ETV Bharat / bharat

ದೇಶದಲ್ಲಿ ಕೊರೊನಾ ಗಣನೀಯ ಇಳಿಕೆ: 3 ಸಾವಿರ ಹೊಸ ಕೇಸ್ ಪತ್ತೆ - ಕೋವಿಡ್​ 19 ವರದಿ

ಭಾರತದಲ್ಲಿ ಕೊರೊನಾ ಸೋಂಕಿನ ಹಾವಳಿ ಕಡಿಮೆಯಾಗಿದೆ. ಕಳೆದೊಂದು ದಿನದಲ್ಲಿ ದೇಶದಲ್ಲಿ 3,116 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, 47 ಮಂದಿ ಸಾವನ್ನಪ್ಪಿದ್ದಾರೆ..

covid
covid
author img

By

Published : Mar 13, 2022, 10:57 AM IST

ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ ಕಾಣುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ 3,116 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,29,90,991ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದೊಂದು ದಿನದಲ್ಲಿ 5,559 ಜನರು ಸೋಂಕಿನಿಂದ ಗುಣಮುಖರಾಗುವ ಮೂಲಕ ದೇಶದಲ್ಲಿ ಒಟ್ಟಾರೆ 4,24,37,072 ಮಂದಿ ಪೂರ್ಣ ಚೇತರಿಸಿಕೊಂಡಂತಾಗಿದೆ. ಭಾರತದಲ್ಲಿ ಗುಣಮುಖರಾಗಿರುವವರ ಪ್ರಮಾಣ ಶೇಕಡಾ 98.71 ರಷ್ಟಿದೆ.

ಕೊರೊನಾ ಸೋಂಕಿತರ ಮಾಹಿತಿ
ಕೊರೊನಾ ಸೋಂಕಿತರ ಮಾಹಿತಿ

ನಿನ್ನೆ 47 ಮಂದಿ ಕೊರೊನಾಗೆ ಬಲಿಯಾಗುವ ಮೂಲಕ ಈವರೆಗೆ ದೇಶದಲ್ಲಿ ಸುಮಾರು 5,15,850 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ದೇಶದಲ್ಲೀಗ ಶೇ.1.20 ರಷ್ಟು ಮಾತ್ರ ಡೆತ್​ರೇಟ್​ ಇದೆ. ಇನ್ನು ಸಕ್ರಿಯ ಸೋಂಕಿತರ ಸಂಖ್ಯೆ 38,069 ಮಾತ್ರ ಇದ್ದು, ಪಾಸಿಟಿವಿಟಿ ರೇಟ್​ ಶೇ.0.09 ರಷ್ಟು ಇದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ವ್ಯಾಕ್ಸಿನೇಷನ್​: ದೇಶದಲ್ಲಿ ಈವರೆಗೆ ಸುಮಾರು 1,80,13,23,547 ಕೋಟಿ ಡೋಸ್​ ವ್ಯಾಕ್ಸಿನೇಷನ್ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.