ETV Bharat / bharat

ದೇಶದಲ್ಲಿ ಕೋವಿಡ್​ ಸಾವು-ನೋವು ಇಳಿಕೆ: ನಿನ್ನೆ 53 ಸಾವಿರ ಸೋಂಕಿತರು ಪತ್ತೆ, 1422 ಸಾವು - ಕೊರೊನಾ ಲಸಿಕೆ

ಭೀಕರ ಕೋವಿಡ್​ 2ನೇ ಅಲೆಗೆ ತುತ್ತಾಗಿದ್ದ ಭಾರತದಲ್ಲಿ ಸಾವು-ನೋವಿನಲ್ಲಿ ಇಳಿಕೆ ಕಂಡುಬಂದಿದ್ದು, ಭಾನುವಾರ 53,256 ಕೇಸ್​ಗಳು ಪತ್ತೆಯಾದ್ದರೆ, 1422 ಮಂದಿ ಮೃತಪಟ್ಟಿದ್ದಾರೆ.

Total number of corona cases, deaths, Vaccination in India
ದೇಶದ ಕೋವಿಡ್​ ಸಾವು-ನೋವಿನಲ್ಲಿ ಇಳಿಕೆ
author img

By

Published : Jun 21, 2021, 9:55 AM IST

Updated : Jun 21, 2021, 11:39 AM IST

ನವದೆಹಲಿ: ಕಳೆದ 39 ದಿನಗಳಿಂದ ದೈನಂದಿನ ಕೋವಿಡ್​ ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯೇ ಹೆಚ್ಚಾಗಿದೆ. ನಿನ್ನೆ 78,190 ಮಂದಿ ವೈರಸ್​ನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಹೊರಬಂದಿದ್ದು, 53,256 ಕೇಸ್​ಗಳು ಪತ್ತೆಯಾಗಿದೆ. 88 ದಿನಗಳ ಬಳಿಕ ದೇಶದಲ್ಲಿ ಅತಿ ಕಡಿಮೆ ಕೊರೊನಾ ಪ್ರಕರಣಗಳು ವರದಿಯಾಗಿದೆ.

ಇತ್ತ ಕೋವಿಡ್​ ಮರಣ ಪ್ರಮಾಣವೂ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 1422 ಜನರು ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲೀಗ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 2,99,35,22 ಹಾಗೂ ಮೃತರ ಸಂಖ್ಯೆ 3,88,135ಕ್ಕೆ ಏರಿಕೆಯಾಗಿದೆ.

ಆದರೆ ಒಟ್ಟು ಸೋಂಕಿತರ ಪೈಕಿ ಶೇ.96.36 ರಷ್ಟು ಅಂದರೆ 2,88,44,199 ಮಂದಿ ಗುಣಮುಖರಾಗಿದ್ದು, 7,02,887 ಕೇಸ್​ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: Covid-19 Vaccination: ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ 'ಉಚಿತ' ಕೋವಿಡ್​ ಲಸಿಕೆ

28 ಕೋಟಿ ಡೋಸ್​​ ವ್ಯಾಕ್ಸಿನೇಷನ್​​

ಕೊರೊನಾ ಲಸಿಕಾಭಿಯಾನದಡಿ ದೇಶಾದ್ಯಂತ ಈವರೆಗೆ ಕೋವಿಡ್​ ಲಸಿಕೆಯ 28,00,36,898 ಡೋಸ್​ಗಳನ್ನು ನೀಡಲಾಗಿದೆ. ಇಂದಿನಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೂ ಉಚಿತವಾಗಿ ಕೋವಿಡ್​ ಲಸಿಕೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

Last Updated : Jun 21, 2021, 11:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.