಗಿದ ಬಿಜೆಪಿ, ಆಡಳಿತ ಪಕ್ಷಕ್ಕೆ ಬಿಗ್ ಶಾಕ್!
ಕರ್ನಾಟಕದಲ್ಲೂ ಕೋವಿಡ್ ಸೋಂಕಿತ ಪ್ರಕರಣ ಹೆಚ್ಚಾಗುತ್ತಿರುವ ಕಾರಣ, ಮಾಸ್ಕ್ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಹಾಕಿದೆ. ದೇಶದಲ್ಲಿ ಇಲ್ಲಿಯವರೆಗೆ 4,26,48,308 ಜನರು ಕೋವಿಡ್ನಿಂದ ಗುಣಮುಖರಾಗಿದ್ದು, 5,24,747 ಜನರು ಸಾವನ್ನಪ್ಪಿದ್ದಾರೆ.