ನವದೆಹಲಿ: ಏಪ್ರಿಲ್-ಮೇ ತಿಂಗಳಲ್ಲಿ ದಿನವೊಂದರಲ್ಲಿ ಲಕ್ಷ-ಲಕ್ಷ ಕೋವಿಡ್ ಸೋಂಕಿತರು ಪತ್ತೆಯಾಗುತ್ತಿದ್ದ ಭಾರತದಲ್ಲಿ 72 ದಿನಗಳ ಬಳಿಕ ಅತೀ ಕಡಿಮೆ ಅಂದರೆ 70,421 ಕೇಸ್ಗಳು ಭಾನುವಾರ ವರದಿಯಾಗಿದೆ. ಆದರೆ ದೈನಂದಿನ ಸಾವಿನ ಸಂಖ್ಯೆ ನಾಲ್ಕು ಸಾವಿರ ಗಡಿಯ ಆಸುಪಾಸೇ ಇದ್ದು, 24 ಗಂಟೆಗಳಲ್ಲಿ 3,921 ಮಂದಿ ಅಸು ನೀಗಿದ್ದಾರೆ.
10 ಲಕ್ಷ ಗಡಿಯಿಂದ ಕೆಳಗಿಳಿದ ಆ್ಯಕ್ಟಿವ್ ಕೇಸ್
ದೇಶದಲ್ಲಿ ಪತ್ತೆಯಾಗುತ್ತಿರುವ ಸೋಂಕಿತರಗಿಂತ ಗುಣಮುಖರಾಗುತ್ತಿರುವವರೇ ಹೆಚ್ಚಾಗುತ್ತಿದ್ದು, ಕಳೆದ ತಿಂಗಳು 40 ಲಕ್ಷ ಸನಿಹ ತಲುಪಿದ್ದ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 9,73,158ಕ್ಕೆ ಕುಸಿದಿದೆ. ನಿನ್ನೆ ಒಂದೇ ದಿನ 1,19,501 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಇಲ್ಲಿಯವರೆಗೆ ಒಟ್ಟು 2,81,62,947 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ 26 ಕೋಟಿ ಲಸಿಕೆ ಡೋಸ್ ಪೂರೈಕೆ : ಕೇಂದ್ರ
25.48 ಕೋಟಿ ಡೋಸ್ ವ್ಯಾಕ್ಸಿನೇಷನ್
ದೇಶಾದ್ಯಂತ ಜನವರಿ 16ರಿಂದ ಈವರೆಗೆ ಕೋವಿಡ್ ಲಸಿಕೆಯ 25,48,49,301 ಡೋಸ್ಗಳನ್ನು ಜನರಿಗೆ ನೀಡಲಾಗಿದೆ. ಇದರಲ್ಲಿ 20 ಕೋಟಿಗೂ ಅಧಿಕ ಮಂದಿ ಮೊದಲ ಡೋಸ್ ಮಾತ್ರ ಪಡೆದಿದ್ದು, ಸುಮಾರು 5 ಕೋಟಿ ಜನರಿಗೆ ಎರಡೂ ಡೋಸ್ಗಳನ್ನು ನೀಡಲಾಗಿದೆ.