ನವದೆಹಲಿ: ಕೊರೊನಾ ಎರಡನೇ ಅಲೆಯಲ್ಲಿ ಭಾರತದಲ್ಲಿ ದಿನನಿತ್ಯ ನಾಲ್ಕು ಲಕ್ಷದವರೆಗೂ ಕೋವಿಡ್ ಪ್ರಕರಣಗಳು ವರದಿಯಾಗುತ್ತಿತ್ತು. 81 ದಿನಗಳ ಬಳಿಕ 60 ಸಾವಿರ ಗಡಿಯಿಂದ ಹೊಸ ಸೋಂಕಿತರ ಸಂಖ್ಯೆ ಕೆಳಗಿಳಿದಿದ್ದು, ನಿನ್ನೆ ಅತಿ ಕಡಿಮೆ ಅಂದರೆ 58,419 ಕೇಸ್ಗಳು ಪತ್ತೆಯಾಗಿವೆ.
ಸಾವಿನ ಪ್ರಮಾಣವೂ ಕಡಿಮೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 1576 ಮಂದಿ ವೈರಸ್ಗೆ ಬಲಿಯಾಗಿದ್ದಾರೆ. ದೇಶದಲ್ಲೀಗ ಸೋಂಕಿತರ ಸಂಖ್ಯೆ 2,98,81,965 ಹಾಗೂ ಮೃತರ ಸಂಖ್ಯೆ 3,86,713ಕ್ಕೆ ಏರಿಕೆಯಾಗಿದೆ. ಆದರೆ ಒಟ್ಟು ಸೋಂಕಿತರ ಪೈಕಿ 2,87,66,009 ಮಂದಿ ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ.96.27 ಕ್ಕೆ ಹೆಚ್ಚಳವಾಗಿದೆ.
ಇದನ್ನೂ ಓದಿ: Karnataka Unlock 2.0: ಬಸ್ ಸಂಚಾರ ಸೇರಿ ಯಾವೆಲ್ಲಾ ಸೇವೆ ಲಭ್ಯ?
ಶನಿವಾರ ಒಂದೇ ದಿನದಲ್ಲಿ 87,619 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 7,29,243 ಕೊರೊನಾ ಕೇಸ್ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ದೆಹಲಿ, ಕರ್ನಾಟಕ, ಮಹಾರಾಷ್ಟ್ರ ಉತ್ತರ ಪ್ರದೇಶ ಸೇರಿಂತೆ ಅನೇಕ ರಾಜ್ಯಗಳು ಪಾಸಿಟಿವಿಟಿ ರೇಟ್ ಕಡಿಮೆಯಾದ ಹಿನ್ನೆಲೆ ಲಾಕ್ಡೌನ್ ನಿಯಮ ಸಡಿಲಗೊಳಿಸುತ್ತಾ ಬರುತ್ತಿದ್ದಾರೆ. ತೆಲಂಗಾಣದಲ್ಲಿ ಸಂಪೂರ್ಣವಾಗಿ ಲಾಕ್ಡೌನ್ ತೆರವುಗೊಳಿಸಲಾಗಿದೆ.
ಇದನ್ನೂ ಓದಿ: Unlock: ಸೋಂಕು ಇಳಿಮುಖ: ಲಾಕ್ಡೌನ್ ಸಂಪೂರ್ಣ ತೆರವು
27.66 ಕೋಟಿ ಡೋಸ್ ವ್ಯಾಕ್ಸಿನೇಷನ್
ಕೊರೊನಾ ಲಸಿಕಾಭಿಯಾನದಡಿ ದೇಶಾದ್ಯಂತ ಈವರೆಗೆ ಕೋವಿಡ್ ಲಸಿಕೆಯ 27,66,93,5726 ಡೋಸ್ಗಳನ್ನು ನೀಡಲಾಗಿದ್ದು, 22.52 ಮಂದಿ ಮೊದಲ ಡೋಸ್ ಹಾಗೂ 5.09 ಕೋಟಿ ಜನರು ಎರಡೂ ಡೋಸ್ಗಳನ್ನ ಪಡೆದುಕೊಂಡಿದ್ದಾರೆ.