ನವದೆಹಲಿ: ದೇಶದಲ್ಲಿ ಹೊಸದಾಗಿ ಕಾಣಿಸಿಕೊಳ್ಳುವ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿತ್ತು. ಆದರೆ ಇಂದು ಸಾವಿನ ಸಂಖ್ಯೆ ಹೆಚ್ಚಾಗಿದೆ. ಇಂದು ಮೂರೂವರೆ ಲಕ್ಷದ ಸನಿಹಕ್ಕೆ ಕೊರೊನಾ ಪ್ರಕರಣಗಳು ಕಂಡು ಬಂದಿವೆ.
ಹೌದು, ಕಳೆದ 24 ಗಂಟೆಯಲ್ಲಿ 3,47,254 ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ, ಕಳೆದ 24 ಗಂಟೆಗಳಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ. ಒಂದು ದಿನದಲ್ಲಿ 703 ಮಂದಿ ಕೋವಿಡ್ನಿಂದ ಸಾವನ್ನಪ್ಪಿದ್ದು, 2,51,777 ಸೋಂಕಿನಿಂದ ಗುಣಮುಖರಾಗಿದ್ದಾರೆ.
ಓದಿ: ಬಾಲಿವುಡ್ ಡ್ಯಾನ್ಸ್ ಕಿಂಗ್ ರೆಮೋ ಡಿಸೋಜಾ ಸೋದರ ಮಾವ ಆತ್ಮಹತ್ಯೆಗೆ ಶರಣು!
ದೇಶದಲ್ಲಿ ಒಟ್ಟು ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 9,692ಕ್ಕೆ ಏರಿಕೆ ಕಂಡಿದೆ. ಇನ್ನು ದಿನವೊಂದಕ್ಕೆ ಒಮಿಕ್ರಾನ್ ಸೋಂಕು ಕಾಣಿಸಿಕೊಳ್ಳುವವರ ಪ್ರಮಾಣ ಶೇಕಡಾ 4.36ರಷ್ಟಿದೆ.
ವ್ಯಾಕ್ಸಿನೇಷನ್: ಈವರೆಗೆ ಸುಮಾರು 160 ಕೋಟಿ ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ