ETV Bharat / bharat

ದೇಶದಲ್ಲಿ ನಿನ್ನೆ 3.26 ಲಕ್ಷ ಹೊಸ ಕೋವಿಡ್​ ಕೇಸ್: 3,890 ಮಂದಿ ಸಾವು - ಕೊರೊನಾ ಲಸಿಕೆ

ಶುಕ್ರವಾರ ಭಾರತದಲ್ಲಿ 3,26,098 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಕರ್ನಾಟಕದಲ್ಲೇ 41,779 ಕೇಸ್​ಗಳು ಪತ್ತೆಯಾಗಿವೆ.

India reports 3,26,098 new covid cases, 3,890 deaths in last 24 hours
ದೇಶದಲ್ಲಿ ನಿನ್ನೆ 3.26 ಲಕ್ಷ ಹೊಸ ಕೋವಿಡ್​ ಕೇಸ್​, 3,890 ಸಾವು ವರದಿ
author img

By

Published : May 15, 2021, 10:41 AM IST

Updated : May 15, 2021, 12:15 PM IST

ನವದೆಹಲಿ: ಆಕ್ಸಿಜನ್​, ಹಾಸಿಗೆ ಅಭಾವ ಎದುರಿಸುತ್ತಿರುವ ದೇಶದಲ್ಲಿ ಮತ್ತೆ ಹೊಸದಾಗಿ 24 ಗಂಟೆಗಳಲ್ಲಿ 3,26,098 ಕೋವಿಡ್​ ಸೋಂಕಿತರು ಪತ್ತೆಯಾಗಿದ್ದು, 3,890 ಮಂದಿ ವೈರಸ್​​ಗೆ ಬಲಿಯಾಗಿದ್ದಾರೆ.

ಭಾರತದಲ್ಲೀಗ ಕೊರೊನಾ​ ಕೇಸ್​ಗಳ ಸಂಖ್ಯೆ 2,43,72,907 ಹಾಗೂ ಸಾವಿನ ಸಂಖ್ಯೆ 2,66,207ಕ್ಕೆ ಏರಿಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 36,73,802ಕ್ಕೆ ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇನ್ನು ನಿನ್ನೆ 3,53,299 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು, ಗುಣಮುಖರ ಪ್ರಮಾಣ ಶೇ.83.50ಕ್ಕೆ ಏರಿಕೆಯಾಗಿದೆ.

18 ಕೋಟಿ ಮಂದಿಗೆ ಲಸಿಕೆ

ದೇಶಾದ್ಯಂತ ಜನವರಿ 16ರಿಂದ ಕೋವಿಡ್​ ವ್ಯಾಕ್ಸಿನೇಷನ್​ ಆರಂಭವಾಗಿದ್ದಯ. ಇಲ್ಲಿಯವರೆಗೆ 18,04,57,579 ಮಂದಿಗೆ​ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ: ಕೋವಿಡ್​ ಸಂಕಷ್ಟದಲ್ಲಿ ಭಾರತದ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ: ಡಬ್ಲ್ಯೂಹೆಚ್​ಒ ಮುಖ್ಯಸ್ಥ

ಶುಕ್ರವಾರ ಒಂದೇ ದಿನ ಕರ್ನಾಟಕದಲ್ಲಿ 41,779 ಕೇಸ್​ಗಳು ಪತ್ತೆಯಾಗಿದ್ದು, ಮಹಾರಾಷ್ಟ್ರದಲ್ಲಿ 39,923, ಕೇರಳದಲ್ಲಿ 34,694, ತಮಿಳುನಾಡಲ್ಲಿ 31,892, ಆಂಧ್ರ ಪ್ರದೇಶದಲ್ಲಿ 22,018 ಹಾಗೂ ಪಶ್ಚಿಮ ಬಂಗಾಳದಲ್ಲಿ 20,839 ಪ್ರಕರಣಗಳು ವರದಿಯಾಗಿವೆ.

Last Updated : May 15, 2021, 12:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.