ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 34,457 ಹೊಸ ಕೋವಿಡ್ ಕೇಸ್ಗಳು ಪತ್ತೆಯಾಗಿದ್ದು, ಶುಕ್ರವಾರ ಒಂದೇ ದಿನ 375 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲೀಗ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3,23,93,286ಕ್ಕೆ ಏರಿಕೆಯಾಗಿದ್ದು, ಈವರೆಗೆ ಒಟ್ಟು 4,33,964 ಮಂದಿ ಮೃತಪಟ್ಟಿದ್ದಾರೆ.
ಶೇ.97.54ರಷ್ಟು ಮಂದಿ ಗುಣಮುಖ
ಇಲ್ಲಿಯವರೆಗೆ 3,15,97,982 ಮಂದಿ ಮಾರಣಾಂತಿಕ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದ ಚೇತರಿಕೆ ಪ್ರಮಾಣ ಶೇ.97.54ಕ್ಕೆ ಹೆಚ್ಚಳವಾಗಿದೆ. ಉಳಿದಂತೆ 3,61,340 ಪ್ರಕರಣಗಳು ಮಾತ್ರ ಸಕ್ರಿಯವಾಗಿದೆ. 151 ದಿನಗಳ ಬಳಿಕ ಆ್ಯಕ್ಟಿವ್ ಕೇಸ್ಗಳ ಸಂಖ್ಯೆ ಶೇ.1.12ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ವಿಶ್ವದ ಮೊದಲ DNA ಲಸಿಕೆ: Zydus Cadila 3 ಡೋಸ್ ತುರ್ತು ಬಳಕೆಗೆ ಅನುಮೋದನೆ
57.61 ಕೋಟಿ ಡೋಸ್ ವ್ಯಾಕ್ಸಿನೇಷನ್
ಜನವರಿಯಿಂದ ದೇಶಾದ್ಯಂತ ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನ ಆರಂಭವಾಗಿದ್ದು, ಇಲ್ಲಿಯವರೆಗೆ ಒಟ್ಟು 52.36 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
12 ವರ್ಷ ಮೇಲ್ಪಟ್ಟವರಿಗಾಗಿ ಲಸಿಕೆ
ಝೈಡಸ್ ಕ್ಯಾಡಿಲಾ ಸಂಸ್ಥೆಯ 3 ಡೋಸ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಭಾರತದ ಉನ್ನತ ಔಷಧ ಪ್ರಾಧಿಕಾರದ ತಜ್ಞರ ಸಮಿತಿ ಅನುಮೋದನೆ ನೀಡಿದೆ. Zy CoV-D ವಿಶ್ವದ ಮೊದಲ ಡಿಎನ್ಎ ಲಸಿಕೆಯಾಗಿದ್ದು, 12 ವರ್ಷ ಮೇಲ್ಪಟ್ಟವರಿಗಾಗಿ ಅಭಿವೃದ್ಧಿ ಮಾಡಲಾಗಿದೆ. ದೇಶದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದ 6ನೇ ಲಸಿಕೆ ಇದಾಗಿದೆ.