ನವದೆಹಲಿ: ಕಳೆದ ಹಲವು ತಿಂಗಳುಗಳಿಂದ ಇದೇ ಮೊದಲ ಬಾರಿಗೆ ಕೋವಿಡ್ ಪ್ರಕರಣಗಳು ಕೊಂಚ ತಗ್ಗಿವೆ. ಹೊಸದಾಗಿ 26,115 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 3,35,04,534 ಕ್ಕೇರಿದೆ.
ಕಳೆದ 24 ಗಂಟೆಗಳಲ್ಲಿ 34,469 ಜನರು ಗುಣಮುಖರಾಗಿದ್ದು, ಈವರೆಗೆ 3,27,49,574 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸಾವಿನ ಪ್ರಮಾಣವೂ ಕೊಂಚ ತಗ್ಗಿದ್ದು, ನಿನ್ನೆ ವೈರಸ್ನಿಂದ 252 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 4,45,385 ಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್ 20 ರಂದು 96,46,778 ಕೋವಿಡ್ ವ್ಯಾಕ್ಸಿನ್ ಡೋಸ್ಗಳನ್ನು ಹಾಕಲಾಗಿದ್ದು, ಒಟ್ಟಾರೆಯಾಗಿ 81,85,13,827 ಲಸಿಕೆ ಡೋಸ್ಗಳನ್ನು ನೀಡಲಾಗಿದೆ.
ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ತಪಾಸಣೆ ತೀವ್ರಗೊಳಿಸಿದ್ದು, ನಿನ್ನೆ 14,13,951 ಸ್ಯಾಂಪಲ್ಗಳನ್ನು ಪರೀಕ್ಷೆ ಮಾಡಲಾಗಿದೆ. ಈವರೆಗೆ 55,50,35,717 ಗಂಟಲು ದ್ರವ ಮಾದರಿಗಳನ್ನು ತಪಾಸಣೆಗೊಳಪಡಿಸಲಾಗಿದೆ ಎಂದು ಭಾರತೀಯ ವೈದ್ಯೈಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.