ETV Bharat / bharat

24 ಗಂಟೆಯಲ್ಲಿ 33 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ, ಇದ್ದಕ್ಕಿದ್ದಂತೆ ಮಹಾರಾಷ್ಟ್ರದಲ್ಲಿ ಹೆಚ್ಚಾದ ಸೋಂಕಿತರು! - ಭಾರತ ಕೋವಿಡ್​ ವರದಿ

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 33 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು, ಡೆಡ್ಲಿ ವೈರಸ್​ಗೆ 123 ಜನರು ಸಾವನ್ನಪ್ಪಿರುವುದರ ಬಗ್ಗೆ ವರದಿಯಾಗಿದೆ.

India reports 33750 fresh COVID cases  India reports fresh COVID cases  India covid report  India omicron report  ಭಾರತದಲ್ಲಿ ಹೊಸದಾಗಿ 33750 ಕೋವಡ್​ ಪ್ರಕರಣಗಳು ಪತ್ತೆ  ದೇಶದಲ್ಲಿ ಹೊಸದಾಗಿ ಕೊರೊನಾ ಪ್ರಕರಣಗಳು ಪತ್ತೆ  ಭಾರತ ಕೋವಿಡ್​ ವರದಿ  ಭಾರತ ಒಮಿಕ್ರಾನ್​ ವರದಿ
ಕಳೆದ 24 ಗಂಟೆಯಲ್ಲಿ 33 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ
author img

By

Published : Jan 3, 2022, 10:04 AM IST

ನವದೆಹಲಿ: ದಿನದಿಂದ ದಿನಕ್ಕೆ ದೇಶಾದ್ಯಂತ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಕಳೆದ 24 ಗಂಟೆಯಲ್ಲಿ 33,750 ಹೊಸ ಕೋವಿಡ್​​ ಸೋಂಕಿತರು ಪತ್ತೆಯಾಗಿದ್ದು, 123 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ದೇಶದಲ್ಲಿ ಸದ್ಯಕ್ಕೆ ಒಟ್ಟು 1,45,582 ಸಕ್ರಿಯ ಪ್ರಕರಣಗಳಿವೆ. ನಿನ್ನೆ 10,846 ಮಂದಿ ಚೇತರಿಸಿಕೊಂಡಿದ್ದು, ಈವರೆಗೆ ದೇಶದಲ್ಲಿ 3,42,95,407 ಸೋಂಕಿತರು ಗುಣಮುಖರಾಗಿದ್ದಾರೆ.

ಕಳೆದೊಂದು ದಿನದಲ್ಲಿ 123 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸಾವನ್ನಪ್ಪಿರುವವರ ಸಂಖ್ಯೆ 4,81,893. ಕಳೆದ ಒಂದೂವರೆ ತಿಂಗಳಿನಿಂದ ಹೊಸ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಮತ್ತೆ ಏರತೊಡಗಿದೆ.

ನಿನ್ನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 3,194 ಹಾಗೂ ಮಹಾರಾಷ್ಟ್ರದಲ್ಲಿ 11,877 , ಕರ್ನಾಟಕದಲ್ಲಿ 1,187 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಆದರೆ ಶೇ.28ರಷ್ಟು ಕೋವಿಡ್​ ಕೇಸ್​ಗಳು ಮಹಾರಾಷ್ಟ್ರದಲ್ಲಿ ಏರಿಕೆ ಕಂಡಿದ್ದು, ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈ ನಡುವೆ ಮಹಾರಾಷ್ಟ್ರದಲ್ಲಿ ಅತೀವೇಗದಿಂದ ಒಮಿಕ್ರಾನ್​ ತನ್ನ ಆಟ ಶುರುಮಾಡಿಕೊಂಡಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ಒಮಿಕ್ರಾನ್ ಸಂಖ್ಯೆ 1,700 ಇದೆ. ಅದರಲ್ಲಿ 639 ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. 510 ಒಮಿಕ್ರಾನ್ ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ, 351 ಪ್ರಕರಣಗಳೊಂದಿಗೆ ದೆಹಲಿ ನಂತರದ ಸ್ಥಾನದಲ್ಲಿದೆ. ಇದುವರೆಗೆ ಕರ್ನಾಟಕದಲ್ಲಿ 76 ಒಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.